ಬೆಂಗಳೂರು: ಕಿಚ್ಚ ಸುದೀಪ್ ಪಾತ್ರಕ್ಕೆ ತಕ್ಕಂತೆ ತಮ್ಮ ದೇಹದ ತೂಕವನ್ನು ಹಾಗೂ ಹೇರ್ ಸ್ಟೈಲ್ ಬದಲಿಸುತ್ತಿರುತ್ತಾರೆ. ಆದರೆ ಈಗ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಬರೋಬ್ಬರಿ 10 ಕೆ.ಜಿ ಇಳಿಸಿಕೊಂಡಿದ್ದಾರೆ.
ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಶ್ರುತಿ ಹರಿಹರನ್ ಹಾಗೂ ಸುದೀಪ್ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸುದೀಪ್ ಹಾಗೂ ಶ್ರುತಿ ರೆಟ್ರೋ ಲುಕ್ನಲ್ಲಿ ಮಿಂಚಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
Advertisement
Advertisement
ಲಂಗ-ಬ್ಲೌಸ್ ಹಾಕಿಕೊಂಡು ಎರಡು ಜಡೆ ಬಿಟ್ಟುಕೊಂಡು ಪಕ್ಕಾ ಹಳ್ಳಿ ಹುಡುಗಿಯಾಗಿ ಶ್ರುತಿ ಮಿಂಚಿದರೆ, ಸುದೀಪ್ ತುಂಬಾನೇ ಸಿಂಪಲ್ ಆಗಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಕಿಚ್ಚನ ರಿಯಲ್ ಕ್ಯಾರೆಕ್ಟರ್ ಏನು ಎಂಬುದನ್ನು ಎಲ್ಲರಿಗೂ ಗೊತ್ತು ಮಾಡಿರುವ ಶ್ರುತಿ, ಸುದೀಪ್ ಅಭಿಮಾನಿಗಳಿಂದ ಭಲೇ ಹುಡುಗಿ ಎಂದೆನಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೇವಲ 15 ನಿಮಿಷದ ಪಾತ್ರಕ್ಕಾಗಿ 30 ಕೆ.ಜಿ. ತೂಕ ಇಳಿಸಿದ ಧೃವ ಸರ್ಜಾ
Advertisement
Advertisement
ಈ ಚಿತ್ರದಲ್ಲಿ ಜೂ. ಅಂಬರೀಶ್ ಪಾತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರಿಗೆ ಜೋಡಿಯಾಗಿ ಶೃತಿ ಹರಿಹರನ್ ಕಾಣಿಸಿಕೊಳ್ಳುತ್ತಿದ್ದಾರೆ. ಜಾಕ್ ಮಂಜು ನಿರ್ಮಾಣದಲ್ಲಿ ಗುರುದತ್ತ್ ಗಾನಿಗ ಕಲ್ಪನೆಯಲ್ಲಿ ಚಿತ್ರ ಮೂಡಿಬರುತ್ತಿದ್ದು, ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದೆ.