ಡ್ಯಾನ್ಸ್ ಮಾಸ್ಟರ್‌ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚ

Public TV
2 Min Read
sudeep jani

ಚಂದನವನದ ಅಭಿನಯ ಚರ್ಕವರ್ತಿ ಕಿಚ್ಚ ಸುದೀಪ್ ನಟನೆ ಜೊತೆಗೆ ತನ್ನ ಸುತ್ತಮುತ್ತಲಿರುವ ಜನರನ್ನು ಅವರಷ್ಟೇ ಎತ್ತರಕ್ಕೆ ನೋಡಬಯಸುವ ವ್ಯಕ್ತಿ. ನಟನೆಗೆ ಎಷ್ಟು ಪ್ರೀತಿ ತೋರಿಸುತ್ತಾರೂ, ಅಷ್ಟೇ ಫ್ರೆಂಡ್‍ಶಿಪ್‍ಗೂ ಬೆಲೆಕೊಡುವ ವ್ಯಕ್ತಿ ಈ ನಟ. ಹಿಂದೆ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಎಸ್‍ಯುವಿ ಕಾರ್ ಗಿಫ್ಟ್ ಕೊಟ್ಟು ಸುದ್ದಿಯಾಗಿದ್ದರು. ಈಗ ಮತ್ತೆ ಡ್ಯಾನ್ಸ್ ನಿರ್ದೇಶಕರಿಗೂ ದುಬಾರಿ ಕಾರನ್ನು ಗಿಫ್ಟ್ ಕೊಡುವ ಮೂಲಕ ತಮ್ಮ ಫ್ರೆಂಡ್‍ಶಿಪ್‍ಗೆ ಕೊಡುವ ಮಹತ್ವವನ್ನು ತೋರಿಸಿದ್ದಾರೆ.

sudeep anup bhandari 3

ರಿಲೀಸ್‍ಗೆ ರೆಡಿ ಇರುವ ‘ವಿಕ್ರಾಂತ್ ರೋಣ’ ಸಿನಿಮಾದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಗೆ ಸುದೀಪ್ ಮಹಿಂದ್ರಾ ಥಾರ್ ಕಾರನ್ನು ಗಿಫ್ಟ್ ಕೊಡುವ ಮೂಲಕ ಸುದೀಪ್ ಉದಾರ ಗುಣವನ್ನು ತಿಳಿಯಬಹುದು. ಈ ಕುರಿತು ಜಾನಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸಿನಿಜರ್ನಿಯನ್ನ ಕೊನೆಗೊಳಿಸುತ್ತಾರಾ ನಾಟ್ಯಸುಂದರಿ ಸಾಯಿ ಪಲ್ಲವಿ?

ಟ್ವಟ್ಟರ್‌ನಲ್ಲಿ ಜಾನಿ, ಕಿಚ್ಚ ಸುದೀಪ್, ನಿಮ್ಮ ಉಡುಗೊರೆಗಾಗಿ ಧನ್ಯವಾದಗಳು. ನೀವು ನನ್ನನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಸಂತೋಷವಾಗುತ್ತೆ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ಖುಷಿಯಾಗಿದೆ ಎಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.

sudepp

ಈ ಪೋಸ್ಟ್ ನೋಡಿದ ಅಭಿಮಾನಿಗಳು ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ. ಜಾನಿ ಅವರು ತಮಿಳು, ತೆಲುಗು ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನೃತ್ಯ ನಿರ್ದೇಶನ ಮಾಡಿದ್ದು, ಸಿನಿರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಇವರಿಗೆ ಕನ್ನಡ ಸಿನಿಮಾಗಳಲ್ಲಿಯೂ ಒಳ್ಳೆಯ ನಂಟಿದೆ.

sudeep

ಪುನೀತ್ ನಟನೆಯ, ರಾಜಕುಮಾರ, ನಟಸಾರ್ವಭೌಮ, ಯುವರತ್ನ ಸಿನಿಮಾಗಳಲ್ಲಿ ಜಾನಿ ತಮ್ಮ ಅದ್ಭುತ ನೃತ್ಯ ಸಂಯೋಜನೆ ಮಾಡುವ ಮೂಲಕ ಚಂದನವನದ ಸ್ಟಾರ್‌ಗಳ ಕಣ್ಣಿಗೆ ಬಿದ್ದಿದ್ದಾರೆ. ಅಲ್ಲದೇ ಟಾಲಿವುಡ್‍ನ ‘ಬುಟ್ಟ ಬೊಮ್ಮಾ’ ಸೂಪರ್ ಹಿಟ್ ಸಾಂಗ್‍ಗೆ ಇವರು ನೃತ್ಯ ಸಂಯೋಜನೆಯನ್ನು ಮಾಡಿದ್ದರು. ಇದನ್ನೂ ಓದಿ: ಸೆಕ್ಸ್ ಮಾಡುವಂತೆ ಕೇಳುವುದೇ ಮೀಟೂ ಆದರೆ, ನಾನು ಅದನ್ನು ಕೇಳುತ್ತೇನೆ : ಖ್ಯಾತ ಖಳನಟನ ಶಾಕಿಂಗ್ ಮಾತು

Share This Article
Leave a Comment

Leave a Reply

Your email address will not be published. Required fields are marked *