ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಶೂ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್ ಅವರು ಮಕ್ಕಳಿಗೆ ಸ್ಕೂಲ್ ಶೂ ತೊಡಿಸಿ ತಮ್ಮಲ್ಲಿರುವ ಸಾಮಾಜಿಕ ಕಳಕಳಿಯನ್ನು ತೋರಿದ್ದಾರೆ.
ಇಂದು ಕೆಂಗೇರಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕಿಚ್ಚಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಮಕ್ಕಳಿಗೆ ಶೂ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶೂ ವಿತರಣೆ ಕಾರ್ಯಕ್ರಮಕ್ಕೆ ಸುದೀಪ್ ಅಭಿಮಾನಿಗಳು ಸುದೀಪ್ ಅವರನ್ನು ಆಹ್ವಾನ ಮಾಡಿದ್ದರು.
Advertisement
Advertisement
ಕಾರ್ಯಕ್ರಮಕ್ಕೆ ಆಗಮಿಸಿದ ಕಿಚ್ಚ ಸುದೀಪ್ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಶೂ ಮತ್ತು ಸಾಕ್ಸ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ಸ್ವತಃ ತಾವೇ ಕೆಲವು ಮಕ್ಕಳಿಗೆ ಶೂ ತೊಡಿಸಿದ್ದು ವಿಶೇಷವಾಗಿತ್ತು.
Advertisement
ಸುದೀಪ್ ಅವರು ಪೈಲ್ವಾನ್ ಮತ್ತು ಬಾಲಿವುಡ್‍ನ ದಬಾಂಗ್ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಇನ್ನೂ ಕನ್ನಡದ ಕೋಟಿಗೊಬ್ಬ-3 ಬಹುತೇಕ ಕಂಪ್ಲಿಟ್ ಆಗಿದೆ. ತೆಲುಗಿನಲ್ಲಿ ಸೈರಾ ಚಿತ್ರವೂ ಮುಗಿದಿದೆ. ಈಗ ಅನೂಪ್ ಭಂಡಾರಿ ನಿರ್ದೇಶನದ ರಂಗ ಬಿಲ್ಲಾ ಬಾಷಾ ಸಿನಿಮಾ ಆರಂಭಿಸಲಿದ್ದಾರೆ.
Advertisement
ಇಂದು ಬೆಳಿಗ್ಗೆ "ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ" ಸಹಯೋಗದೊಂದಿಗೆ ನಮ್ಮ ಅಭಿನಯ ಚಕ್ರವರ್ತಿ @KicchaSudeep ಅಣ್ಣ 150 ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಶೂ ವಿತರಿಸಿದರು,,,@iampriya06 #KicchaSudeepaCharitableSociety #Manofmillionhearts pic.twitter.com/IRbhFWjXut
— KKSFA Official ® (@KicchafansKKSFA) June 7, 2019