Connect with us

Bengaluru City

ಬಿಗ್‍ಬಾಸ್ ಸೀಸನ್ 7 – `ಬಿಗ್’ಹೌಸ್‍ಗೆ ಹೋಗ್ತಿರೋ ಸಂಭಾವ್ಯ ಸ್ಪರ್ಧಿಗಳ ಪಟ್ಟಿ

Published

on

ಬೆಂಗಳೂರು: ಬಿಗ್‍ಬಾಸ್ ಸೀಸನ್ 7 ಭಾನುವಾರದಿಂದ ಆರಂಭವಾಗಲಿದ್ದು, ಯಾರ್ಯಾರು ಈ ಬಾರಿ `ಬಿಗ್’ಹೌಸ್‍ಗೆ ಬರುತ್ತಿದ್ದಾರೆ ಎನ್ನುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಈಗ ಲಭ್ಯವಾಗಿದೆ.

ಭಾನುವಾರದಿಂದ ಬಿಗ್‍ಬಾಸ್ ಸೀಸನ್ 7 ಶುರುವಾಗಲಿದ್ದು, ಬಿಗ್‍ಹೌಸ್‍ನಲ್ಲಿ ಈ ಬಾರಿ ಏನೆಲ್ಲಾ ನಡೆಯುತ್ತೆ? ಸ್ಪರ್ಧಿಗಳು ಯಾರು? ಎನ್ನುವುದನ್ನು ತಿಳಿಯಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಸೀಸನ್ 7ರಲ್ಲಿ ಕೃಷಿಕರು ಇದ್ದಾರಾ? ಸ್ವಾಮೀಜಿ ಇದ್ದಾರಾ? ಬಿಗ್‍ಹೌಸ್‍ಗೆ ಹೋಗೋ ಹಿರಿತೆರೆ-ಕಿರಿತೆರೆಯ ಕಲಾವಿದರ್ಯಾರು? ಎನ್ನುವ ಸಂಭಾವ್ಯ ಸ್ಪರ್ಧಿಗಳ ಎಕ್ಸ್‌ಕ್ಲೂಸಿವ್ ಲಿಸ್ಟ್ ಇಲ್ಲಿದೆ. ಇದನ್ನೂ ಓದಿ:ಬಿಗ್‍ಬಾಸ್ ಸಂಭಾವನೆ ಎಷ್ಟು – ಪತ್ನಿ ವಿಚಾರ ಪ್ರಸ್ತಾಪಿಸಿ ಸ್ಮಾರ್ಟ್ ಉತ್ತರ ನೀಡಿದ ಕಿಚ್ಚ

ಈ ಪಟ್ಟಿಯಲ್ಲಿ ಇರುವ ಎಲ್ಲ ಕಲಾವಿದರು ಮನೆ ಸೇರುತ್ತಾರಾ ಇಲ್ಲವೋ ಎನ್ನುವುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಈ ಕಲಾವಿದರ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

`ಬಿಗ್‍ಬಾಸ್’ ಸಂಭಾವ್ಯ ಸ್ಪರ್ಧಿಗಳ ಪಟ್ಟಿ:
ಈ ಬಾರಿ ದೊಡ್ಡ ತಾರಾಗಣವೇ ಬಿಗ್ ಹೌಸ್‍ನಲ್ಲಿ ಮಿಂಚಲಿದ್ದಾರೆ. ತುಪ್ಪದ ಬೆಡಗಿ ನಟಿ ರಾಗಿಣಿ, ನಟ ಜೈಜಗದೀಶ್, ಹಾಸ್ಯನಟ ಕುರಿ ಪ್ರತಾಪ್, ಹಾಸ್ಯನಟ ರಾಜು ತಾಳಿಕೋಟೆ, ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ, ನಟಿ ದುನಿಯಾ ರಶ್ಮಿ, ಕಿರುತೆರೆ ನಟಿ ದೀಪಿಕಾ ದಾಸ್(ನಾಗಿಣಿ- ಅಮೃತಾ), ಕಿರುತೆರೆ ನಟಿ ಸುಜಾತಾ(ರಾಧಾರಮಣ- ಸಿತಾರಾ), ನಟ ರಾಹುಲ್(ನೀನ್ಯಾರೆ, ಜಿಗರ್‍ಥಂಡಾ ಮೂವಿ), ಗಾಯಕಿ ಶಮಿತಾ ಮಲ್ನಾಡ್, ಗುರುಲಿಂಗ ಸ್ವಾಮಿಜಿ, ನಟಿ ರಂಜಿನಿ ರಾಘವನ್(ಪುಟ್ಟ ಗೌರಿ ಮದುವೆ), ನಟ ಪಂಕಜ್ ಎಸ್.ನಾರಾಯಣ್, ಕಿರುತೆರೆ ನಟಿ ಭೂಮಿ ಶೆಟ್ಟಿ(ಕಿನ್ನರಿ), ನಟ ಕಿರಣ್ ರಾಜ್(ಕಿನ್ನರಿ), ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್(ಕಾಸರಗೋಡು), ನಿರೂಪಕಿ ಚೈತ್ರ ವಾಸುದೇವನ್, ಚಂದನ ಅನಂತಸ್ವಾಮಿ.

ಸದ್ಯ ಬಿಗ್‍ಹೌಸ್‍ಗೆ ಎಂಟ್ರಿಕೊಡಲಿದ್ದಾರೆ ಎನ್ನಲಾಗಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಒಟ್ಟು 18 ಮಂದಿ ಹೆಸರು ಕೇಳಿಬಂದಿದೆ. ಇದರಲ್ಲಿ ಸ್ಯಾಂಡಲ್‍ವುಡ್, ಕಿರುತೆರೆ ನಟ-ನಟಿಯರ ಹೆಸರೇ ಹೆಚ್ಚಾಗಿದೆ. ಇದು ಕೇವಲ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಾಗಿದ್ದು, ಬಿಗ್‍ಹೌಸ್‍ನಲ್ಲಿ ಈ ಬಾರಿ ಗಾಸಿಪ್ಸ್, ಗಲಾಟೆ, ಪ್ರೀತಿ, ಸ್ನೇಹ ಹೇಗಿರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.