ದೊಡ್ಮನೆಯ ಮೊದಲ ಪಂಚಾಯಿತಿಯಲ್ಲಿ ಕಿಚ್ಚ (Kiccha Sudeep) ಎಲ್ಲರಿಗೂ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ತುಕಾಲಿ ಸಂತುಗೆ ಬೆವರಿಳಿಸಿದ ಕಿಚ್ಚ, ಹಿರಿಯ ನಟಿ ಭಾಗ್ಯಶ್ರೀ (Bhagyashree) ಅವರಿಗೆ ಬೆವರಿಳಿಸಿದ್ದಾರೆ. ಮೇಕಪ್ ಮಾಡಿಕೊಂಡು ಟಿಪ್ ಟಾಪ್ ಆಗಿ ಬಂದಿದ್ದ ನಟಿಯ ಮೇಲೆ ಬಾಣಗಳ ಸುರಿಮಳೆಯನ್ನೇ ಸುರಿಸಿದರು ಸುದೀಪ್. ಮುಖಕ್ಕೆ ಹಾಕಿದ ಮೇಕಪ್ ಹರಿದು ಗಲ್ಲದ ಮೇಲೆ ಹರಿಯುವಂತೆ ಭಾಗ್ಯಶ್ರೀಗೆ ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ:ಆಕ್ಟರ್ ಆಗಿರೋ ಶ್ರೀಲೀಲಾ ಮೆಡಿಕಲ್ ಓದಿದ್ದೇಕೆ ಗೊತ್ತಾ? ಇಲ್ಲಿದೆ ಸೀಕ್ರೆಟ್
ಭಾಗ್ಯಶ್ರೀ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ ಕಲಾವಿದೆ. ತುಂಬಾನೇ ಎಮೋಷನಲ್ ನಟಿ. ಆದರೆ, ಹಸಿದಾಗ ಹೊಟ್ಟೆ ತುಂಬಾ ಅನ್ನ ಹಾಕಿದವರನ್ನು ಮರೆತು, ಎಡವಟ್ಟು ಮಾಡಿಕೊಂಡಿದ್ದಾರೆ. ತೀರಾ ಹಸಿವು ಅಂತ ಒದ್ದಾಡಿದಾಗ ಡ್ರೋನ್ ಪ್ರತಾಪ್ (Drone Prathap) ಅವರು ಭಾಗ್ಯಶ್ರೀ ಅವರಿಗೆ ರೊಟ್ಟಿ ಮಾಡಿ ಕೊಟ್ಟಿದ್ದಾರೆ. ಹೊಟ್ಟೆ ತುಂಬಾ ಅನ್ನ ಹಾಕಿದ್ದಾರೆ. ಹಸಿವು ನೀಗಿಸಿದ್ದಾರೆ. ಇಂತಹ ವ್ಯಕ್ತಿಯನ್ನೇ ಮನೆಯಿಂದ ಆಚೆ ಹಾಕೋಕೆ ಹೊರಟಿದ್ದಾರೆ ಭಾಗ್ಯಶ್ರೀ. ಇದು ಸುದೀಪ್ ಅವರ ಕೋಪಕ್ಕೆ ಕಾರಣವಾಗಿದೆ.
ಅನ್ನ ಹಾಕಿದ ಕೈಗಳನ್ನು ಜೀವನಪೂರ್ತಿ ಮರೀಬಾರದು ಎಂಬ ಗಾದೆ ಇದೆ. ಅದನ್ನು ಬಿಗ್ ಬಾಸ್ (Bigg Boss Kannada 10) ವೇದಿಕೆಯ ಮೇಲೆ ನೆನಪಿಸಿದ್ದಾರೆ ಕಿಚ್ಚ. ಅನ್ನ ಹಾಕಿದ ವ್ಯಕ್ತಿಗೆ ಹೀಗೆ ಮರೆಯೋದು ಸರಿ ಅಲ್ಲ ಅಂತ ಪಾಠ ಮಾಡಿದ್ದಾರೆ. ಕಿಚ್ಚನ ಮಾತು ಸರಿ ಅನಿಸಿ ಭಾಗ್ಯಶ್ರೀ ಭಾವುಕರಾಗಿದ್ದಾರೆ. ಇದು ಕೇವಲ ಭಾಗ್ಯಶ್ರೀ ಅವರಿಗೆ ಹೇಳಿದ ಪಾಠದಂತೆ ಇರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇರೋರಿಗೆ ಹೇಳಿದ ಕಿವಿಮಾತಿನಂತೆ ಇತ್ತು. ಕಿಚ್ಚನ ಮಾತು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಯಿತು.
ಬಿಗ್ ಬಾಸ್ ಮನೆಯಲ್ಲಿ ಉಳಿಯಲು ಏನೆಲ್ಲ ತಂತ್ರಗಳನ್ನು ಕಂಟೆಸ್ಟೆಂಟ್ ಹೆಣೆಯುತ್ತಾರೆ. ಬಹುಶಃ ಭಾಗ್ಯಶ್ರೀ ಅದನ್ನೇ ಮಾಡಿರಬೇಕು. ಆದರೆ, ಕಿಚ್ಚನಿಗೆ ಈ ನಡೆ ಸರಿ ಕಾಣಿಸಿಲ್ಲ. ಹಾಗಾಗಿ ನೇರವಾಗಿಯೇ ಕ್ಲಾಸ್ ತಗೆದುಕೊಂಡಿದ್ದಾರೆ. ಇದನ್ನು ಎಲ್ಲರೂ ನೆನಪಲ್ಲಿ ಇಟ್ಟುಕೊಂಡು ಉಳಿದವರು ಹೇಗೆ ನಡೆದುಕೊಳ್ಳುತ್ತಾರೆ ಎನ್ನೋದೇ ಸದ್ಯಕ್ಕಿರುವ ಪ್ರಶ್ನೆ.