ಸುದೀಪ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್: ಕಿಚ್ಚನ ಕಾಮನ್ ಡಿಪಿ ಅನಾವರಣ ಮಾಡಿದ ಶಿವಣ್ಣ

ಬಾದಶಾ ಕಿಚ್ಚ ಸುದೀಪ್‌ಗೆ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. `ವಿಕ್ರಾಂತ್ ರೋಣ’ ಚಿತ್ರದ ಸೂಪರ್ ಸಕ್ಸಸ್ ನಂತರ ಕಿಚ್ಚನ ಬರ್ತ್‌ಡೇ ಸಂಭ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸುದೀಪ್ ಬರ್ತ್‌ಡೇಗೆ ಕಾಮನ್ ಡಿಪಿ ಅನಾವರಣ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ಕಿಚ್ಚ ಸುದೀಪ್ ಇದೀಗ ಸೆಪ್ಟೆಂಬರ್ 2ಕ್ಕೆ, 49ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ. `ವಿಕ್ರಾಂತ್ ರೋಣ’ ಈ ಚಿತ್ರದ ಸಕ್ಸಸ್ ಜತೆಗೆ ಕಿಚ್ಚನ ಹುಟ್ಟುಹಬ್ಬ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ. ಇನ್ನು ಈ ವರ್ಷ ವಿಶೇಷವಾಗಿ ಕಿಚ್ಚನ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ತೆರೆಮರೆಯಲ್ಲಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಮನೆ ಸಂಪೂರ್ಣ ಜಲಾವೃತವಾಗಿದೆ- ಗಮನಹರಿಸುವಂತೆ ಜಗ್ಗೇಶ್ ಮನವಿ
ಆದರೆ ಅಪ್ಪು ಸಾವಿನ ನೋವಿನಲ್ಲಿರುವ ಸುದೀಪ್ ಮತ್ತು ಅವರ ಕುಟುಂಬ. ಈ ವರ್ಷ ಬರ್ತ್‌ಡೇ ಆಚರಿಸಿಕೊಳ್ಳುವುದು ಅನುಮಾನ. ಪುನೀತ್ ಜತೆ ಬಾಲ್ಯದಿಂದಲೂ ಒಂದೊಳ್ಳೆ ಬಾಂದವ್ಯವನ್ನ ಸುದೀಪ್ ಇಟ್ಟುಕೊಂಡಿದ್ದರು. ಇನ್ನು ಸುದೀಪ್ ಅವರ ಬರ್ತ್‌ಡೇಗೂ ಮೊದಲು ಶಿವಣ್ಣ ವಿಶೇಷವಾದ ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. ಕಿಚ್ಚನ ಕಾಮನ್ ಡಿಪಿ ಫೋಟೋ ನೋಡುಗರ ಗಮನ ಸೆಳೆಯುತ್ತಿದೆ.
View this post on Instagram
ಸುದೀಪ್ ಅವರು ಕುಳಿತುಕೊಂಡಿರುವ ಫೋಟೋದಲ್ಲಿ ಅವರ ಕೈ ಮೇಲೆ, ಹೆಗಲ ಮೇಲೆ, ನೆಲದ ಮೇಲೆ ಅಭಿಮಾನಿಗಳು ಕುಳಿತಿದ್ದಾರೆ. ಹಿಂಭಾಗದಲ್ಲಿ ಬಾದ್‌ಶಾ ಎಂದು ಬರೆದಿದ್ದಾರೆ. ಈ ಫೋಟೋ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ.