ಅಭಿಮಾನಿಗಳ ಜೊತೆಗೆ ಈ ಬಾರಿ ನಡೆಯಲಿದೆ ಕಿಚ್ಚನ ಬರ್ತ್ ಡೇ!

Public TV
1 Min Read
SUDEE

ಈಗ್ಗೆ ಎರಡು ವರ್ಷಗಳಿಂದ ತಮ್ಮ ಹುಟ್ಟು ಹಬ್ಬದ ಆಚರಣೆಯ ವಿಚಾರದಲ್ಲಿ ತಟಸ್ಥರಾಗಿದ್ದವರು ಕಿಚ್ಚ ಸುದೀಪ್. ಕಳೆದ ಸಾರಿಯಂತೂ ತಮ್ಮ ಬರ್ತ್ ಡೇಗೆ ಖರ್ಚು ಮಾಡೋ ಕಾಸಿನಲ್ಲಿ ಕೈಲಾಗದವರಿಗೆ ಏನಾದರೂ ಸಹಾಯ ಮಾಡುವಂತೆ ತಮ್ಮ ಅಭಿಮಾನಿಗಳನ್ನು ವಿನಂತಿಸಿದ್ದ ಕಿಚ್ಚ ತಮ್ಮ ಕೆಲಸ ಕಾರ್ಯಗಳಲ್ಲಿ ಮುಳುಗಿ ಹೋಗಿದ್ದರು. ಆದರೆ ಈ ಸಲ ಮಾತ್ರ ಸುದೀಪ್ ಅಭಿಮಾನಿಗಳ ದೃಷ್ಟಿಯಿಂದ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದಾರೆ.

ಸೆಪ್ಟೆಂಬರ್ ಎರಡನೇ ತಾರೀಕಿನಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬವಿದೆ. ಇದೀಗ ಈ ವಿಚಾರವಾಗಿ ಒಂದು ನಿಲುವಿಗೆ ಬಂದಿರೋ ಕಿಚ್ಚ ಅಭಿಮಾನಿಗಳ ಮಧ್ಯದಲ್ಲಿಯೇ ಬರ್ತ್ ಡೇ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

kichcha sudeep

ಆದರೆ, ಈ ಬಾರಿಯೂ ಕೂಡಾ ಬರ್ತ್ ಡೇ ವಿಚಾರವಾಗಿ ಕಿಚ್ಚ ಅಭಿಮಾನಿಗಳಿಗೆ ಒಂದಷ್ಟು ಷರತ್ತುಗಳನ್ನು ವಿಧಿಸಿದ್ದಾರೆ. ಅದರ ಪ್ರಕಾರ ಶುಭ ಹಾರೈಸಲು ಬರುವ ಯಾವ ಅಭಿಮಾನಿಗಳೂ ಹಾರ ತುರಾಯಿ, ಕೇಕು, ಹೂ ಮುಂತಾದವುಗಳನ್ನು ತರುವಂತಿಲ್ಲ. ಅದಕ್ಕೆ ಖರ್ಚು ಮಾಡೋ ಕಾಸನ್ನು ಸಮಾಜಮುಖಿ ಕೆಲಸಕ್ಕೇ ಬಳಸುವಂತೆ ಕಿಚ್ಚ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಅತ್ತೆಗೆ ಶುಭಾಶಯ ಕೋರಿದ ಪ್ರಿಯಾ ಸುದೀಪ್

KICHCHA

ಈ ಕಂಡೀಷನ್ನನ್ನು ಈ ಎರಡು ವರ್ಷಗಳಲ್ಲಿಯೂ ಸುದೀಪ್ ಅಭಿಮಾನಿಗಳು ಅನುಸರಿಸಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ನೆರವು ನೀಡಿದ್ದಾರೆ. ಆದರೆ ಈ ಸಲ ಕಿಚ್ಚ ತಮ್ಮ ಜೊತೆಗೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮನಸು ಮಾಡಿದ್ದರಿಂದಾಗಿ ಅಭಿಮಾನಿಗಳೆಲ್ಲ ಖುಷಿಗೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

PRIYA SUDEEP

Share This Article
Leave a Comment

Leave a Reply

Your email address will not be published. Required fields are marked *