ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪುಟ್ಟ ಅಭಿಮಾನಿ ತಮ್ಮ ಮೇಲಿಟ್ಟಿರುವ ಪ್ರೀತಿಗೆ ಕಿಚ್ಚ ಸುದೀಪ್ ಸೋತಿದ್ದು, ಟ್ವೀಟ್ ಮಾಡಿ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಿಚ್ಚ ಫ್ಯಾನ್ಸ್ ಅಸೋಸಿಯೇಷನ್ ಟ್ವಿಟರ್ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ ಪುಟ್ಟ ಬಾಲಕಿ ತಮ್ಮ ಮೇಲಿಟ್ಟಿರುವ ಅಭಿಮಾನಕ್ಕೆ, ಪ್ರೀತಿಗೆ ಕಿಚ್ಚನ ಸೋತಿದ್ದು, ವಿಡಿಯೋಗೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋದಲ್ಲಿ ವಿಕಲಚೇತನ ಬಾಲಕಿಯೊಬ್ಬಳು ಸುದೀಪ್ ಅವರ ಸಿನಿಮಾ ಹಾಡನ್ನು ಹಾಡಿ ನಾನು ನಿಮ್ಮ ಅಭಿಮಾನಿ, ನೀವು ಅಂದರೆ ನನಗೆ ತುಂಬಾ ಇಷ್ಟ. ನಿಮ್ಮನ್ನು ಒಂದು ಸಲ ನೋಡಬೇಕು ಅಂತ ಆಸೆ ಎಂದು ಹೇಳಿದ್ದಾಳೆ. ಈ ನಿಷ್ಕಲ್ಮಶ ಪ್ರೀತಿಗೆ ಸುದೀಪ್ ಫಿದಾ ಆಗಿದ್ದಾರೆ. ಅಲ್ಲದೆ ಟ್ವಿಟ್ಟರ್ ಮೂಲಕ ಫ್ಯಾನ್ಸ್ ಅಸೋಷಿಯೇಷನ್ ಫೇಜ್‍ಗೆ ಟ್ವೀಟ್ ಮಾಡಿದ್ದಾರೆ.
Dono whether to feel happy for this love or sad for the condition of this angel…. Thank u for making this video reach me… May I know where is this child. https://t.co/9s23sXf05F
— Kichcha Sudeepa (@KicchaSudeep) February 18, 2019
ಟ್ವೀಟ್‍ನಲ್ಲಿ ಏನಿದೆ?
ಈ ಪ್ರೀತಿಗೆ ಖುಷಿ ಪಡಬೇಕೋ ಅಥವಾ ಬಾಲಕಿಯ ಸ್ಥಿತಿಗೆ ದುಃಖ ಪಡಬೇಕೋ ನನಗೆ ಗೊತ್ತಾಗುತ್ತಿಲ್ಲ. ಈ ವಿಡಿಯೋ ನನ್ನ ತನಕ ತಲುಪಿಸಿದ್ದಕ್ಕೆ ಧನ್ಯವಾದಗಳು. ಈ ಪುಟ್ಟ ಅಭಿಮಾನಿ ಎಲ್ಲಿದ್ದಾರೆ ಅಂತಾ ತಿಳಿಬಹುದಾ ಎಂದು ಕೇಳಿ ಟ್ವೀಟ್ ಮಾಡಿದ್ದಾರೆ.
ಸದ್ಯ ಈ ಮಗುವಿನ ಮಾಹಿತಿ ದೊರಕಿದ್ದು, ಇಂದು ಬಾಲಕಿಯನ್ನು ಭೇಟಿಯಾಗಲು ಕಿಚ್ಚ ಸುದೀಪ್ ತೆರೆಳುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv