ಬಿಗ್ ಬಾಸ್ ಮನೆಯ ಆಟ ಅಷ್ಟು ಸುಲಭವಿಲ್ಲ. ಸ್ಪರ್ಧಿಗಳ ಮೇಲೆ 24 ಗಂಟೆಯೂ ಕ್ಯಾಮೆರಾ ಕಣ್ಣಿಟ್ಟಿರುತ್ತದೆ. ಪ್ರತಿ ಸ್ಪರ್ಧಿಗಳ ಮೇಲೆ ಬಿಗ್ ಬಾಸ್ ನಿಗಾ ವಹಿಸುತ್ತಾರೆ. ಇನ್ನು ದಾರಿ ತಪ್ಪಿದರೆ ಅಂತಹ ಸ್ಪರ್ಧಿಗೆ ಸುದೀಪ್ ಅವರು ಎಚ್ಚರಿಕೆ ನೀಡುತ್ತಾರೆ. ಈ ವಾರ ಕೂಡ ಹಾಗೆಯೇ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿರುವ ಸೋನು, ಬಿಗ್ ಬಾಸ್ ಮನೆಯಲ್ಲಿರುವ ರೀತಿ ಸುದೀಪ್‌ಗೆ ಇಷ್ಟ ಆಗಿಲ್ಲ. ಸೋನು ಮಾಡಿದ ಎಲ್ಲ ತಪ್ಪುಗಳನ್ನು ಮುಲಾಜಿಲ್ಲದೇ ಸುದೀಪ್, ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮನೆಯಲ್ಲಿ ಬಿಗ್ ಬಾಸ್ ನೀಡಿದ ಆದೇಶಗಳಿಗೆ ಸೋನು ಗೌಡ ಅವರು ಗೌರವ ನೀಡಿಲ್ಲ.ಇನ್ನು ಬಿಗ್ ಬಾಸ್‌ಗೆ ಆವಾಜ್ ಹಾಕುವ ರೀತಿಯಲ್ಲಿ ಅವರು ನಡೆದುಕೊಂಡಿದ್ದಾರೆ. ನಿಮ್ಮ ಮಾತುಗಳು ಕ್ಯೂಟ್ ಆಗಿ ಇರಲಿಲ್ಲ. ನಿಮ್ಮ ಮಾತು ಬಿಗ್ ಬಾಸ್‌ಗೆ ಅವಮಾನ ಮಾಡುವ ರೀತಿಯಲ್ಲಿ ಇತ್ತು. ಇನ್ಮುಂದೆ ನಿಮಗೆ ಬಿಗ್ ಬಾಸ್ ಆದೇಶವೇ ನೀಡುವುದಿಲ್ಲ ಎಂದುಕೊಳ್ಳಿ ಅಂತ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಮನೆಯಲ್ಲಿ ಅಡುಗೆ ಮಾಡುವುದು ಮುಖ್ಯ ಕೆಲಸ. ಎಲ್ಲರೂ ಅಡುಗೆ ಕೆಲಸದಲ್ಲಿ ಭಾಗಿಯಾದರೆ ಒಳ್ಳೆಯದು. ಆದರೆ ಸೋನು ಅವರು ಅಡುಗೆ ವಿಚಾರದಲ್ಲಿ, ಅಡುಗೆ ಮಾಡಲು ಬಂದರು ಕೂಡ ಕಳ್ಳಾಟ ಆಡಿದ್ದಾರೆ. ತಮಗೆ ಅಡುಗೆ ಬರುತ್ತದೆ ಎಂಬ ವಿಚಾರವನ್ನು ಅವರು ಮುಚ್ಚಿಟ್ಟಿದ್ದರು. ಇದನ್ನು ಗಮನಿಸಿದ ಕಿಚ್ಚ ಅವರು ನೇರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸೋನು ಗೌಡ ಅವರು ಮಾತನಾಡುವಾಗ ಪದೇ ಪದೇ ಉಗಿಯುತ್ತಾರೆ. ಇನ್ನು ರಾಕೇಶ್ ಅಡಿಗ ಜತೆ ಸೋನು ನಡೆದುಕೊಂಡಿರುವ ರೀತಿಯನ್ನ ಸುದೀಪ್ ಪ್ರಶ್ನಿಸಿದ್ದಾರೆ. ಮಾಡಿದ ತಪ್ಪುಗಳನ್ನು ವಾರದ ಪಂಚಾಯಿತಿಯಲ್ಲಿ ಎಲ್ಲರ ಎದುರು ಒಪ್ಪಿಕೊಂಡು ಸೋನು ಗೌಡ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ:ಸಾನ್ಯ ಅಯ್ಯರ್ ಮುಂದೆ ಮನದ ಮಾತು ಬಿಚ್ಚಿಟ್ಟ ರೂಪೇಶ್ ಶೆಟ್ಟಿ
ಒಟ್ನಲ್ಲಿ ಸೋನು ಅವತಾರಕ್ಕೆ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೋನು ಜತೆ ಇತರರಿಗೂ ಮಾತಿನ ಛಾಟಿ ಬೀಸಿದ್ದಾರೆ. ಕಿಚ್ಚನ ಖಡಕ್ ಕ್ಲಾಸ್ ನಂತರ ಇನ್ಮುಂದೆ ಆದರೂ ಸೋನು ತಮ್ಮ ನಡೆ ಮತ್ತು ಮಾತಿನಲ್ಲಿ ಬದಲಾವಣೆ ತರುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.