ನಟಿ ಸುಮಲತಾ ಅಂಬರೀಶ್ (Sumalatha Ambareesh) ಮೊಮ್ಮಗನ ನಾಮಕರಣಕ್ಕೆ ಕಿಚ್ಚ ಸುದೀಪ್ (Sudeep) ದಂಪತಿ ಹಾಜರಿ ಹಾಕಿದ್ದಾರೆ. ಅಂಬಿ ಮೊಮ್ಮಗನ ನಾಮಕರಣ (Naming Ceremony) ಸಮಾರಂಭಕ್ಕೆ ಆಗಮಿಸಿ ವಿಶೇಷ ಉಡುಗೊರೆಯನ್ನು ಸುದೀಪ್ ದಂಪತಿ ನೀಡಿದ್ದಾರೆ. ಇದನ್ನೂ ಓದಿ:‘ರಾಣಾ ಅಮರ್ ಅಂಬರೀಶ್’ ಎಂದು ಅಂಬಿ ಮೊಮ್ಮಗನಿಗೆ ನಾಮಕರಣ
ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣ ಅದ್ಧೂರಿಯಾಗಿ ನಡೆದಿದೆ. ಅಂಬಿ ಮನೆಯ ಕುಡಿ ‘ರಾಣಾ ಅಮರ್ ಅಂಬರೀಶ್’ಗೆ (Raana Amar Ambareesh) ಪುಟ್ಟ ಗೊಂಬೆಗಳಿರುವ ಬಾಕ್ಸ್ ಅನ್ನು ಸುದೀಪ್ ಮತ್ತು ಪ್ರಿಯಾ ದಂಪತಿ ಉಡುಗೊರೆಯಾಗಿ ನೀಡಿದ್ದಾರೆ.
ಇನ್ನೂ ಈ ಕಾರ್ಯಕ್ರಮಕ್ಕೆ ಸುದೀಪ್ ಆಗಮನ ಹೈಲೈಟ್ ಆಗಿದ್ರೆ, ಮತ್ತೊಂದ್ ಕಡೆ ಮನೆಮಗ ದರ್ಶನ್ ಗೈರಾಗಿರೋದು ಚರ್ಚೆಗೆ ಗ್ರಾಸವಾಗಿದೆ.