ಮುಂಬೈ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಲಿವುಡ್‍ಗೆ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.
ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ನಟನೆಯ ‘ದಬಾಂಗ್’ ಹಾಗೂ ‘ದಬಾಂಗ್-2’ ಚಿತ್ರ ಹಿಟ್ ಆಗಿತ್ತು. ಈಗ ಸಲ್ಮಾನ್ ನಟನೆಯ ‘ದಬಾಂಗ್ -3’ ಚಿತ್ರ ಬರುತ್ತಿದ್ದು, ಈ ಚಿತ್ರದಲ್ಲಿ ಸುದೀಪ್ ಅವರು ಅಭಿನಯ ಮಾಡಬೇಕೆಂದು ಸ್ವತಃ ಸಲ್ಮಾನ್ ಚಿತ್ರತಂಡಕ್ಕೆ ಸಲಹೆ ಕೊಟ್ಟಿದ್ದಾರಂತೆ.
ದಬಾಂಗ್- 3 ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ಕಳೆದ ಎರಡು ದಬಾಂಗ್ ಸೀರಿಸ್‍ನಲ್ಲಿ ಸಲ್ಮಾನ್ ಖಾನ್, ಚುಲ್ ಬುಲ್ ಪಾಂಡೆ ಪಾತ್ರದ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಸಲ್ಮಾನ್‍ಗೆ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಅಭಿನಯಿಸಿದ್ದರು.
ಈ ಹಿಂದೆ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಸುದೀಪ್ ಟೈಗರ್ ಜಿಂದಾ ಹೈ ಚಿತ್ರದಲ್ಲಿ ನಟಿಸಿರಲಿಲ್ಲ.
ಸದ್ಯ ಕಿಚ್ಚ ಸುದೀಪ್ ಈಗ ದಿ ವಿಲನ್, ಪೈಲ್ವಾನ್, ಕೋಟಿಗೊಬ್ಬ-3 ಸಿನಿಮಾಗಳ ಚಿತ್ರೀಕಣದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ದಬಾಂಗ್- 3 ಚಿತ್ರದ ಶೂಟಿಂಗ್‍ನಲ್ಲಿ ಯಾವಾಗ ಭಾಗಿಯಾಲಿದ್ದಾರೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ ನೀಡಿಲ್ಲ. ಈ ಚಿತ್ರವನ್ನು ಪ್ರಭುದೇವ ನಿರ್ದೇಶನ ಮಾಡುತ್ತಿದ್ದು, ಸಲ್ಮಾನ್ ಖಾನ್ ಸಹೋದರ ಸೋಹಲ್ ಖಾನ್ ನಿರ್ಮಾಣದಲ್ಲಿ ಚಿತ್ರ ಮೂಡಿಬರಲಿದೆ.
ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಕಾರಣ ಈ ಚಿತ್ರದಲ್ಲಿ ಸುದೀಪ್ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.