ಶೂಟಿಂಗ್ ಸೆಟ್‍ನಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸುವ ಕೆಲಸ ಮಾಡಿದ್ರು ಕಿಚ್ಚ ಸುದೀಪ್!

Public TV
1 Min Read
kichcha sudeep 2

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಪೈಲ್ವಾನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್‍ನಲ್ಲಿ ಬಿಡುವು ಸಿಕ್ಕಾಗ ಕಿಚ್ಚ ಯಾರೂ ಊಹಿಸದ ಕೆಲಸವನ್ನು ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಶೂಟಿಂಗ್ ಬಿಡುವಿನ ಸಮಯದಲ್ಲಿ ಕಿಚ್ಚ ಸುದೀಪ್ ತಮ್ಮ ಸಿನಿಮಾದ ನಾಯಕಿ ಆಕಾಂಕ್ಷಾ ಸಿಂಗ್ ಅವರ ಕ್ಯಾಂಡಿಡ್ ಫೋಟೋವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಕಿಚ್ಚ ಸುದೀಪ್ ತನ್ನ ಮೊಬೈಲಿನಲ್ಲಿ ಹಿಡಿದ ಫೋಟೋವನ್ನು ನಟಿ ಆಕಾಂಕ್ಷ ಸಿಂಗ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿ ಆಕಾಂಕ್ಷಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಸುದೀಪ್ ಹಿಡಿದ ಫೋಟೋವನ್ನು ಹಾಕಿ ಅದಕ್ಕೆ “ನೀವು ನಿಮ್ಮ ಫೋನಿನಲ್ಲಿ ಬ್ಯುಸಿ ಇದ್ದಾಗ ನಿಮ್ಮ ಸಹ ನಟ ತೆಗೆದ ಕ್ಯಾಂಡಿಡ್ ಫೋಟೋ. ಧನ್ಯವಾದ ಕಿಚ್ಚ ಸುದೀಪ್” ಎಂದು ಪೋಸ್ಟ್ ಹಾಕಿದ್ದಾರೆ.

33112180 2098456270182809 9214733775290761216 n

ಸುದೀಪ್ ಸಿನಿಮಾ ಸೆಟ್‍ನಲ್ಲಿ ಫೋಟೋ ಕ್ಲಿಕ್ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ‘ದಿ-ವಿಲನ್’ ಸಿನಿಮಾ ಶೂಟಿಂಗ್ ಸೆಟ್‍ನಲ್ಲಿಯೂ ಬ್ರಿಟನ್ ಬ್ಯೂಟಿ ಏಮಿ ಜಾಕ್ಸನ್ ಫೋಟೋಗಳನ್ನ ಸೆರೆ ಹಿಡಿದಿದ್ದರು.

ಚಿಕ್ಕಮಗಳೂರಿನಲ್ಲಿ ಶೂಟಿಂಗ್‍ಗೆ ಹೋದಾಗ ಏಮಿ ಎಳೆನೀರು ಕುಡಿಯೋದರಲ್ಲಿ ಬ್ಯುಸಿಯಾಗಿದ್ದರು. ಆ ವೇಳೆ ಕಿಚ್ಚ ಸುದೀಪ್ ಏಮಿ ಜಾಕ್ಸನ್ ಫೋಟೋವನ್ನು ಕ್ಲಿಕ್ಕಿಸಿದ್ದರು. ಸುದೀಪ್ ತನ್ನ ಚಿತ್ರದ ನಟಿಯರ ಫೋಟೋ ಹಿಡಿಯುವುದು ನಟಿಯರಿಗೆ ಗೊತ್ತಾಗುವುದಿಲ್ಲ. ನಟಿಯರ ಕ್ಯಾಂಡಿಡ್ ಫೋಟೋ ತೆಗೆದು ನಂತರ ಅವರಿಗೆ ಸರ್ಪ್ರೈಸ್ ನೀಡುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *