ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿ ತಮ್ಮ 25ನೇ ಮದುವೆ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. 2001ರ ಅಕ್ಟೋಬರ್ 18ರಂದು ಪ್ರಿಯಾ ಅವರನ್ನು ವಿವಾಹವಾಗಿದ್ದ ಸುದೀಪ್, ಇಂದು ದಾಂಪತ್ಯ ಜೀವನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದಾರೆ.
ಮನೆಯಲ್ಲಿ ವಿಶೇಷ ಪೂಜೆ
ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸುದೀಪ್ ಮನೆಯಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಈ ಪೂಜೆಯಲ್ಲಿ ಸ್ಯಾಂಡಲ್ವುಡ್ನ ಗಣ್ಯರು ಹಾಗೂ ಸುದೀಪ್ ಅವರ ಆಪ್ತರು ಭಾಗಿಯಾಗಿದ್ದರು.
25 ವರ್ಷಗಳ ದಾಂಪತ್ಯದ ಸಂಭ್ರಮದಲ್ಲಿ ಸುದೀಪ್ ಮತ್ತು ಪ್ರಿಯಾ ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಂಡು ಸಂತಸ ಹಂಚಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ವಿಶೇಷ ಪೂಜೆಯ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ.ಇದನ್ನೂ ಓದಿ: ಅಯ್ಯನ ಮನೆಯ ನಿಗೂಢ ಲೋಕ : ಖುಷಿ ರವಿ, ಅಕ್ಷಯ್ ನಟನೆ
