ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಜಾಕ್ ಮಂಜು ಇದೀಗ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸುದೀಪ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕ, ನಟ ನಾಗಶೇಖರ್ ಈ ಸಿನಿಮಾದ ನಾಯಕನಾಗಿದ್ದು, ಚಕ್ರವರ್ತಿ ಚಂದ್ರಚೂಡ ಇದರ ನಿರ್ದೇಶಕರು.
ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾಗೆ ಪಾದರಾಯ ಎಂಬ ಟೈಟಲ್ ಇಡಲಾಗಿದ್ದು, ಕಾಂತಾರ ನಂತರ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಸತ್ಯ ಹೆಗಡೆ ಛಾಯಾಗ್ರಹಣ, ತಮಿಳನ ಖ್ಯಾತ ಸಂಕಲನಕಾರ ಆಂಟೋನಿ ಮುಂತಾದ ಖ್ಯಾತನಾಮರು ಕಾರ್ಯ ನಿರ್ವಹಿಸುತ್ತಿರುವುದು ಸಿನಿಮಾದ ಮತ್ತೊಂದು ವಿಶೇಷ. ಇದನ್ನೂ ಓದಿ: `ಅವತಾರ್ 2′ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ: 2 ಕೋಟಿ ಟಿಕೆಟ್ ಸೋಲ್ಡ್ ಔಟ್
ಚಕ್ರವರ್ತಿ ಚಂದ್ರಚೂಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದರೆ, ಖ್ಯಾತ ನಿರ್ದೇಶಕ ಹಾಗೂ ನಟ ನಾಗಶೇಖರ್ ನಾಯಕ ನಟನಾಗುವ ಜೊತೆಗೆ ನಿರ್ಮಾಪಕರೂ ಆಗಿದ್ದಾರೆ. ದೇಶ ವ್ಯಾಪಿ ಸುದ್ದಿ ಮಾಡಿದ ನೈಜ ಘಟನೆಯೊಂದರ ಆಧಾರಿತ ಈ ಸಿನಿಮಾ ಹಲವು ಜೀವಂತ ಘಟ್ಟಗಳಿಂದ ಕೂಡಿದ್ದು, ಹಾಗಾಗಿ ಹನುಮ ಜಯಂತಿಯಂದೇ ಶೀರ್ಷಿಕೆ ಬಿಡುಗಡೆ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ ಜನವರಿಯಿಂದ ಚಿತ್ರೀಕರಣ ಆರಂಭಿಸಲಿದೆ.
ಸಿನಿಮಾದ ವಿಶೇಷ ಅಂದರೆ, 2016ರಲ್ಲಿ ಸಮಯದಲ್ಲಿ ನಡೆದ ಒಂದು ನೈಜ ಘಟನೆಯನ್ನು ಸಿನಿಮಾಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅಂಜನಾದ್ರಿಯ ಸುತ್ತಾಮುತ್ತಾ ತುಂಬಾ ಬ್ಯಾಕ್ ವಾಟರ್ ನಲ್ಲಿ ಕಥೆ ನಡೆಯಲಿದೆ. ಪಾದರಾಯ ಕಥೆಯಗೂ ಮತ್ತು ಆಂಜನೇಯ ಪಾದಕ್ಕೂ ನಂಟಿದೆ. ಜೊತೆಗೆ ಅಯೋಧ್ಯೆಯಿಂದ ಬೆಂಗಳೂರಿನವರೆಗೂ ಕಥೆ ಸಾಗಿ ಬರಲಿದೆ ಎನ್ನುವುದು ಕುತೂಹಲದ ಅಂಶಗಳಾಗಿವೆ.