ಬೆಳ್ಳಂಬೆಳಗ್ಗೆ ಅಭಿಮಾನಿಗಳಿಗೆ ಗುಡ್‍ನ್ಯೂಸ್ ನೀಡಿದ್ರು ಕಿಚ್ಚ

Public TV
1 Min Read
SUDEEP 2

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಬೆಳ್ಳಂಬೆಳಗ್ಗೆ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ತಮ್ಮ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್ ಕುರಿತು ಸಿಹಿ ಸುದ್ದಿ ನೀಡಿದ್ದಾರೆ.

ಹೌದು, ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಕ್ರೇಜ್ ಹುಟ್ಟಿಸಿದೆ. ತನ್ನ ಮೊದಲ ಪೋಸ್ಟರ್ ಮೂಲಕವೇ ಸುದ್ದಿಯಲ್ಲಿದ್ದ ಪೈಲ್ವಾನ್ ಚಿತ್ರದ ಕುರಿತು ಈಗ ಕಿಚ್ಚ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದಾರೆ.

pailwaan

ಪೋಸ್ಟ್‍ನಲ್ಲಿ, ಪೈಲ್ವಾನ್ ಚಿತ್ರದ ಮೊದಲ ಟೀಸರ್ ಕುರಿತು ತಿಳಿಸಲು ತುಂಬ ಖುಷಿಯಾಗುತ್ತಿದೆ. ಕನ್ನಡದಲ್ಲಿ ಮೂಡಿ ಬರುತ್ತಿರೋ ಪೈಲ್ವಾನ್ ಚಿತ್ರದ ಮೊದಲ ಟೀಸರ್ ಜನವರಿ 15ರಂದು ಸಂಜೆ 4.45ಕ್ಕೆ ಬಿಡುಗಡೆಯಾಗಲಿದೆ. ಪೈಲ್ವಾನ್‍ನ ಜಗತ್ತು ಹೇಗಿರುತ್ತೆ ಅಂತ ನೋಡಿ. ಪೈಲ್ವಾನ್ ಚಿತ್ರ ತಂಡಕ್ಕೆ ನಾನು ಶುಭಾಷಯ ತಿಳಿಸುತ್ತೇನೆ ಎಂದು ಚಿತ್ರದ ನಿರ್ದೇಶಕ ಗಜಕೇಸರಿ ಕೃಷ್ಣ, ಅರ್ಜುನ್ ಜನ್ಯ ಹಾಗೂ ಚಿತ್ರದ ಇತರೇ ಸದಸ್ಯರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

sudeep pailwan

ಕಟ್ಟುಮಸ್ತಾದ ಕುಸ್ತಿಪಟುವಿನ ಪಾತ್ರದಲ್ಲಿ ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಯಾವ ಸಿನಿಮಾದಲ್ಲೂ ಸುದೀಪ್ ತಮ್ಮ ಶರ್ಟ್ ತೆಗೆದಿರಲಿಲ್ಲ. ಮೊದಲ ಬಾರಿಗೆ ಪೈಲ್ವಾನ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಂಡಿರುವ ಕಿಚ್ಚನ ಹೊಸ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

sudeep 3

ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸುದೀಪ್ ಅಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರಂತೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

ಮೊದಲ ಪೋಸ್ಟರ್ ಮೂಲಕವೇ ಕ್ರೇಜ್ ಹುಟ್ಟಿಸಿದ್ದ ಪೈಲ್ವಾನ್ ಚಿತ್ರ, ಈಗ ಮೊದಲ ಟೀಸರ್ ಮೂಲಕ ಧೂಳೆಬ್ಬಿಸಲು ಸಜ್ಜಾಗಿದೆ. ಬೆಳ್ಳಂಬೆಳಗ್ಗೆ ಕಿಚ್ಚನ ಕೊಟ್ಟ ಸಿಹಿ ಸುದ್ದಿಗೆ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *