ಇಂದು ಕಿಚ್ಚ ಸುದೀಪ್ ಅವರು ನ್ಯೂಸ್ ಕೆಫೆಯಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಜೊತೆ ಸಿನಿಮಾ ಬಗ್ಗೆ ಮಾತನಾಡಿದರು. ಈ ವೇಳೆ ಸುದೀಪ್ ಇದೇ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕುರಿತು ಮಾತನಾಡಿದ್ದಾರೆ.
Advertisement
ಬಾಲಿವುಡ್ ಮಂದಿ ದಕ್ಷಿಣ ಸಿನಿಮಾ ಬಗ್ಗೆ ಭಯ ಪಡುತ್ತಿದ್ದಾರೆ ಎಂಬುದರ ಕುರಿತು ಮಾತನಾಡಿದ ಅವರು, ನಾನು ಇದನ್ನು ಯಾವತ್ತು ನಂಬುವುದಿಲ್ಲ. ಯಾವುದೇ ಸಿನಿಮಾದ ನಿರ್ದೇಶಕರಾಗಲಿ, ನಟನಾಗಲಿ ಎಲ್ಲರಿಗೂ ಒಂದು ತೊಂದರೆ ಇರುತ್ತೆ. ಅದನ್ನ ಬಿಟ್ಟು ಬರದಿದ್ರೆ ನಾವು ಎಂದೂ ಭದ್ರತೆಯಿಂದ ಇರಲು ಸಾಧ್ಯವಾಗುವುದಿಲ್ಲ. ಬಾಲಿವುಡ್‍ನ ‘ಭೂಲ್ ಭುಲೈಯಾ 2’ ಸಿನಿಮಾ ಹಿಟ್ ಆಗಿದೆ. ಯಾವುದೋ ಕೆಲವು ಸಿನಿಮಾಗಳು ಸೋತ್ತಿದೆ ಎಂದರೆ ಅದು ದಕ್ಷಿಣ ಸಿನಿಮಾದಿಂದ ಎಂದು ಹೇಳುವುದು ಸರಿಯಲ್ಲ. ಅಥವಾ ಬಾಲಿವುಡ್ ಸಿನಿಮಾ ಸೋತ್ತಿದ್ರಿದ್ದ ದಕ್ಷಿಣ ಸಿನಿಮಾ ಗೆಲ್ತು ಎಂದರೆ ಅದು ತಪ್ಪಾಗುತ್ತೆ. ಇದನ್ನೂ ಓದಿ: ನಾವು ಬೇರೆ ಭಾಷೆಯನ್ನು ಇಂಪ್ರೆಸ್ ಮಾಡೋದು ಬೇಕಿಲ್ಲ: ಸುದೀಪ್
Advertisement
Advertisement
ಕೆಜಿಎಫ್, ಪುಷ್ಪಾ ಮತ್ತು ಆರ್‌ಆರ್‌ಆರ್ ಸಿನಿಮಾಗಳು ಅದರ ಸಾಮರ್ಥ್ಯದಿಂದ ಗೆದ್ದಿದೆ. ಆದರೆ ಬಾಲಿವುಡ್ ಸಿನಿಮಾಗಳು ಆ ಸಮಯದಲ್ಲಿ ಅದ್ಭುತ ಕಥೆಯನ್ನು ಹೊಂದಿರಲಿಲ್ಲ ಎಂದು ನನಗೆ ಅನಿಸುತ್ತೆ. ಇದೆಲ್ಲ ಸಮಯದಿಂದ ಅಷ್ಟೇ ಸಾಧ್ಯ.
Advertisement
ಭಾರತದಲ್ಲಿ ಚಿಕ್ಕದಿಂದ ಹಿಡಿದು ದೊಡ್ಡ ಇಂಡಸ್ಟ್ರಿ ಇದೆ. ಇಲ್ಲಿವರೆಗೂ ಯಾವ ಇಂಡಸ್ಟ್ರಿ ಬಾಗಿಲನ್ನು ಹಾಕಿಲ್ಲ. ಎಲ್ಲವು ತಮ್ಮ ಕೆಲಸವನ್ನು ಮಾಡುತ್ತಿದೆ. ಎಲ್ಲ ಇಂಡಸ್ಟ್ರಿಯಲ್ಲಿಯೂ ಏಳುಬೀಳುಗಳು ಇರುತ್ತೆ. ಅವೆಲ್ಲವನ್ನು ಮೀರಿ ಅವುಗಳು ಮತ್ತೆ ಬರುತ್ತೆ. ಈ ಇಂಡಸ್ಟ್ರಿಯಲ್ಲಿಯೂ ಉತ್ತಮ ನಿರ್ದೇಶಕರು, ನಟರು ಮತ್ತು ಬರಹಗಾರರಿದ್ದಾರೆ.
ದಕ್ಷಿಣ ಸಿನಿಮಾಗಳಲ್ಲಿಯೂ ಅದ್ಭುತವಾದ ನಿರ್ದೇಶಕರು ಇದ್ದಾರೆ. ಅವರಿಗೆಲ್ಲ ಈಗ ದೊಡ್ಡ ವೇದಿಕೆ ನಿರ್ಮಾಣವಾಗಿರುವುದು ತುಂಬಾ ಸಂತೋಷವಾಗುತ್ತಿದೆ. ಇದು ತುಂಬಾ ಅದ್ಭುತವಾದ ಸಮಯವಾಗಿದೆ ಎಂದರು. ಇದನ್ನೂ ಓದಿ: ಸಿರಿಧಾನ್ಯದಲ್ಲಿ ಒಂದಾದ ‘ನವಣೆ ಉಪ್ಪಿಟ್ಟು’ ಮಾಡಿ