ವಿಧಾನಸಭಾ ಚುನಾವಣೆ ಪ್ರಚಾರ ಮುಗಿಸಿ ಇದೀಗ ಹೊಸ ಸಿನಿಮಾದ (New Movie) ಪ್ರೊಮೋ ಶೂಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿರುವ ಕಿಚ್ಚ (Kiccha)ಸುದೀಪ್ (Sudeep), ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಪತ್ರವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಪ್ರಚಾರದ ವೇಳೆಯಲ್ಲಿ ಆದ ಅನುಭವವನ್ನು ಅವರು ಅಕ್ಷರ ರೂಪದಲ್ಲಿ ಇಳಿಸಿದ್ದಾರೆ. ಜೊತೆಗೆ ಪೊಲೀಸ್ ಏಟು ತಿಂದವರ ಕ್ಷಮೆಯನ್ನೂ ಅವರು ಕೇಳಿದ್ದಾರೆ.
Advertisement
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪತ್ರದಲ್ಲಿ ‘ನಿಮ್ಮ ಕಣ್ಣಲ್ಲಿ ಕಂಡ ಅಪಾರ ಪ್ರೀತಿ ನನ್ನ ಬದುಕಿನ ರೀತಿ. ನಿಮ್ಮ ನಿರಂತರ ರಣಕೇಕೆ ಸಾಕಿಷ್ಟು ಈ ಜನುಮಕೆ. ಹಣತೆ ಹೊತ್ತಿಸಿ ಆರತಿ ಎತ್ತಿದಿರಿ. ದಾರಿಯುದ್ದಕ್ಕೂ ಹೂವ ಚೆಲ್ಲಿದಿರಿ. ನಿಮ್ಮ ಎದೆಯ ಮೇಲಿನ ಹಚ್ಚೆಯಂತೆ ಸದಾ ಜೊತೆಗಿರುವ’ ಎಂದು ಅಭಿಮಾನಿಗಳಿಗೆ ಮತ್ತು ನಾಡಿನ ಜನತೆಗೆ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ
Advertisement
Advertisement
ಮುಂದುವರೆದ ಪತ್ರದಲ್ಲಿ, ‘ಜನಸಾಗರದ ನೂಕು ನುಗ್ಗಲಿನಲ್ಲಿ ಕೆಲವರಿಗೆ ಬಿದ್ದ ಪೊಲೀಸ್ ಲಾಠಿ ಏಟಿಗೆ ಕ್ಷಮೆ ಇರಲಿ. ಸ್ನೇಹಿತರೆ, ನಿಮ್ಮ ಪ್ರತಿ ಮನದಲ್ಲಿ ಈ ಪ್ರೀತಿ ಹೀಗೇ ಇರಲಿ. ಕರುನಾಡಲ್ಲಿ ನಡೆದ ಈ ಮೆರವಣಿಗೆಯುದ್ದಕ್ಕೂ ಜೊತೆಯಾಗಿ ಸಾಗಿ ಮಾಧ್ಯಮ ಮಿತ್ರರಿಗೆ, ಕಾಳಜಿಯಿಂದ ಕಾವಲಿಟ್ಟ ಪೊಲೀಸ್ ಸಿಬ್ಬಂದಿಗೆ, ಮಿಲಿಟರಿ ಕಮಾಂಡೋ ಸಿಬ್ಬಂದಿಗೆ, ಲಕ್ಷಾಂತರ ಕಾರ್ಯಕರ್ತರಿಗೆ ಮತ್ತು ಹೃದಯಗೀತೆಯಾದ ನನ್ನ ಪ್ರೀತಿಯ ಸ್ನೇಹಿತರಿಗೆ ಚಿರಋಣಿ’ ಎಂದು ಅವರು ಬರೆದಿದ್ದಾರೆ.
Advertisement
ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆಯೇ ಅವರು ಹೊಸ ಸಿನಿಮಾದ ಪ್ರೋಮೋ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ತಿಂಗಳು ಪ್ರೋಮೋ ಶೂಟಿಂಗ್ ನಡೆಯಲಿದ್ದು, ಇದರ ಮಾಹಿತಿಯನ್ನು ಜೂನ್ 1ರಂದು ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಹೊಸ ಸಿನಿಮಾದ ಮತ್ತಷ್ಟು ಸುದ್ದಿಗಳು ಜೂನ್ ನಂತರವೇ ಅಭಿಮಾನಿಗಳಿಗೆ ಲಭ್ಯವಾಗಲಿವೆ.