ನಟ ನಾಗಾರ್ಜುನ್ ರೀತಿಯಲ್ಲೇ ಸುದೀಪ್ ವಾಪಸ್ಸು

Public TV
1 Min Read
Sudeep

ಬಿಗ್ ಬಾಸ್ (Bigg Boss) ನಿರೂಪಕರ ಬಗ್ಗೆ ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚು ಚರ್ಚೆ ಮಾಡಲಾಗುತ್ತಿತ್ತು. ತೆಲುಗು ಮತ್ತು ಕನ್ನಡ ಬಿಗ್ ಬಾಸ್ ಶೋಗೆ ಈ ಬಾರಿ ಹೋಸ್ಟ್ ಯಾರು ಮಾಡ್ತಾರೆ ಅನ್ನೋ ಪ್ರಶ್ನೆ ಮೂಡಿತ್ತು. ಈ ಗೊಂದಲಕ್ಕೆ ತೆಲುಗಿನಲ್ಲಿ ತೆರೆ ಬಿದ್ದಿದೆ. ಕನ್ನಡದಲ್ಲಿ ಇನ್ನೂ ಬಾಕಿ ಇದೆ. ಈ ವರ್ಷದಿಂದ ಬಿಗ್ ಬಾಸ್ ನಿರೂಪಿಸಲ್ಲ ಅಂತ ಸುದೀಪ್ (Kichcha Sudeep) ಹೇಳಿದ್ದಾರೆ. ಹಾಗಾಗಿ ಗೊಂದಲ ಹಾಗೆಯೇ ಮುಂದುವರೆದಿದೆ.

Sudeep 2

ಕೆಲ ವರ್ಷಗಳಿಂದ ತೆಲುಗು ಬಿಗ್ ಬಾಸ್ ಅನ್ನು ನಾಗಾರ್ಜುನ್ (Nagarjuna) ನಡೆಸಿಕೊಡುತ್ತಿದ್ದರು. ಈ ಸೀಸನ್ ನಲ್ಲಿ ನಾಗಾರ್ಜುನ್ ಇರುವುದಿಲ್ಲ ಎಂದು ಹೇಳಲಾಗಿತ್ತು. ವಿಜಯ್ ದೇವರಕೊಂಡ ಅಥವಾ ಬಾಲಯ್ಯ ಶೋ ನಡೆಸಿಕೊಡಲಿದ್ದಾರೆ ಅಂತಾನೂ ಸುದ್ದಿ ಆಗಿತ್ತು. ಇದೀಗ ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ನಾಗಾರ್ಜುನ್ ಅವರೇ ಪ್ರೋಮೋದಲ್ಲಿದ್ದಾರೆ. ಅಲ್ಲಿಗೆ ತೆಲುಗು ಶೋ ನಿರೂಪಣೆಯನ್ನು ನಾಗಾರ್ಜುನ್ ಮಾಡೋದು ಪಕ್ಕಾ ಆಗಿದೆ. ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಸಪ್ತಮಿ ಶೈನ್‌ – ಅದೆಷ್ಟು ಅಂತ ನಮ್ಮ ಎದೆಗೆ ಕೊಳ್ಳಿ ಇಡ್ತೀರಿ ಅಂದ್ರು ಪಡ್ಡೆ ಹೈಕ್ಳು

bigg boss 2 1

ಕನ್ನಡದಲ್ಲೂ ಸುದೀಪ್ ಜಾಗಕ್ಕೆ ಯಾರನ್ನು ತರಬೇಕು ಅಂತ ತಲೆಕೆಡಿಸಿಕೊಂಡು ಕೂತಿದೆ ಕಲರ್ಸ್ ವಾಹಿನಿ. ಈ ನಡುವೆ ವಾಹಿನಿಯ ಮುಖ್ಯಸ್ಥರು ಸುದೀಪ್ ಅವರನ್ನು ಭೇಟಿ ಮಾಡಿದ ವಿಚಾರವೂ ಹರಿದಾಡುತ್ತಿದೆ. ವಾಹಿನಿಗೆ ಕೆಲವು ಕಂಡಿಷನ್ ಅನ್ನು ಸುದೀಪ್ ಹಾಕಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ. ಸುದೀಪ್ ಕಂಡಿಷನ್ ಗೆ ಚಾನೆಲ್ ಕೂಡ ಒಪ್ಪುವ ಸಾಧ್ಯತೆ ಇದೆಯಂತೆ. ಹಾಗಾಗಿ ಕನ್ನಡದಲ್ಲಿ ಸುದೀಪ್ ಅವರೇ ಮುಂದುವರೆಯಲಿದ್ದಾರೆ ಅನ್ನೋದು ಆಪ್ತರ ಅನಿಸಿಕೆ. ಇದನ್ನೂ ಓದಿ: ಜೂ.ಎನ್‌ಟಿಆರ್ ಕೈಯಲ್ಲಿ `ಗಾಡ್ ಆಫ್ ವಾರ್ ಮುರುಗ’ ಬುಕ್ ಯಾಕೆ?

Share This Article