ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichacha Sudeep) ಅವರ ಕುಟುಂಬದಿಂದ ಮತ್ತೊಬ್ಬ ಪ್ರತಿಭೆಯ ಎಂಟ್ರಿಯಾಗಿದೆ. ‘ಜಿಮ್ಮಿʼ (Jimmy)ಯಾಗಿ ಸಂಚಿತ್ ಸಂಜೀವ್ ಚಂದನವನದ ಅಡ್ಡಾಗೆ ಎಂಟ್ರಿ ಕೊಡ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸಂಜೆ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.
ಕಿಚ್ಚ ಸುದೀಪ್ ಸಹೋದರಿ ಮಗ ಸಂಚಿತ್ ಸಂಜೀವ್ (Sanchit Sanjeev) ಅವರು ನಟನಾಗಿ ಮಿಂಚಬೇಕು ಎಂಬ ಕನಸನ್ನ ಕಟ್ಟಿಕೊಂಡು ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಸಂಚಿತ್ ಚೊಚ್ಚಲ ಸಿನಿಮಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಿಚ್ಚ ಸುದೀಪ್, ಶಿವಣ್ಣ ಹಾಗೂ ರವಿಚಂದ್ರನ್ ಭಾಗಿಯಾಗಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಹಾಗೂ ಶಾಸಕ ಮುನಿರತ್ನ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್
ಸಂಚಿತ್ ನಟನೆ, ನಿರ್ದೇಶನ ಮೊದಲ ಸಿನಿಮಾಗೆ ಪ್ರಿಯಾ ಸುದೀಪ್ (Priya Sudeep), ಲಹರಿ ಸಂಸ್ಥೆ (Lahari) ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡ್ತಿದ್ದಾರೆ. ಸಕಲ ತಯಾರಿ ಮಾಡಿಕೊಂಡೆ ಮಾವನ ದಾರಿಯಲ್ಲೇ ಸಂಚಿತ್ ಸಿನಿ ದುನಿಯಾಗೆ ಪಾದಾರ್ಪಣೆ ಮಾಡ್ತಿದ್ದಾರೆ. ಮತ್ತೊಂದು ವಿಶೇಷ ಅಂದರೆ ಸಂಚಿತ್ ಲಾಂಚಿಂಗ್ ‘ಜಿಮ್ಮಿ’ ಚಿತ್ರದಲ್ಲಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಹಿನ್ನೆಲೆ ಗಾಯನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ‘ಜಿಮ್ಮಿ’ ಚಿತ್ರದ ಟೈಟಲ್ ಲಾಂಚ್ ವೇಳೆ ಲೈವ್ ಪರ್ಫಾಮೆನ್ಸ್ ನೀಡಿ ಸಾನ್ವಿ ಮೆಚ್ಚುಗೆ ಗಳಿಸಿದರು. ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಸಾನ್ವಿ ಹಿನ್ನೆಲೆ ಗಾಯನ ಮಾಡಿದರು.
ಜಿಮ್ಮಿ ಇದೊಂದು ಕ್ರೈಂ-ಡ್ರಾಮಾ ಕಥೆಯಾಗಿದ್ದು, ತಂದೆ ಮಗನ ಸೆಂಟಿಮೆಂಟ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಸುದೀಪ್ ಸಲಹೆಯಂತೆ ಸಂಚಿತ್ ತಯಾರಿ ಮಾಡಿಕೊಂಡಿದ್ದು, ಬಹುತೇಕ ಹೊಸಬರೇ ಕೂಡಿಕೊಂಡಿರುವ ಚಿತ್ರತಂಡ ಇದಾಗಿದೆ. ಒಟ್ಟಿನಲ್ಲಿ ಸುದೀಪ್ ಕುಟುಂಬದಿಂದ ಮತ್ತೊಬ್ಬ ನಟನ ಎಂಟ್ರಿಯಾಗುತ್ತಿರೋದು ಕಿಚ್ಚ ಫ್ಯಾನ್ಸ್ ಖುಷಿ ಕೊಟ್ಟಿದೆ.