ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ನಟನೆ ‘ದಬಾಂಗ್ 3’ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಲನ್ ಆಗಿ ನಟಿಸುತ್ತಿದ್ದಾರೆ.
ಸಲ್ಮಾನ್ ಖಾನ್ ನಟನೆಯ ದಬಾಂಗ್ ಹಾಗೂ ದಬಾಂಗ್ -2 ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಯಶಸ್ಸು ಕಂಡ ಸಿನಿಮಾಗಳು. ಈಗ ಈ ಸಿನಿಮಾದ ಮೂರನೇ ಭಾಗ ಬರುತ್ತಿದ್ದು, ಈ ಚಿತ್ರದಲ್ಲಿ ಸುದೀಪ್ ಅವರು ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಸುದೀಪ್ ಹಾಗೂ ಸಲ್ಮಾನ್ ಖಾನ್ ಅವರು ಬಹಳ ದಿನದಿಂದ ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕೆಂದು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಈಗ ಇಬ್ಬರಿಗೂ ಒಂದೇ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
ನಿರ್ದೇಶಕ ಪ್ರಭುದೇವ ಅವರು ಈಗಾಗಲೇ ಸುದೀಪ್ ಅವರಿಗೆ ಈ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಸುದೀಪ್ ಕೂಡ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ದಬಾಂಗ್-3 ಚಿತ್ರವನ್ನು ಸಲ್ಮಾನ್ ಸಹೋದರ, ನಿರ್ಮಾಪಕ ಅರ್ಬಾಜ್ ಖಾನ್ ನಿರ್ಮಿಸುತ್ತಿದ್ದು, ಏಪ್ರಿಲ್‍ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ನಟಿ ಸೋನಾಕ್ಷಿ ಸಿನ್ಹಾ ಈ ಚಿತ್ರದಲ್ಲೂ ಕೂಡ ಸಲ್ಮಾನ್ ಖಾನ್‍ಗೆ ಪತ್ನಿಯಾಗಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಟ್ವೀಟ್ ಮಾಡುವ ಮೂಲಕ ನಟ ಸುದೀಪ್ ಅವರಿಗೆ `ಪೈಲ್ವಾನ್’ ಸಿನಿಮಾದ ಟೀಸರ್ ಗಾಗಿ ಅಭಿನಂದನೆ ತಿಳಿಸಿದ್ದರು. ಸಿನಿಮಾ ಟೀಸರ್ ನ ಯೂಟ್ಯೂಬ್ ಲಿಂಕ್ ಹಾಕಿ, ಕಿಚ್ಚ ಸುದೀಪ್ ನೀವು ನಮ್ಮ ಪ್ರಯತ್ನವನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಆಲ್ ದಿ ಬೆಸ್ಟ್ ಪೈಲ್ವಾನ್ ಹಾಗೂ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್‍ಗೆ ಕಿಚ್ಚ ಸುದೀಪ್ ಆಶ್ಚರ್ಯಗೊಂಡು, “ಸರ್ ಇದು ನಿಜಾನಾ. ಸುಲ್ತಾನ್ ನನಗೆ ಟ್ವೀಟ್ ಮಾಡಿದ್ದಾರೆ. ನೀವು ನನ್ನ ಈ ದಿನವನ್ನು ಅದ್ಭುತವಾಗಿ ಮಾಡಿದ್ದೀರಿ. ಧನ್ಯವಾದಗಳು” ಎಂದು ಸಲ್ಮಾನ್ ಅವರ ಟ್ವೀಟ್‍ಗೆ ರೀ-ಟ್ವೀಟ್ ಮಾಡಿದ್ದರು.
Sirrrrrrr ????….
✨✨✨✨????????…
is this real ,,,lemme wake upppp..
The sultan @BeingSalmanKhan tweets !!
U jussssss made my day..thank uuuuuuuuuuuuuu…..
Hugs hugs n hugs . https://t.co/ttQBrNwuou
— Kichcha Sudeepa (@KicchaSudeep) January 15, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv