Advertisements

ಆರ್​ಸಿಬಿ-ಚೆನ್ನೈ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸುತ್ತಿರುವ ಕಿಚ್ಚ

ಶಾರ್ಜಾ: ಐಪಿಎಲ್ ಪಂದ್ಯಗಳನ್ನು ನೋಡುತ್ತ ಎಂಜಾಯ್ ಮಾಡುತ್ತಿರುವ ಕಿಚ್ಚ ಸುದೀಪ್, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹಣಾಹಣಿಯನ್ನು ವೀಕ್ಷಿಸುತ್ತಿದ್ದು, ಯುಎಇನ ಶಾರ್ಜಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ.

Advertisements

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮಹಿಳೆಯೊಬ್ಬರ ಜೊತೆ ತೆಗೆಸಿಕೊಂಡಿರುವ ಫೋಟೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಇದನ್ನು ಕಂಡ ಅಭಿಮಾನಿಗಳು ಕಮೆಂಟ್, ಲೈಕ್ ಮಾಡುವ ಮೂಲಕ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಶಾರ್ಜಾದಲ್ಲಿ ಶೈನ್ ಆಗುತ್ತಾ ರಾಯಲ್ ಚಾಲೆಂಜರ್ಸ್: ಇಂದು ಚೆನ್ನೈ-ಬೆಂಗಳೂರು ಕದನ

Advertisements

ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ ಯುಎಇಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸುದೀಪ್ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಆಗಮಿಸಿದ ಕುರಿತು ಫೋಟೋ, ವೀಡಿಯೋಗಳು ವೈರಲ್ ಆಗುತ್ತಿವೆ.

ಇತ್ತೀಚೆಗೆ ಆರ್​ಸಿಬಿ ಹಾಗೂ ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯಗಳಲ್ಲಿ ಸಹ ಕಾಣಿಸಿಕೊಂಡಿದ್ದರು. ಆರ್​ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೀನಾಯ ಸೋಲು ಕಂಡು ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಇತಿಹಾಸಕ್ಕೆ ಇಂದಿಗೆ 14 ವರ್ಷ

Advertisements

ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ತಂಡಗಳ ಆಟವನ್ನು ಸಹ ಕಿಚ್ಚ ವೀಕ್ಷಿಸಿದ್ದರು. ಈ ಕುರಿತು ರಾಜಸ್ಥಾನ್ ರಾಯಲ್ಸ್ ತಂಡದ ಅಧೀಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ, ಹಲೋ ಕಿಚ್ಚ ವಿಯ್ ಸಿ ಯು ಎಂದು ಬರೆಯಲಾಗಿತ್ತು. ಇದಕ್ಕೆ ಸುದೀಪ್ ಸಹ ಪ್ರತಿಕ್ರಿಯಿಸಿ, ಎಂತಹ ಕಾಕತಾಳೀಯ, ನಾನೂ ಸಹ ನಿಮ್ಮನ್ನು ಇಡೀ ಸಮಯ ನೋಡುತ್ತಿದ್ದೆ ಎಂದು ಪ್ರತಿಕ್ರಿಯಿಸಿದ್ದರು. ಹೀಗೆ ಬಹುತೇಕ ಐಪಿಎಲ್ ಪಂದ್ಯಗಳನ್ನು ಕಿಚ್ಚ ವೀಕ್ಷಿಸಿದ್ದಾರೆ.

Advertisements
Exit mobile version