ಬೆಂಗಳೂರು: ಸ್ಯಾಂಡಲ್‍ವುಡ್ ಬಹು ನಿರೀಕ್ಷಿತ ‘ದಿ-ವಿಲನ್’ ಚಿತ್ರ ವಿಶ್ವದ್ಯಾಂತ ಯಶಸ್ಸು ಕಾಣುತ್ತಿದೆ. ಸದ್ಯ ಕಿಚ್ಚ ಸುದೀಪ್ ದಿ-ವಿಲನ್ ಚಿತ್ರ ವೀಕ್ಷಿಸಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದಿದ್ದಾರೆ.
ಕಿಚ್ಚ ಸುದೀಪ್ ದಿ-ವಿಲನ್ ಸಿನಿಮಾ ನೋಡಿದ ಅಭಿಮಾನಿಗಳಿಗೆ ತಮ್ಮ ಗೂಗಲ್ ಪ್ಲಸ್ ಪತ್ರವನ್ನು ಬರೆದು ಟ್ವಿಟ್ಟರಿನಲ್ಲಿ ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
Many Thanks n Much Luv. https://t.co/y2SIoA03J8
— Kichcha Sudeepa (@KicchaSudeep) October 23, 2018
ಪತ್ರದಲ್ಲಿ ಏನಿದೆ?
ನನ್ನ ಎಲ್ಲ ಅಭಿಮಾನಿ ಸ್ನೇಹಿತರೇ, ಅಭಿಮಾನಿ ಸಂಘಗಳ ಸದಸ್ಯರು ಹಾಗೂ ಮುಖ್ಯಸ್ಥರೇ, ನಿಮ್ಮೆಲ್ಲರಿಗೂ ನನ್ನ ಪ್ರೀತಿಯ ಅಪ್ಪುಗೆ. ಇದು ನೀವೆಲ್ಲರೂ “ದಿ ವಿಲನ್” ಚಿತ್ರವನ್ನು ಉದಾರವಾಗಿ ಬರಮಾಡಿಕೊಂಡಿದಕ್ಕೆ, ಶಿವಣ್ಣ ಹಾಗೂ ಪ್ರೇಮ್ ರವರ ಮೇಲೆ ತೋರಿಸಿದ ಪ್ರೀತಿಗಾಗಿ, ಚಿತ್ರದ ಎರಡೂ ನಾಯಕ ನಟರ ಮೇಲೆ ಸಮನಾದ ಆದರ ವ್ಯಕ್ತಪಡಿಸಿದ್ದಕ್ಕೆ ಮತ್ತು ಚಿತ್ರಮಂದಿರಗಳಲ್ಲಿ ಶಾಂತಿಯನ್ನು ಕಾಪಾಡಿಕೊಂಡಿದ್ದಕ್ಕೆ.
ನಾನು ನಿಮ್ಮೆಲ್ಲರ ಮನಸಿನಲ್ಲಿ ನೆಲೆಸಿದ್ದೇನೆ. ಆದ್ದರಿಂದಲೇ ನೀವು ಈ ಚಿತ್ರಕ್ಕೆ ಸ್ಪಂದಿಸಿದ ರೀತಿಯಲ್ಲಿ ನನ್ನದೇ ಪ್ರತಿಬಿಂಬ ಕಾಣುತಿದ್ದೇನೆ. ನನ್ನನ್ನು ಹೆಮ್ಮೆಪಡುವಂತೆ ಮಾಡಿದ ನನ್ನ ಕುಟುಂಬದ ಸದಸ್ಯರೇ ಆದ ನಿಮ್ಮ ಪ್ರತಿಯೊಬ್ಬರಿಗೂ ನಾನು ಎಂದೆಂದಿಗೂ ಚಿರಋಣಿ. ನಿಮ್ಮ ಕಿಚ್ಚ ಎಂದು ಬರೆದಿದ್ದಾರೆ.
ಸದ್ಯ ದಿ ವಿಲನ್ ಚಿತ್ರ ನೋಡಲು ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಹೌಸ್‍ಫುಲ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿದ್ದು, ಚಿತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv