ಶಿವಣ್ಣನ 60ನೇ ಹುಟ್ಟುಹಬ್ಬಕ್ಕೆ ಚಿತ್ರತಂಡದ ಪ್ರೀತಿಯ ಉಡುಗೊರೆ. ಜುಲೈ 12 ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರ 60ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಖ್ಯಾತ ನಟ ಶ್ರೀನಿ ನಿರ್ದೇಶನದಲ್ಲಿ ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸಲಿರುವ “ಘೋಸ್ಟ್” ಚಿತ್ರದ ಪೋಸ್ಟರ್ ಬಿಡುಗಡೆಯಾಗಲಿದೆ.
Advertisement
“ಕಿಂಗ್ ಆಫ್ ಆಲ್ ಮಾಸಸ್” ಎಂಬ ಈ ವಿಭಿನ್ನ ಪೋಸ್ಟರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಬಿಡುಗಡೆ ಮಾಡಲಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ 29 ನೇ ಚಿತ್ರವಿದು. ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುತ್ತಿದ್ದಾರೆ. ಸಂದೇಶ್ ಎನ್ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಮಹೇಂದ್ರ ಸಿಂಹ ಈ ಚಿತ್ರದ ಛಾಯಾಗ್ರಾಹಕರು. ಆಗಸ್ಟ್ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ. ಇದನ್ನೂ ಓದಿ:ಟ್ವೀಟರ್‌ನಲ್ಲಿ ಯಶ್ ಹೆಸರು ಟ್ರೇಂಡಿಂಗ್: ಯಶ್ 19ನೇ ಚಿತ್ರದ ಅಪ್‌ಡೇಟ್ ಇಲ್ಲಿದೆ
Advertisement
Advertisement
ಈ ಹುಟ್ಟು ಹಬ್ಬದ ದಿನದಂದು ಶಿವರಾಜ್ ಕುಮಾರ್ ಅವರ ಇನ್ನೊಂದು ಹೊಸ ಸಿನಿಮಾದ ಮುಹೂರ್ತ ನಡೆಯಲಿದೆ. ಅಲ್ಲದೇ, ಅವರದ್ದೇ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ವೇದ ಸಿನಿಮಾದ ಟೀಸರ್ ರಿಲೀಸ್ ಆಗಿದೆಯಂತೆ. ಅಲ್ಲದೇ, ಶಿವರಾಜ್ ಕುಮಾರ್ ಅವರ ಇನ್ನೂ ಅನೇಕ ಚಿತ್ರಗಳ ಪೋಸ್ಟರ್ ಕೂಡ ಅಂದು ರಿಲೀಸ್ ಆಗುತ್ತಿವೆ.