ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು ಎಂದು ಕಾಯುತ್ತೀರುವ ಅಭಿಮಾನಿಗಳಿಗೆ ಒಂದು ಸುಳಿವು ಸಿಕ್ಕಿದೆ.
Advertisement
ಕಾಲಿವುಡ್ ಖ್ಯಾತ ನಿರ್ದೇಶರಕಾದ ವೆಂಕಟ್ ಪ್ರಭು ಇತ್ತೀಚೆಗೆ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ವೆಂಕಟ್ ಅವರಿಗೆ ಕಿಚ್ಚ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಕಿಚ್ಚನ ಮುಂದಿನ ಸಿನಿಮಾ ಯಾವುದು ಎನ್ನುವ ಸುಳಿವು ಅಭಿಮಾನಿಗಳಿ ಸಿಕ್ಕಂತಿದೆ.
Advertisement
Whatta wonderful hospitality!! Thank q chief @KicchaSudeep !! U r an amazing cook!! Looking forward for our next;)) advance happy birthday!! pic.twitter.com/bArafom1fM
— venkat prabhu (@vp_offl) August 24, 2021
Advertisement
ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ವೆಂಕಟ್ ಪ್ರಭು ಅವರು ಸುದೀಪ್ ಜೊತೆ ಇರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಅವರು ನೀಡಿರುವ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ. ಎಂಥ ಅದ್ಭುತ ಆತಿಥ್ಯ. ಧನ್ಯವಾದಗಳು ಸುದೀಪ್ ಅವರೇ. ನೀವು ಅತ್ಯುತ್ತಮ ಬಾಣಸಿಗ. ನಮ್ಮ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದೇನೆ. ಮುಂಚಿತವಾಗಿಯೇ ಹುಟ್ಟುಹಬ್ಬದ ಶುಭಾಶಯಗಳು ಎಂದು ವೆಂಕಟ್ ಪ್ರಭು ಟ್ವೀಟ್ ಮಾಡಿ ಕೆಲವು ಫೋಟೋವನ್ನು ಹಂಚಿಕೊಂಡಿದ್ದಾರೆ.
Advertisement
ಸೆ.2ರಂದು ಸುದೀಪ್ ಅವರ ಬರ್ತ್ ಡೇ. ಅಂದು ಅನೇಕ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ಬಹಿರಂಗ ಆಗುವ ನಿರೀಕ್ಷೆ ಇದೆ. ಸುದೀಪ್ ಮತ್ತು ವೆಂಕಟ್ ಪ್ರಭು ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗೆ ಅಂದು ನಿಖರ ಉತ್ತರ ಸಿಗಲಿದೆ.