ಬಿಗ್ ಬಾಸ್ ಮನೆಯ (Bigg Boss Kannada 10) ಆಟ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನ ಪಡೆದು 55 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ದೊಡ್ಮನೆಯಲ್ಲಿ ಸ್ನೇಹಿತ್ ಗೌಡ, ಫುಟೇಜ್, ಕಂಟೆಂಟ್ ಅಂತೆಲ್ಲಾ ಮಾತನಾಡಿದ್ದರು. ಈ ಬಗ್ಗೆ ಸ್ನೇಹಿತ್ಗೆ ಸುದೀಪ್ (Sudeep) ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ನಾಮಿನೇಟ್ ಮಾಡುವ ಅಧಿಕಾರ ಪಡೆದ ಸ್ನೇಹಿತ್
Advertisement
ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪವಿ ಪೂವಪ್ಪ, ಅವಿನಾಶ್ ಶೆಟ್ಟಿ ಬಂದು ಒಂದು ವಾರ ಕಳೆದಿದೆ. ಪವಿ ಜೊತೆ ಸ್ನೇಹಿತ್ (Snehith Gowda) ಮಾತನಾಡುವಾಗ ಇಲ್ಲಿ 24 ಗಂಟೆ ಇರುತ್ತೀವಿ. ಒಂದೂವರೆ ಬರುವ ಎಪಿಸೋಡ್ನಲ್ಲಿ ಏನೂ ಗೊತ್ತಾಗಲ್ಲ ಎಂದು ಕಾಮೆಂಟ್ ಮಾಡಿದ್ದರು. ಇದು ಸುದೀಪ್ ಅವರಿಗೂ ಸಿಟ್ಟು ತರಿಸಿದೆ.
Advertisement
Advertisement
ವಾರದ ಮೊದಲ ಕಿಚ್ಚನ ಪಂಚಾಯಿತಿಯಲ್ಲಿ ಪವಿಗೆ ಹೊರಗಿನ ಬಳೆ ವಿಚಾರ ಮತ್ತು ಟ್ರೋಲ್ ವಿಷ್ಯ ವಿನಯ್ ಹೇಳಿದ್ದಕ್ಕೆ ಮ್ಯಾಟರ್ ಲೀಕ್ ಮಾಡಿದ್ದಕ್ಕೆ ಸುದೀಪ್ ರಾಂಗ್ ಆಗಿದ್ದರು. ಬಳಿಕ ಸ್ನೇಹಿತ್ಗೂ ಸುದೀಪ್ ಕಿವಿ ಹಿಂಡಿದ್ದಾರೆ. ಸ್ನೇಹಿತ್ ನಿಮಗೊಂದು ಕಿವಿ ಮಾತು ಹೇಳುತ್ತೇನೆ. ‘ಬಿಗ್ ಬಾಸ್’ ಹೇಗೆ ಟೆಲಿಕಾಸ್ಟ್ ಆಗುತ್ತೆ ಎಂದು ಸುದೀಪ್ ಪ್ರಶ್ನೆ ಕೇಳಿದ್ದಾರೆ. ಒಂದೂವರೆ ಗಂಟೆ ಎಪಿಸೋಡ್, ಆಮೇಲೆ ಲೈವ್ ಎಂದಿದ್ದಾರೆ.
Advertisement
ಅದಕ್ಕೆ ತಪ್ಪು, ಅಲ್ಮೋಸ್ಟ್ 2 ಗಂಟೆ ಸಂಚಿಕೆ ಪ್ರಸಾರ ಆಗುತ್ತದೆ. 24 ಗಂಟೆಗಳ ಕಾಲ ಲೈವ್, ಅನ್ಕಟ್ ವರ್ಷನ್ಸ್ ಹೋಗುತ್ತದೆ ಎಂದಿದ್ದಾರೆ ಸುದೀಪ್. 1.5 ಗಂಟೆ ಎಪಿಸೋಡ್ಗೆ ಜಡ್ಜ್ ಮಾಡೋದು ಕಷ್ಟ ಅಂದ್ರಿ. ಫಸ್ಟ್ ಕಂಟೆಂಟ್, ಫುಟೇಜ್ ಅಂತ ಹೇಳೋದು ಬಿಡಿ. ಬಿಗ್ ಬಾಸ್ ಮನೆಯಲ್ಲಿ ಖುಷಿಯಿಂದ ಬಾಳಿ ಬದುಕಿ ಎಂದು ಸುದೀಪ್ ಖಡಕ್ ಆಗಿ ಹೇಳಿದ್ದಾರೆ. ಬಳಿಕ ನನ್ನಿಂದ ಏನೋ ತಪ್ಪಾಗಿದೆ. ಕ್ಷಮಿಸಿ ಎಂದು ಸ್ನೇಹಿತ್ ಕೇಳಿಕೊಂಡಿದ್ದಾರೆ.