ತೆಲುಗಿನ ಯುವ ನಟ ಸುಧೀರ್ ಬಾಬು (Sudhir Babu) ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಹರೋಮ್ ಹರ (Harom Hara). ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟೀಸರ್ (Teaser) ಇಂದು ಪಂಚ ಭಾಷೆಯಲ್ಲಿ ಅನಾವರಣಗೊಳ್ತಿದೆ.
Advertisement
ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಹರೋಮ್ ಹರ ಟೀಸರ್ ಬಿಡುಗಡೆಗೆಯಾಗ್ತಿದ್ದು, ಈ ಐದು ಭಾಷೆಯ ಸೂಪರ್ ಸ್ಟಾರ್ಸ್ ಟೀಸರ್ ರಿಲೀಸ್ ಮಾಡಲಿದ್ದಾರೆ. ತೆಲುಗಿನಲ್ಲಿ ಪ್ರಭಾಸ್, ಕನ್ನಡದಲ್ಲಿ ಕಿಚ್ಚ ಸುದೀಪ್ (Sudeep), ಮಲಯಾಳಂನಲ್ಲಿ ಮಮ್ಮುಟ್ಟಿ, ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಹಿಂದಿ ಭಾಷೆಯಲ್ಲಿ ಟೈಗರ್ ಶ್ರಾಫ್ ಸುಧೀರ್ ಬಾಬು ಸಿನಿಮಾದ ಝಲಕ್ ರಿವೀಲ್ ಮಾಡಲಿದ್ದಾರೆ.
Advertisement
Advertisement
ಸುಧೀರ್ ಬಾಬು ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಮಾಳವಿಕ ಶರ್ಮಾ ಸಾಥ್ ಕೊಟ್ಟಿದ್ದಾರೆ. ಪ್ರಮುಖ ಪಾತ್ರದಲ್ಲಿ ಸುನಿಲ್, ವಿಲನ್ ಆಗಿ ಕನ್ನಡದ ನಟ ಅರ್ಜುನ್ ಗೌಡ ತೊಡೆತಟ್ಟಿದ್ದಾರೆ.
Advertisement
ಹರೋಮ್ ಹರ, ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕೊನೆ ಹಂತದ ಶೂಟಿಂಗ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. 1989ರಲ್ಲಿ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ನಡೆದ ಘಟನೆಯ ಸುತ್ತ ಕಥೆ ಸಾಗುತ್ತದೆ.
ಜ್ಞಾನಸಾಗರ ದ್ವಾರಕಾ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಬಹಳ ಅದ್ಧೂರಿಯಾಗಿ ಸುಮಂತ್ ಜಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಚೈತಮ್ ಭಾರದ್ವಾಜ್ ಅವರ ಸಂಗೀತವಿದೆ ಮತ್ತು ಅರವಿಂದ್ ವಿಶ್ವನಾಥನ್ ಅವರ ಛಾಯಾಗ್ರಹಣವಿದೆ. ಶ್ರೀ ಸುಬ್ರಹ್ಮಣ್ಯೇಶ್ವರ ಸಿಮಿಮಾಸ್ ಬ್ಯಾನರ್ ನಡಿ ಹರೋಮ್ ಹರಾ ಸಿನಿಮಾ ತಯಾರಾಗುತ್ತಿದೆ.