ಬಿಗ್ ಬಾಸ್ (Bigg Boss OTT) ಮನೆಯಿಂದ ಆಚೆ ಬರುವ ನಟ- ನಟಿಯರಿಗೆ ಅನೇಕ ನಿರ್ದೇಶಕರು ಗಾಳ ಹಾಕಿಕೊಂಡು ಕೂತಿರುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹಾಗಾಗಿಯೇ ಬಿಗ್ ಬಾಸ್ ಮನೆಯಿಂದ ಬಂದ ಪ್ರಥಮ್, ಶಶಿ ಸೇರಿದಂತೆ ಹಲವರು ನಾಯಕ ನಟರಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಇನ್ನೂ ಕೆಲವು ನಟಿಯರು ಕೂಡ ಅವಕಾಶ ಪಡೆದರು. ಇಂಥದ್ದೊಂದು ಅವಕಾಶ ಸೋನುಗೂ ಬಂದಿದೆ. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್
Advertisement
ಹೌದು, ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಿಗ್ ಬಾಸ್ ಮನೆಗೆ ಹೋಗುವ ಮುಂಚೆಯೇ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಅವುಗಳು ಬಿಡುಗಡೆ ಆಗಬೇಕು. ಸೋನು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆಯೇ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಬರುತ್ತಿವೆಯಂತೆ. ಆದರೆ, ಸಿಕ್ಕ ಸಿನಿಮಾಗಳಲ್ಲಿ ನಾನು ನಟಿಸಲಾರೆ ಎಂದಿದ್ದಾರೆ ಸೋನು. ನನ್ನ ಪಾತ್ರಕ್ಕೆ ಮಹತ್ವ ಇರಬೇಕು ಮತ್ತು ಸ್ಟಾರ್ ನಟರ ಸಿನಿಮಾ ಮೂಲಕ ಮತ್ತೆ ನಾನು ಎಂಟ್ರಿ ಕೊಡಬೇಕು ಅಂದಿದ್ದಾರೆ.
Advertisement
Advertisement
ಅದರಲ್ಲೂ ಕಿಚ್ಚ ( Kiccha) ಸುದೀಪ್ (Sudeep)ಅವರು ನಾನು ನಟಿಸುವ ಸಿನಿಮಾದಲ್ಲಿ ಹೀರೋ ಆಗಿರಬೇಕು. ಅಂತಹ ಸ್ಟಾರ್ ನಟರ ಜೊತೆ ನಾನು ಕೆಲಸ ಮಾಡಲು ಇಷ್ಟಪಡುತ್ತೇನೆ. ಹಾಗಂತ ಕೇವಲ ಅವರ ಸಿನಿಮಾಗಳಲ್ಲಿ (Cinema) ಮಾತ್ರ ನಟಿಸುತ್ತೇನೆ ಅಂತಲ್ಲ, ನನಗೆ ಡ್ರೀಮ್ ಇರುವುದು ಹಾಗೆ. ಕನ್ನಡದಲ್ಲೂ ಸಾಕಷ್ಟು ಒಳ್ಳೆಯ ನಟರು ಇದ್ದಾರೆ. ನನಗೆ ಒಳ್ಳೆಯ ಪಾತ್ರ ಸಿಕ್ಕಾಗ ಕಂಡಿತಾ ಅದನ್ನು ಉಪಯೋಗಿಸಿಕೊಳ್ಳುತ್ತೇನೆ. ಸಿನಿಮಾ ರಂಗದಲ್ಲಿ ದೊಡ್ಡ ಕನಸು ಕಂಡಿರುವೆ ಅಂತಾರೆ.
Advertisement
ಬಿಗ್ ಬಾಸ್ ಮನೆಯಲ್ಲಿ ಸಖತ್ ಬೋಲ್ಡ್ ಆಗಿಯೇ ಮಾತನಾಡಿರುವ ಸೋನು ಶ್ರೀನಿವಾಸ್ ಗೌಡ, ಅತೀ ಹೆಚ್ಚು ಸುದ್ದಿ ಮಾಡಿದ ಸ್ಪರ್ಧಿಯೂ ಹೌದು. ಯಾವುದನ್ನೂ ಮುಚ್ಚಿಟ್ಟುಕೊಳ್ಳದೇ ಎಲ್ಲವನ್ನೂ ನೇರಾನೇರ ಹೇಳಿ, ಜಗಳ ಮಾಡಿಕೊಂಡು ಹುಡುಗಿ ಕೂಡ. ಆದರೂ, ಆ ಬಗ್ಗೆ ಅವರಿಗೆ ಬೇಸರವಿಲ್ಲವಂತೆ. ನಾನು ಇರುವುದು ಹೀಗೆ. ನನಗೆ ಏನು ಅನಿಸತ್ತೋ ಅದನ್ನು ನೇರವಾಗಿಯೇ ಹೇಳುತ್ತೇನೆ. ಹಾಗಾಗಿಯೇ ನಾನು ಹೀಗೆ ಇರೋದು ಎನ್ನುತ್ತಾರೆ ಸೋನು.