ಹಾವೇರಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಹೀಗಾಗಿ ಹೈವೋಲ್ಟೇಜ್ ಕ್ಷೇತ್ರವಾದ ಸಿಎಂ ಬಸವರಾಜ ಬೊಮ್ಮಾಯಿಯ (Basavaraj Bommai) ಶಿಗ್ಗಾಂವಿ (Shiggaavi) ಕ್ಷೇತ್ರಕ್ಕೆ ನಟ ಕಿಚ್ಚ ಸುದೀಪ್ (Sudeep) ಆಗಮಿಸಲಿದ್ದಾರೆ. ಸುದೀಪ್ ಆಗಮನ ಬೊಮ್ಮಾಯಿಗೆ ಬಲವನ್ನು ತಂದುಕೊಡಲಿದೆ.
ಶಿಗ್ಗಾಂವಿ ಪಟ್ಟಣದ ನಗರದ ಪ್ರಮುಖ ಬೀದಿಗಳಲ್ಲಿ ಕಿಚ್ಚ ಸುದೀಪ್ 1 ಗಂಟೆ 15 ನಿಮಿಷಗಳ ಕಾಲ ರೋಡ್ ಶೋ (Road Show) ನಡೆಸಲಿದ್ದಾರೆ. ಬೆಳಗ್ಗೆ 10:45ಕ್ಕೆ ಹುಬ್ಬಳ್ಳಿಯಿಂದ ಶಿಗ್ಗಾಂವಿ ಹೆಲಿಪ್ಯಾಡ್‌ಗೆ ಆಗಮಿಸಿ, 11 ಗಂಟೆಗೆ ಬೊಮ್ಮಾಯಿ ಪರ ಬೃಹತ್ ರೋಡ್ ಶೋದಲ್ಲಿ ಕಿಚ್ಚ ಸುದೀಪ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗವಹಿಸಲಿದ್ದಾರೆ.
Advertisement
Advertisement
ಶಿಗ್ಗಾಂವಿ ಪಟ್ಟಣದ ಸಂತೆಮೈದಾನದಿಂದ ಬೃಹತ್ ರೋಡ್ ಶೋ ಪ್ರಾರಂಭ ಆಗಲಿದೆ. ಚೆನ್ನಮ್ಮ ವೃತ್ತ, ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ತಾಲೂಕು ಕ್ರೀಡಾಂಗಣವರೆಗೆ ಸುಮಾರು 2 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. 12:15ಕ್ಕೆ ಶಿಗ್ಗಾಂವಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯಲಿದೆ. 2023 ರ ಚುನಾವಣೆಯಲ್ಲಿ ಬೊಮ್ಮಾಯಿ ಹೇಳಿದವರಿಗೆ ಬೆಂಬಲಿಸುತ್ತೇನೆ ಎಂದು ಹೇಳಿದ್ದ ಬಳಿಕ ಇಂದು ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಸುದೀಪ್ ಧುಮುಕಲಿದ್ದಾರೆ.
Advertisement
Advertisement
ಸುದೀಪ್ ಪ್ರಚಾರದಿಂದ ಬೊಮ್ಮಾಯಿಗೆ ಯಾವ ರೀತಿ ಲಾಭ?
* ಹೆಸರಾಂತ ನಟನ ನೋಡಲು ಸಾಗರೋಪಾದಿಯಲ್ಲಿ ಸೇರಲಿರುವ ಜನರು.
* ಅದ್ದೂರಿ ರೋಡ್ ಶೋಗೆ ಸ್ಟಾರ್ ಪ್ರಚಾರಕನಿಂದ ಮೆರಗು.
* ಸುದೀಪ್ ರೋಡ್ ಶೋದಿಂದ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿ.
* ಕಿಚ್ಚನ ಪ್ರಚಾರದಿಂದ ಜಾತಿ ಲೆಕ್ಕಾಚಾರದಲ್ಲೂ ಮತಬುಟ್ಟಿ ತುಂಬುವ ನಿರೀಕ್ಷೆ.
* ವಾಲ್ಮೀಕಿ ಸಮಾಜಕ್ಕೆ ಸೇರಿದ ಸುದೀಪ್ ಪ್ರಚಾರದಿಂದ ವಾಲ್ಮೀಕಿ ಮತಗಳು ಬೊಮ್ಮಾಯಿ ಕಡೆ ವಾಲುವ ನಿರೀಕ್ಷೆ. ಇದನ್ನೂ ಓದಿ: ಕೈ ಅಭ್ಯರ್ಥಿಯ ಬಿ ಫಾರಂಗೆ ತಡೆ – ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ?
ಬೊಮ್ಮಾಯಿ ಕ್ಷೇತ್ರದಲ್ಲಿ ನಟ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಲಿದ್ದಾರೆ. ವಾಲ್ಮೀಕಿ ಸಮುದಾಯದ ಮತ ಹಾಗೂ ಅಭಿಮಾನಿಗಳ ವೋಟ್ ಬಿಜೆಪಿ ಪರ ವಾಲುತ್ತದೋ ಇಲ್ಲವೋ ಅನ್ನೋದು ಕಾದು ನೋಡಬೇಕಾಗಿದೆ. ನಟ ಸುದೀಪ್ ಪ್ರಚಾರದಿಂದ ಹೀಗೆ ನೂರೆಂಟು ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿ ನಡೆದಿದೆ. ಇದರಿಂದ ಬೊಮ್ಮಾಯಿ ಗೆಲುವಿಗೆ ಬಹಳಷ್ಟು ಸಹಕಾರಿ ಆಗಲಿದೆ. ಇದನ್ನೂ ಓದಿ: ಎನ್‌ಸಿಪಿ ಲೋಗೋ ತೆಗೆದ ಅಜಿತ್ ಪವಾರ್ – ಮಹಾ ಬಿಜೆಪಿ ಜತೆ ಮೈತ್ರಿಗೆ 40 ಶಾಸಕರ ಸಮ್ಮತಿ?