ಕನ್ನಡದ ಹೆಸರಾಂತ ನಟ ವಿಷ್ಣುವರ್ಧನ್ (Vishnuvardhan) ಅವರ ಪುಣ್ಯಭೂಮಿ (Punya Bhumi) ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ((D.K. Shivakumar)) ಜೊತೆ ಕಿಚ್ಚ ಸುದೀಪ್ (Sudeep) ಮಾತನಾಡಿದ್ದಾರೆ. ನಿನ್ನೆ ಡಿಕೆಶಿಯನ್ನು ಭೇಟಿ ಮಾಡಿದ್ದ ಸುದೀಪ್, ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯ ಭೂಮಿಯನ್ನು ಅಭಿಮಾನಿಗಳ ಕೋರಿಕೆಯ ಮೇರೆಗೆ ಹಾಗೆಯೇ ಉಳಿಸಿಕೊಳ್ಳಬೇಕು ಮತ್ತು ಹತ್ತು ಗುಂಟೆ ಜಮೀನನ್ನು ನೀಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
Advertisement
ವಿಷ್ಣು ಸಮಾಧಿ ನೆಲಸಮದ ಆತಂಕ
Advertisement
ಕನ್ನಡ ಸಿನಿಮಾ ರಂಗದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಆಗುತ್ತಾ? ಇಂತಹ ಆತಂಕದ ಮಾಹಿತಿಯನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೊರಹಾಕಿದ್ದಾರೆ. ಈ ಕುರಿತು ಅವರು ಈ ಹಿಂದೆ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಯಾವುದೇ ಕಾರಣಕ್ಕೂ ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿರುವ ಯಜಮಾನರ (ವಿಷ್ಣುವರ್ಧನ್) ಸಮಾಧಿಯನ್ನು ನೆಲಸಮ ಮಾಡುವುದಕ್ಕೆ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
Advertisement
Advertisement
ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಯ ಜಾಗದ ಕುರಿತು ಕಳೆದ ಹದಿಮೂರು ವರ್ಷಗಳಿಂದ ವಿವಾದ ಕೋರ್ಟ್ ನಲ್ಲಿದೆ. ಹಾಗಾಗಿ ಹಿರಿಯ ನಟ ಬಾಲಣ್ಣ ಕುಟುಂಬ ಹಾಗೂ ವಿಷ್ಣು ಅಭಿಮಾನಿಗಳ ನಡುವೆ ತಿಕ್ಕಾಟವೂ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ. ಕೋರ್ಟ್ ನಲ್ಲಿರುವ ಕೇಸ್ ಅಂತಿಮ ಹಂತಕ್ಕೆ ತಲುಪಿದ್ದು, ಬಾಲಣ್ಣ ಕುಟುಂಬದವರು ವಿಷ್ಣು ಸಮಾಧಿಯನ್ನು ನೆಲಸಮ ಮಾಡುವಂತೆ ಮಾನ್ಯ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನೇ ವೀರಕಪುತ್ರ ಶ್ರೀನಿವಾಸ್ ತಮ್ಮ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ವೀರಕಪುತ್ರ ಶ್ರೀನಿವಾಸ್ ವಿಡಿಯೋದಲ್ಲಿ ಹೇಳಿದಂತೆ, ‘ಬಾಲಣ್ಣ ಕುಟುಂಬದವರಾದ ಕಾರ್ತಿಕ್ ಯಜಮಾನರ ಪುಣ್ಯಭೂಮಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ವಿಷ್ಣುವರ್ಧನ್ ಕುಟುಂಬದವರಿಗೆ ಈ ಜಾಗವೇ ಇಷ್ಟವಿಲ್ಲವೆಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಅಭಿಮಾನಿಗಳು ಪುಣ್ಯಭೂಮಿಗೆ ಕಾಲಿಡದಂತೆ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಇಲ್ಲಿಗೆ ನೂರು ಜನರೂ ಬರುವುದಿಲ್ಲ ಎಂದು ಸುಳ್ಳುಗಳನ್ನು ಹರಡುತ್ತಿದ್ದಾರೆ. ಹೀಗೆಯೇ ಸುಳ್ಳು ಹೇಳಿದರೆ, ನಾವೂ ಕೂಡ ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಹಾಗಂತ ಅಭಿಮಾನ ಸ್ಟುಡಿಯೋದ ಜಾಗ, ಅವರ ಪಿತ್ರಾರ್ಜಿತ ಆಸ್ತಿಲ್ಲ. ಸರಕಾರ ನೀಡಿದ್ದು. ಈ ಕುರಿತು ನಾವೂ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಮುಂದುವರೆದು ಮಾತನಾಡಿರುವ ಶ್ರೀನಿವಾಸ್, ‘ವಿಷ್ಣುವರ್ಧನ್ ಪುಣ್ಯಭೂಮಿಗೆ ಕೇಳುತ್ತಿರುವುದು ಕೇವಲ ಹತ್ತು ಗುಂಟೆ ಜಾಗ. ಈ ಹಿಂದೆ ಬಾಲಣ್ಣ ಕುಟುಂಬದವರು ಜಿಲ್ಲಾಧಿಕಾರಿಗಳ ಎದುರು ಹತ್ತು ಗುಂಟೆ ಜಾಗ ಕೊಡುವುದಾಗಿ ಹೇಳಿದ್ದರು. ಪತ್ರವನ್ನೂ ಕೊಟ್ಟಿದ್ದರು. ಈಗ ಬೇರೆ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನಾವು ಪುಣ್ಯಭೂಮಿಯನ್ನು ಉಳಿಸಿಕೊಳ್ಳಲು ಎಂತಹ ಹೋರಾಟಕ್ಕೂ ಸಿದ್ಧ. ಈ ಕುರಿತು ಬೃಹತ್ ಪ್ರತಿಭಟನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದ್ದರು. ನಿನ್ನೆಯಷ್ಟೇ ಹೋರಾಟ ಕೂಡ ಮಾಡಿದ್ದಾರೆ.