ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹುಚ್ಚ ವೆಂಕಟ್ ಕೆಟ್ಟ ಸ್ವಭಾವದ ವ್ಯಕ್ತಿ ಅಲ್ಲ ಎಂದು ಹೇಳಿದ್ದಾರೆ.
ಗುರುವಾರ ಬಿಗ್‍ಬಾಸ್ ತಂಡ ಸುದ್ದಿಗೋಷ್ಠಿಯನ್ನು ನಡೆಸಿದ್ದು, ಈ ವೇಳೆ ಸುದೀಪ್ ಅವರಿಗೆ ಹುಚ್ಚ ವೆಂಕಟ್ ಬಗ್ಗೆ ಪ್ರಶ್ನಿಸಲಾಯಿತು. ಆಗ ಸುದೀಪ್, ಹುಚ್ಚ ವೆಂಕಟ್‍ಗೆ ಬೇರೆ ಸ್ಪರ್ಧಿಗಳಿಂದ ಆಗುವುದೇನು ಇಲ್ಲ. ಬಿಗ್‍ಬಾಸ್‍ಯಿಂದ ಅಥವಾ ಬೇರೆಯವರ ಜೀವನದಿಂದ ನೀವು ಏನಾದರೂ ಕಲಿಯುತ್ತೀರಾ ಎಂದರೆ ಅದು ನಿಮಗೆ ಬಿಟ್ಟ ವಿಷಯ. ವೆಂಕಟ್ ಅವರಿಗೆ ಸ್ವಲ್ಪ ಸಹಾಯ ಬೇಕು ಅನ್ಸುತ್ತೆ. ಅವರು ಕೆಟ್ಟ ಸ್ವಭಾವದ ವ್ಯಕ್ತಿ ಅಲ್ಲ. ಅವರ ಮಾತಿನಲ್ಲಿ ಒರಟುತನ ಇತ್ತೇ ಹೊರತು ಅನಾವಶ್ಯಕ ಕಾರಣಕ್ಕೆ ಮಾತನಾಡುತ್ತಿರಲಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ:ಬಿಗ್‍ಬಾಸ್ ಸಂಭಾವನೆ ಎಷ್ಟು – ಪತ್ನಿ ವಿಚಾರ ಪ್ರಸ್ತಾಪಿಸಿ ಸ್ಮಾರ್ಟ್ ಉತ್ತರ ನೀಡಿದ ಕಿಚ್ಚ
Advertisement
Advertisement
ಹುಚ್ಚ ವೆಂಕಟ್ ಅವರು ಏನೋ ಹೇಳಲು ಇಷ್ಟಪಡುತ್ತಾರೆ. ಆದರೆ ಅವರು ಹೇಳುವ ರೀತಿ ತಪ್ಪು ಇರಬಹುದು. ತುಂಬಾ ಜನಗಳಲ್ಲಿ ತಪ್ಪುಗಳಿದೆ. ಒಬ್ಬ ವ್ಯಕ್ತಿ ಒಳ್ಳೆಯವನಾಗಲು ತುಂಬಾ ಜನ ಕಾರಣ ಆಗಿರುತ್ತಾರೆ. ಹಾಗೆಯೇ ಒಬ್ಬ ವ್ಯಕ್ತಿ ಕೆಟ್ಟವನಾಲು ತುಂಬಾ ಜನ ಕಾರಣರಾಗಿರುತ್ತಾರೆ. ನಾವು ಒಬ್ಬರ ಬಗ್ಗೆ ಮಾತನಾಡುವುದು ಸುಲಭ. ಅವರಿಗೆ ಸ್ವಲ್ಪ ಸಹಾಯ ಬೇಕಿದೆ. ಅವರು ಕೆಟ್ಟ ವ್ಯಕ್ತಿ ಎಂದು ನನಗೆ ಅನಿಸುತ್ತಿಲ್ಲ. ಕೆಲವರ ಜೀವನದಲ್ಲಿ ಏನೂ ನಡೆಯದೇ ಇದ್ದಾಗ ಕೆಲವು ಒತ್ತಡಗಳು, ಕೆಲವು ನೋವುಗಳು ಅವರಿಂದ ಏನೇನೋ ಮಾಡಿಸುತ್ತಿರುತ್ತದೆ. ನಾವು ಅವನು ಸರಿಯಿಲ್ಲ, ಕೆಟ್ಟವನು ಎಂದು ಹೇಳುವುದು ಬಹಳ ಸುಲಭ. ಅವರಿಗೆ ಸ್ವಲ್ಪ ಸಮಯಬೇಕು ಎಂದರು. ಇದನ್ನೂ ಓದಿ: ಬಿಗ್‍ಬಾಸ್ ಸೀಸನ್ 7 – `ಬಿಗ್’ಹೌಸ್‍ಗೆ ಹೋಗ್ತಿರೋ ಸಂಭಾವ್ಯ ಸ್ಪರ್ಧಿಗಳ ಪಟ್ಟಿ
Advertisement
Advertisement
ಈ ಹಿಂದೆ ಹುಚ್ಚ ವೆಂಕಟ್ ಚೆನ್ನೈನ ಬೀದಿಯಲ್ಲಿ ತಿರುಗಾಡುತ್ತಿರುವ ವಿಡಿಯೋವನ್ನು ಭುವನ್ ತಮ್ಮ ಎಫ್‍ಬಿಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಅಲ್ಲದೆ ಹುಚ್ಚ ವೆಂಕಟ್‍ನನ್ನು ಬೆಂಗಳೂರಿಗೆ ಕರೆ ತರಲು ಪ್ರಯತ್ನಿಸಿ ಎಂದು ಮನವಿ ಮಾಡಿಕೊಂಡಿದ್ದರು. ವಿಡಿಯೋ ನೋಡಿದ್ದ ಭುವನ್ ಸ್ನೇಹಿತರೊಬ್ಬರು ಹುಚ್ಚ ವೆಂಕಟ್‍ನನ್ನು ಬೆಂಗಳೂರಿಗೆ ಕರೆತರಲು ಪ್ರಯತ್ನಿಸಿದ್ದರು. ಬಳಿಕ ಚೆನ್ನೈನ ಬೀದಿಯಲ್ಲಿ ಚಪ್ಪಲಿ ಧರಿಸದೇ, ಕೊಳಕು ಬಟ್ಟೆ ಹಾಕಿಕೊಂಡು ತಿರುಗಾಡುತ್ತಿದ್ದ ಹುಚ್ಚ ವೆಂಕಟ್‍ನನ್ನ ಭುವನ್ ಸ್ನೇಹಿತ ಪತ್ತೆ ಹಚ್ಚಿದ್ದರು. ಹುಚ್ಚ ವೆಂಕಟ್‍ನನ್ನು ಕೂರಿಸಿಕೊಂಡು ಬೆಂಗಳೂರಿಗೆ ಹೋಗುವ ಬಗ್ಗೆ ಮಾತನಾಡಿದ್ದರು. ಆದರೆ ಸಹಾಯ ಮಾಡಲು ಹೋದ ಭುವನ್ ಸ್ನೇಹಿತನಿಗೆ ಹುಚ್ಚ ವೆಂಕಟ್ ಕೌಂಟರ್ ನೀಡಿದ್ದರು. ಇದನ್ನೂ ಓದಿ: ಚಂದನ್-ನಿವೇದಿತಾ ಪ್ರೀತಿ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ
ಅದಾದ ಬಳಿಕ ವೆಂಕಟ್ ಕೊಡಗು, ಮಂಡ್ಯ ಹಾಗೂ ರಾಮನಗರದಲ್ಲಿ ಗಲಾಟೆ ಶುರು ಮಾಡಿದ್ದರು. ಆಗ ಜನರು ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಇದನ್ನು ಗಮನಿಸಿದ ನಟ ಭುವನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಭುವನ್ ಸಾಮಾಜಿಕ ಜಾಲತಾಣದಲ್ಲಿ, “ಗೆಳೆಯರೆ ದಯವಿಟ್ಟು ಹುಚ್ಚ ವೆಂಕಟ್ ಅನ್ನು ಎಲ್ಲಿ ಕಂಡರೂ ಹೊಡಿಬೇಡಿ. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ. ಅವರು ಕೆಟ್ಟವರಲ್ಲ. ಮಾನಸಿಕ ತೊಂದರೆಯಲ್ಲಿರುವವರು. ನನ್ನ ಕಳಕಳಿಯ ವಿನಂತಿ” ಎಂದು ಮನವಿ ಮಾಡಿಕೊಂಡಿದ್ದರು.