ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಕೋಟಿಗೊಬ್ಬ3 ಭರ್ಜರಿ ಕಲೆಕ್ಷನ್‌

Public TV
1 Min Read
Kotigobba 3 4

ಬೆಂಗಳೂರು: ಸುದೀಪ್‌, ಆಶಿಕಾ ರಂಗನಾಥ್‌ ಅಭಿನಯದ ಕೋಟಿಗೊಬ್ಬ 3 ಬಿಡುಗಡೆಯಾದ ನಾಲ್ಕು ದಿನದಲ್ಲಿ 40.5 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಸ್ವತ: ಸುದೀಪ್‌ ಅವರೇ ಈ ಸಿಹಿಸುದ್ದಿಯನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಚೀಯರ್ಸ್‌ ಟೀಂ ಕೆ3 ಎಂದು ಬರೆದು ಸಂತಸ ಹಂಚಿಕೊಂಡಿದ್ದಾರೆ.

ಒಂದು ದಿನ ತಡವಾಗಿ ರಿಲೀಸ್‌ ಆದರೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಅ.14 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಚಿತ್ರ ಬಿಡುಗಡೆ ರದ್ದಾಗಿತ್ತು. ಇದರಿಂದಾಗಿ ನಮಗೆ 7-8 ಕೋಟಿ ನಷ್ಟವಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಆಕ್ರೋಶ ವ್ಯಕ್ತಪಡಿಸಿದ್ದರು. ಕೋವಿಡ್‌ 19 ಬಳಿಕ ಜನರು ಥಿಯೇಟರ್‌ ಕಡೆ ಬರುತ್ತಿರುವುದು ಸ್ಯಾಂಡಲ್‌ವುಡ್‌ ಮಂದಿಗೆ ಸಂತಸ ನೀಡಿದೆ. ಇದನ್ನೂ ಓದಿ: ಸುದೀಪ್ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅಪ್ಪ, ಅಮ್ಮನಿಗೆ ಸಾನ್ವಿ ಹೇಳಿದ್ದೇನು?

ಪಬ್ಲಿಕ್‌ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ಸುದೀಪ್‌, 25 ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದು ಏನು ಮಾಡಿದ್ರಿ ಎಂದು ಕೇಳಿದರೆ ಜನರ ಪ್ರೀತಿ ಸಂಪಾದಿಸಿದ್ದೇನೆ ಅಂತ ಹೇಳಬಹುದು. ಸಿನಿಮಾ ಎಲ್ಲರಿಗೂ ಬೇಕು. ಊಟದಲ್ಲಿ ಕೂದಲು ಬಿದ್ದಿರುತ್ತೆ. ಆದರೆ ಆ ಕೂದಲನ್ನು ಬದಿಗಿರಿಸಿ ನಾವು ಊಟ ತಿನ್ನಬೇಕೇ ಹೊರತು ಊಟವನ್ನು ಎಸೆಯಬಾರದು ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *