– ನನ್ನ ಕೆಲಸವನ್ನು ಇಷ್ಟಪಡುತ್ತೇನೆ
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಎಲ್ಲಿ ಹೋದರೂ ಜನ ನನ್ನನ್ನು ಪ್ರೀತಿಸುತ್ತಾರೆ. ನನಗೆ ಅಷ್ಟೇ ಸಾಕು ಎಂದು ಹೇಳುವ ಮೂಲಕ ಸ್ಟಾರ್‌ಡಮ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರೀತಿಗೂ ಸ್ಟಾರ್‌ಡಮ್ ಗೂ ಬಹಳ ವ್ಯತ್ಯಾಸ ಇದೆ. ನಾನು ಎಲ್ಲಿಯೇ ಹೋದರು ಜನರು ಪ್ರೀತಿಯಿಂದ ನನ್ನನ್ನು ನೋಡುತ್ತಾರೆ. ನನಗೆ ಅಷ್ಟೇ ಸಾಕು. ನನಗೆ ಸ್ಟಾರ್‌ಡಮ್ ಮೇಲೆ ನಂಬಿಕೆ ಇಲ್ಲ. ನಾವೆಲ್ಲರೂ ಫ್ಲಾಪ್ ಸಿನಿಮಾ ಕೊಟ್ಟಿದ್ದೇವೆ. ನಮ್ಮ ಸಿನಿಮಾಗಳು ಲಾಸ್ ಆಗಿದೆ. ಹೀಗಿರುವಾಗ ಸ್ಟಾರ್‌ಡಮ್ ಹೇಗೆ ಆಗುತ್ತದೆ ಎಂದಿದ್ದಾರೆ. ಇದನ್ನು ಓದಿ: ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್
Advertisement
Advertisement
ಅಲ್ಲದೆ ನಮ್ಮ ಸಿನಿಮಾ ಕೈ ಹಿಡಿದಿದೆ, ಅದನ್ನು ಅನುಭವಿಸೋಣ. ಎಷ್ಟೋ ಜನ ಒಂದು ಚಿತ್ರದಲ್ಲಿ ಕಲಾವಿದ ಆಗೋಣ ಎಂದು ಪರದಾಡುತ್ತಿರುವಾಗ ಇಷ್ಟು ವರ್ಷ ನಮಗೆ ಚಿತ್ರರಂಗ ಕರೆದುಕೊಂಡು ಬಂದಿದೆ ಅಂದರೆ ಅದನ್ನು ನಾವು ಅನುಭವಿಸಬೇಕು. ಅದನ್ನು ಬಿಟ್ಟು ಸ್ಟಾರ್‌ಡಮ್ ಇಟ್ಟುಕೊಂಡು ಏನೂ ಮಾಡೋಣ. ಇಡೀ ದೇಶಕ್ಕೆ ನಮ್ಮ ಗುರುತು ಸಿಕ್ಕಿದೆ ಅಂದರೆ ಅದು ನಮ್ಮ ಅದೃಷ್ಟ ಎಂದು ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್
Advertisement
Advertisement
ಬೇರೆ ಭಾಷೆಯಲ್ಲಿ ಪೋಷಕ ನಟನಾಗಿ ಜನರ ಮುಂದೆ ಹೋಗಿದ್ದೇನೆ. ‘ಈಗ’ ಸಿನಿಮಾದಲ್ಲಿ ಖಳನಾಯಕನಾಗಿ, ‘ಸೈರಾ’ ಸಿನಿಮಾದಲ್ಲಿ ಬೇರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೆ ಒಳ್ಳೆಯ ಪಾತ್ರ ಅಥವಾ ಒಳ್ಳೆಯ ವ್ಯಕ್ತಿ ಜೊತೆ ನಟಿಸಲು ಅವಕಾಶ ಸಿಕ್ಕರೆ ನಾನು ಮಾಡುತ್ತೇನೆ. ನಾನು ನನ್ನ ಕೆಲಸವನ್ನು ಇಷ್ಟಪಡುತ್ತೇನೆ. ನಾನು ಸುದೀಪ್, ನಾನು ಈ ಪಾತ್ರ ಮಾಡಲ್ಲ ಎಂದರೆ ಆಗ ತೊಂದರೆ ಆಗುತ್ತದೆ. ಈಗ ‘ದಬಾಂಗ್’ ಚಿತ್ರದಲ್ಲಿ ಫೈಟ್ ಸೀನಿನಲ್ಲಿ ಅವರು ಹೊಡೆಯುತ್ತಾರೆ, ನಾನು ಹೊಡೆಸಿಕೊಳ್ಳುತ್ತೇನೆ. ಇಲ್ಲಿ ನಾವು ಎರಡೇಟು ಹೆಚ್ಚು ಹೊಡೆಯುತ್ತೇವೆ ಎಂದರು. ಇದನ್ನೂ ಓದಿ: ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿ ಬಗ್ಗೆ ಪೈಲ್ವಾನ್ ಪ್ರತಿಕ್ರಿಯೆ
ಹಿಂದಿಯಲ್ಲಿ ಜೀವನಚರಿತ್ರೆಯಲ್ಲಿ ನಟಿಸಲು ಅವಕಾಶ ಬರುತ್ತಿದೆ. ಸದ್ಯ ಈ ಬಗ್ಗೆ ಈಗ ಮಾತುಕತೆ ನಡೆಯುತ್ತಿದೆ. ಹಲವು ಸಿನಿಮಾಗಳ ಅವಕಾಶಗಳು ಬರುತ್ತಿದೆ. ಎಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ಒಂದು ಸಿನಿಮಾ ಮುಗಿದ ಮೇಲೆ ಮತ್ತೊಂದು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.