– ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ
ಬೆಂಗಳೂರು: ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿರೋ ಕಿಚ್ಚ ಸುದೀಪ್ ಅವರಿಗೆ ಇಂದು 45ನೇ ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ಜೆಪಿ ನಗರದ ನಿವಾಸದ ಬಳಿ ಸಾವಿರಾರು ಅಭಿಮಾನಿಗಳ ಹರ್ಷೋದ್ಗಾರ ಕೂಗಿದ್ದಾರೆ.
ಜೆ.ಪಿನಗರ ಮನೆಯಲ್ಲಿ ಸುದೀಪ್ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸುತ್ತಾರೆ ಎಂದು ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು ಭಾವಿಸಿದ್ದರು. ಆದರೆ ಅಭಿಮಾನಿಗಳ ಬಳಿ ಬಂದ ಸುದೀಪ್ 10 ನಿಮಿಷ ಕೈಬೀಸಿ ಮನೆ ಒಳಗೆ ಹೋದವರು ಹೊರಗೆ ಬರಲೇ ಇಲ್ಲ. ಇದರಿಂದ ಸಾವಿರಾರು ಜನ ಅಸಮಾಧಾನಗೊಂಡರು. ಇದನ್ನೂ ಓದಿ: ಕಿಚ್ಚ ಸುದೀಪ್ ವೈರಲ್ ಫೋಟೋದ ರಹಸ್ಯ ಇಲ್ಲಿದೆ
Advertisement
Advertisement
ಈ ವೇಳೆ ಉಂಟಾದ ನೂಕುನುಗ್ಗಲನ್ನ ನಿಂಯಂತ್ರಿಸಲು ಸುಬ್ರಹ್ಮಣ್ಯಪುರ ಪೊಲೀಸರು ಹರಸಾಹಸ ಪಟ್ಟಿದ್ದರು. ಯಾವಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ನಿಯಂತ್ರಿಸಲಾಗದ ಸ್ಥಿತಿ ನಿರ್ಮಾಣವಾದ್ದರಿಂದ ಗುಂಪು ಚದುರಿಸಲು ಪೊಲೀಸರು ಲಘಲಾಠಿ ಪ್ರಹಾರ ನಡೆಸಿದ್ದಾರೆ. ಇದೇ ವೇಳೆ ಮೂರ್ನಾಲ್ಕು ಜನ ಅಭಿಮಾನಿಗಳು ನೆಲಕ್ಕುರುಳಿದ್ದು, ಘಟನೆಯಲ್ಲಿ ಒಬ್ಬ ಅಭಿಮಾನಿಯ ತಲೆಗೆ ರಕ್ತಗಾಯವಾಗಿದೆ. ನೂಕುನುಗ್ಗಲಿನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಮುರಿಯಲಾಗಿತ್ತು. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಸೈರಾ ಚಿತ್ರದಲ್ಲಿನ ಸುದೀಪ್ ಲುಕ್ ರಿವೀಲ್
Advertisement
Advertisement
ನೆಚ್ಚಿನ ನಟ ಬರುತ್ತಾರೆ, ಅವರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಬೇಕು ಎಂದು ಬಂದಿದ್ದ ಸಾವಿರಾರು ಅಭಿಮಾನಿಗಳು ಬರಿಗೈಯಲ್ಲಿ ಪೊಲೀಸರ ಏಟು ತಿಂದು ವಾಪಸ್ಸಾದರು. ಈ ಹಿಂದೆಯೇ ಕಿಚ್ಚ ಸುದೀಪ್ ಕಳೆದ ವರ್ಷ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಗೂಗಲ್ ಪ್ಲಸ್ ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಆದರೆ ಈ ಬಾರಿ ತಮ್ಮ ಆಸೋಸಿಯೇಟ್ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಕಿಚ್ಚ ಸುದೀಪ್ ಹೇಳಿದ್ದರು.
ಕಳೆದ ವರ್ಷ ಸುದೀಪ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿರಲಿಲ್ಲ. ಆದರೆ ಈ ವರ್ಷ ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗೆ ಮೀಸಲಿಟ್ಟಿದ್ದರು. ಆದರೆ ಬರ್ತ್ ಡೇ ವಿಚಾರವಾಗಿ ಅಭಿಮಾನಿಗಳಿಗೆ ಒಂದಷ್ಟು ಷರತ್ತುಗಳನ್ನು ವಿಧಿಸಿದ್ದರು. ಅದರ ಪ್ರಕಾರ ಶುಭ ಹಾರೈಸಲು ಬರುವ ಯಾವ ಅಭಿಮಾನಿಗಳೂ ಹಾರ ತುರಾಯಿ, ಕೇಕು, ಹೂ ಮುಂತಾದವುಗಳನ್ನು ತರುವಂತಿಲ್ಲ. ಅದಕ್ಕೆ ಖರ್ಚು ಮಾಡುವ ಕಾಸನ್ನು ಸಮಾಜಮುಖಿ ಕೆಲಸಕ್ಕೇ ಬಳಸಬೇಕು. ಶುಭಾಶಯ ತಿಳಿಸಿ ಅಷ್ಟೇ ಸಾಕು ಎಂದು ಸುದೀಪ್ ಮನವಿ ಮಾಡಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv