ಶಾನ್ವಿ ಶ್ರೀವಾತ್ಸವ್ ನಟನೆಯ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ ಕಿಚ್ಚ ಸುದೀಪ್

Public TV
1 Min Read
sudeep 11

ಶಾನ್ವಿ ಶ್ರೀವಾತ್ಸವ್ (Shanvi Srivatsav)  ಅಭಿನಯದ ಡಾರ್ಕ್ ಕಾಮಿಡಿ ಆಕ್ಷನ್ ಚಿತ್ರ ‘ಬ್ಯಾಂಗ್’  ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಆಗಸ್ಟ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಇದೀಗ ಚಿತ್ರಕ್ಕೆ ಸ್ಟಾರ್ ಸ್ಪರ್ಶ ಸಿಕ್ಕಿದೆ. ‘ಬ್ಯಾಂಗ್’ (Bang)  ಚಿತ್ರಕ್ಕೆ ಕಿಚ್ಚ ಸುದೀಪ್ (Sudeep) ಹಿನ್ನೆಲೆ ಧ್ವನಿ ನೀಡಿದ್ದು ಚಿತ್ರತಂಡದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.

shanvi srivastava 3

ಈ ಕುರಿತು ಮಾತನಾಡಿರುವ ನಿರ್ದೇಶಕ ಗಣೇಶ್ ಪರಶುರಾಮ್ (Ganesh Parasuram), ‘ನಾವೆಲ್ಲರೂ ಸುದೀಪ್ ಅವರ ಚಿತ್ರಗಳನ್ನು ನೋಡಿ ಬೆಳೆದವರು. ಮೊದಲ ದಿನ ಮೊದಲ ಪ್ರದರ್ಶನದಲ್ಲೇ ಅವರ ಚಿತ್ರ ನೋಡಿ ಪುಳಕಿತರಾದವರು. ಅವರು ನಮ್ಮ ಚಿತ್ರಕ್ಕೆ ಧ್ವನಿ ನೀಡಿದಾಗ, ಅವರನ್ನು ಭೇಟಿಯಾಗಿ ಕೈಕುಲುಕಿದಾಗ, ನಮ್ಮ ಬಹುವರ್ಷಗಳ ಕನಸು ನನಸಾದಂತಾಯಿತು. ಚಿತ್ರದಲ್ಲಿನ ಸುದೀಪ್ ಅವರ ಉಪಸ್ಥಿತಿಯನ್ನು ಅವರ ಅಭಿಮಾನಿಗಳು ಸಹ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಈ ಕನಸನ್ನು ನನಸು ಮಾಡಿದ ಶಾನ್ವಿ ಶ್ರೀವಾತ್ಸವ್ ಅವರಿಗೆ ಮತ್ತು ಒಂದು ಹೊಸ ತಂಡದ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಿಕ್ಕೆ ಸುದೀಪ್ ಅವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ. ಇದನ್ನೂ ಓದಿ:‘ನಾಗರಹಾವು’ ಚಿತ್ರದ ನಂತರ ಮತ್ತೆ ಒಂದಾಗಲಿದ್ದಾರೆ ದಿಗಂತ್-ರಮ್ಯಾ

shanvi srivastava 1

ಪೂಜಾ ವಸಂತ್ ಕುಮಾರ್ ನಿರ್ಮಾಣದ ‘ಬ್ಯಾಂಗ್’  ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಜೊತೆಗೆ ರಘು ದೀಕ್ಷಿತ್, ಸಾತ್ವಿಕಾ, ರಿತ್ವಿಕ್ ಮುರಳೀಧರ್, ಸುನಿಲ್ ಗುಜ್ಜಾರ್, ನಾಟ್ಯರಂಗ ಮುಂತಾದವರು ಅಭಿನಯಿಸಿದ್ದು, ರಿತ್ವಿಕ್ ಮುರಳೀಧರ್ ಅವರ ಸಂಗೀತ ಮತ್ತು ಉದಯ್ ಲೀಲಾ ಅವರ ಛಾಯಾಗ್ರಹಣವಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಆನಂದ್ ಆಡಿಯೋ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಎರಡೂ ಹಾಡುಗಳು ಜನಮೆಚ್ಚುಗೆಗೆ ಪಾತ್ರವಾಗಿವೆ.

‘ಬ್ಯಾಂಗ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿದ್ದು, ಜುಲೈ 29ರ ಶನಿವಾರ ಸಿನಿಮಾದ  ಟ್ರೇಲರ್ ಬಿಡುಗಡೆಯಾಗಲಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article