ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಕಿಚ್ಚ

Public TV
2 Min Read
Kiccha Sudeep Max Pre Release Chitradurga 1

ಚಿತ್ರದುರ್ಗ: ಕನ್ನಡ ಚಿತ್ರರಂಗದಲ್ಲಿ (Kannada Film Industry) ಸದಾ ಒಗ್ಗಟ್ಟು ಹೀಗೆ ಇರಲಿ ಎಂದು ಬಯಸೋನು ನಾನು ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಒಗ್ಗಟ್ಟಿನ ಮಂತ್ರ ಜಪಿಸಿದರು.

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ‘ಮ್ಯಾಕ್ಸ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಅದ್ಧೂರಿಯಾಗಿ ನಡೆಯಿತು. ಈ ವೇಳೆ ನಗರದ ಜಗದ್ಗುರು ಜಯದೇವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರ ದುರ್ಗದ ಸಹಸ್ರಾರು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ವಲಸೆ ಹೆಚ್ಚಲಿದೆ – ನಾರಾಯಣಮೂರ್ತಿ ಆತಂಕ

Kiccha Sudeep Max Pre Release Chitradurga

ಹುಚ್ಚ ಸಿನಿಮಾದಿಂದ ಪ್ರಾರಂಭವಾದ ನಟ ಸುದೀಪ್ ಹಾಗೂ ಚಿತ್ರದುರ್ಗದೊಂದಿಗಿನ ಅವರ ನಂಟಿನ ವಿಶೇಷ ವೀಡಿಯೋವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಇದೇ ವೇಳೆ ಚಿತ್ರದುರ್ಗದಲ್ಲಿ ಸುದೀಪ್ ಅವರ ‘ಮ್ಯಾಕ್ಸ್’ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ – ಕಾರ್ಯಕರ್ತರನ್ನು ಕಂಡು ಸಿ.ಟಿ ರವಿ ಭಾವುಕ

ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಕಿಚ್ಚ, ಈ ಹಿಂದೆ ದುರ್ಗಕ್ಕೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಒಬ್ಬನೇ ಬಂದಿಲ್ಲ. ಈಗ ಕುಟುಂಬ ಸಮೇತ ಬಂದಿದ್ದೇನೆ. ಹಾಗೆಯೇ ಚಿತ್ರದುರ್ಗಕ್ಕೆ ಪ್ರತಿಸಲ ಬರುವಾಗಲೂ ಬಹಳ ಸಂತೋಷವಾಗುತ್ತದೆ. ಹುಚ್ಚ ಸಿನಿಮಾ ಯಾರೂ ಮರೆಯಲು ಸಾಧ್ಯವಿಲ್ಲ. ಅಂಥದ್ದೊಂದು ಪ್ರೀತಿಯನ್ನು ಚಿತ್ರದುರ್ಗ ಕೊಟ್ಟಿದೆ ಎಂದು ಸ್ಮರಿಸಿದರು. ಇದನ್ನೂ ಓದಿ: ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ಗೆ ಕೋರ್ಟ್‌ ಸಮನ್ಸ್‌

Max Pre Release Event Chitradurga

ಜೊತೆಗೆ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಇರೋದನ್ನು ನೋಡೋನು ನಾನು. ನಮ್ಮಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿವೆ. ಹೀಗಾಗಿ ನೀವೆಲ್ಲರೂ ಹೊಸ ಪ್ರತಿಭೆಗಳಿಗೆ ಸಪೋರ್ಟ್ ಮಾಡಬೇಕು ಎಂದರು. ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್‌ಗೆ ಮತ್ತೆ ದೆಹಲಿ ಟ್ಯಾಬ್ಲೋ ತಿರಸ್ಕಾರ – ಆಪ್‌, ಬಿಜೆಪಿ ನಡುವೆ ವಾಗ್ವಾದ

ಈ ಕಾರ್ಯಕ್ರಮದಲ್ಲಿ ಸುದೀಪ್ ಪತ್ನಿ ಪ್ರಿಯಾ ಸುದೀಪ್, ಮಗಳು ಸಾನ್ವಿ, ಅಕ್ಕನ ಮಗ ಸಂಚಿತ್ ಕೂಡಾ ಭಾಗವಹಿಸಿದ್ದರು. ಇವರೊಂದಿಗೆ ನಾಯಕ ನಟರಾದ ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ನಿರ್ದೇಶಕರಾದ ಎ.ಪಿ.ಅರ್ಜುನ್, ರೋಹಿತ್ ಪದಕಿ, ಅನೂಪ್ ಭಂಡಾರಿ, ಶ್ರೇಯಸ್ ಮಂಜು, ನಿರೂಪ್ ಭಂಡಾರಿ ಮತ್ತಿತರರು ಭಾಗವಹಿಸಿದ್ದರು. ಇದನ್ನೂ ಓದಿ: ಮಂಡ್ಯ| ಮೂರು ದಿನಗಳ ಅಕ್ಷರ ಜಾತ್ರೆಗೆ ತೆರೆ

ನಟ ಯುವ ರಾಜ್‌ಕುಮಾರ್ ಹಾಗು ಡಾಲಿ ಧನಂಜಯ ಕೂಡ ಸುದೀಪ್ ಅವರ ಮೇಲೆ ಅವರ ಅಭಿಮಾನಿಗಳು ತೋರಿದ ಪ್ರೀತಿ ಹಾಗೂ ಅಭಿಮಾನಕ್ಕೆ ಫುಲ್ ಫಿದಾ ಆದರು. ಸುದೀಪ್ ಅವರ ಒಗ್ಗಟ್ಟಿನ ಗುಣವನ್ನು ಶ್ಲಾಘಿಸಿದರು. ಇದನ್ನೂ ಓದಿ: ಉಪನ್ಯಾಸಕನ ಮೇಲೆ ವಿದ್ಯಾರ್ಥಿ, ಪೋಷಕರಿಂದ ಹಲ್ಲೆ – ದೂರು ದಾಖಲು

Share This Article