ಬೆಂಗಳೂರು: ಭಾರತದ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್ ರಾಹುಲ್ ಅಭಿಮಾನಿ ಟ್ವಿಟ್ಟರಿನಲ್ಲಿ ಕಿಚ್ಚ ಸುದೀಪ್ ಅವರಿಗೆ ಟ್ವಿಟ್ಟರ್ ನಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದರು. ಅಭಿಮಾನಿಯ ಕೋರಿಕೆಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ಮುಂಬರುವ ಪೈಲ್ವಾನ್ ಚಿತ್ರದ ಪ್ರಮೋಶನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಶನಿವಾರ ಸುದೀಪ್ ಟ್ವಿಟ್ಟರಿನ ಕೇಂದ್ರ ಕಚೇರಿಯಲ್ಲಿರುವ ‘ಬ್ಲೂ ರೂಮ್’ನಿಂದ ಲೈವ್‍ಗೆ ಬಂದು #AskPailwan ಮೂಲಕ ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಹೇಳಿದ್ದರು.
https://twitter.com/KLRahul55619147/status/1170394761980600320
ಲೈವ್‍ನಲ್ಲಿ ಸುದೀಪ್ ಅವರಿಗೆ ಸಾಕಷ್ಟು ಅಭಿಮಾನಿಗಳು ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಕ್ರಿಕೆಟ್ ಆಟಗಾರ ಕೆ.ಎಲ್ ರಾಹುಲ್ ಅವರ ಅಭಿಮಾನಿಯೋರ್ವ, “ನಾವು ಮೆಸೇಜ್ ಮಾಡಿದ್ದು ನೋಡಿದ್ದರೆ, ದೇವರೂ ರಿಪ್ಲೈ ಮಾಡುತ್ತಿದ್ದ. ಆದರೆ ನಮ್ಮ ಬಾಸ್ ಕಿಚ್ಚ ಸುದೀಪ್ ಅವರು ಮಾಡ್ತಿಲ್ಲ. ಯಾಕ್ರಿ ಸುದೀಪ್ ಅಣ್ಣಾ ರಿಪ್ಲೈ ಮಾಡಿ” ಎಂದು ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದರು.
Yenu thandhe nimma korike ???? https://t.co/8s2VgLYeRF
— Kichcha Sudeepa (@KicchaSudeep) September 7, 2019
ಈ ಟ್ವೀಟ್ ನೋಡಿದ ಸುದೀಪ್, “ಏನು ತಂದೆ ನಿಮ್ಮ ಕೋರಿಕೆ” ಎಂದು ರೀ-ಟ್ವೀಟ್ ಮಾಡಿದ್ದಾರೆ. ಬಳಿಕ ರಾಹುಲ್ ಅವರ ಅಭಿಮಾನಿ, “ಧನ್ಯವಾದಗಳು. ಅಣ್ಣಾ ಜೀವನ ಪಾವನವಾಯಿತು. ತುಂಬಾ ತುಂಬಾ ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದ್ದಾರೆ.
https://twitter.com/KLRahul55619147/status/1170396333611466752
ಮುಂಬೈನಲ್ಲಿರುವ ಟ್ವಿಟ್ಟರಿನ ಕೇಂದ್ರ ಕಚೇರಿಯಲ್ಲಿರುವ `ಬ್ಲೂ ರೂಮ್’ ನಿಂದ ಲೈವ್ ಬಂದ ಕರ್ನಾಟಕದ ಮೊದಲ ನಟ ಎಂಬ ಹೆಗ್ಗಳಿಕೆಯನ್ನು ನಟ ಕಿಚ್ಚ ಸುದೀಪ್ ಅವರು ಇದೇ ಸಂದರ್ಭದಲ್ಲಿ ಪಡೆದುಕೊಂಡಿದ್ದಾರೆ.