ದೊಡ್ಮನೆಯ ಆಟ ಈಗ 2 ವಾರ ಕಳೆದಿದೆ. ಮೊದಲ ವಾರ ಸ್ನೇಕ್ ಶ್ಯಾಮ್ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ. 2ನೇ ವಾರದ ಎಲಿಮಿನೇಷನ್ ಬಿಸಿ ಮನೆಮಂದಿಗೆ ತಟ್ಟಿದೆ. ಇದರ ಮಧ್ಯೆ ಕಿಚ್ಚನ ಪಂಚಾಯಿತಿ ಎಪಿಸೋಡ್‌ನಲ್ಲಿ ಸುದೀಪ್ ಅವರು ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಮನೆಯ ಸದಸ್ಯರನ್ನು ಭೇಟಿಯಾಗುತ್ತಲೇ, ನೀವು ನೀವೇ ಡಿಸ್ಕಸ್ ಮಾಡಿಕೊಂಡು ಇಬ್ಬರನ್ನು ನಾಮಿನೇಟ್ ಮಾಡಿ ಎಂದರು. ಅದಕ್ಕೆ ಡ್ರೋನ್ ಪ್ರತಾಪ್ ಸೇರಿದಂತೆ ಕೆಲ ಹೆಸರುಗಳನ್ನು ಫೈನಲ್ ಮಾಡಲಾಯಿತು.
Advertisement
ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಸ್ಪರ್ಧಿಗಳಿಗೆ ಸಖತ್ ಆಗಿಯೇ ಬೆಂಡೆತ್ತಿದ್ದಾರೆ. ನೀವಿಲ್ಲಿ ಚಪ್ಪಾಳೆ ಹೊಡೆಯೋಕೆ ಬಂದ್ರಾ ಅಂತ ಖಡಕ್ ಆಗಿ ಮಾತನಾಡಿದ್ದಾರೆ. ಮನೆಯ ಸದಸ್ಯರು ನಾಮಿನೇಟ್ ಮಾಡಿದ ನಂತರ ಸೋಫಾ ಮೇಲೆ ವಿನಯ್ ಗೌಡ ಮತ್ತು ಕಾರ್ತಿಕ್ ಮಹೇಶ್ ಅವರನ್ನು ಬಿಟ್ಟು ಮಿಕ್ಕವರು ಕೂರಬಾರದು ಎಂದು ಸುದೀಪ್ (Sudeep) ಆದೇಶಿಸಿದರು. ನಂತರ ಎಲ್ಲರಿಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಕಾರಣ, ಮಂಗಳವಾರದ ಸಂಚಿಕೆಯಲ್ಲಿ ಮನೆಯಲ್ಲಿ ಇಬ್ಬರನ್ನು ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಬೇಕು ಎಂದು ಹೇಳಿದಾಗ, ಮನೆಯ ಸದಸ್ಯರು 20 ಸೆಕೆಂಡ್ ಕೂಡ ಯೋಚಿಸದೇ ಕಾರ್ತಿಕ್ ಮತ್ತು ವಿನಯ್ ಹೆಸರನ್ನು ಹೇಳಿದ್ದರು. ಇದು ಸುದೀಪ್‌ಗೆ ಕೋಪ ತರಿಸಿದೆ. ಇದನ್ನೂ ಓದಿ:ಸುದೀಪ್‌ಗೆ ನಾಯಕಿಯಾದ ‘ಕೆಜಿಎಫ್’ ಬ್ಯೂಟಿ ಶ್ರೀನಿಧಿ ಶೆಟ್ಟಿ
Advertisement
Advertisement
ಈ ಮನೆಯನ್ನು ರಕ್ಷಕ್‌ನಂತಹ (Rakshak Bullet) ಚಿಕ್ಕ ಹುಡುಗನ ಕ್ಯಾಪ್ಟನ್‌ಶಿಪ್‌ನಲ್ಲಿ ನಡೆಸಲು ನೀವು ರೆಡಿ ಇದ್ದೀರಿ. ಆದರೆ ಒಬ್ಬ ಹೆಣ್ಣಿನ ಮೇಲೆ ನಿಮಗೆ ನಂಬಿಕೆ ಇಲ್ಲ. ಈಶಾನಿ (Eshani) ನೀವು ಏನಕ್ಕೆ ಇದ್ದೀರಾ ಮನೆಯೊಳಗೆ? ಈ ವೇದಿಕೆ ಮೇಲೆ ನಿಂತಾಗ, ಡ್ಯಾನ್ಸ್ ಮಾಡಿದ್ರಿ, ಕಾನ್ಫಿಡೆನ್ಸ್ ಅಲ್ಲಿ ಮಾತನಾಡಿದ್ರಿ, ಹೊರಗಡೆ ಒಬ್ಬರ ಅವಕಾಶವನ್ನು ಕಿತ್ತುಕೊಂಡು ನೀವು ಒಳಗೆ ಹೋದ್ರಿ. ನೀವಿಲ್ಲ ಇದ್ದಿದ್ದರೆ ಇನ್ನೊಬ್ಬರು ಯಾರಾದರೂ ಹೋಗಿರುತ್ತಿದ್ದರು ಎಂದು ಸುದೀಪ್ ಹೇಳಿದರು.
Advertisement
ಬಿಗ್ ಬಾಸ್ (Bigg Boss Kannada) ಒಂದು ಫಿಸಿಕಲ್ ಟಾಸ್ಕ್‌ಗಳನ್ನು ಮಾಡುವಂತಹ ಶೋ. ಬಿಗ್ ಬಾಸ್ ನಿಮ್ಮಿಂದ ಇದು ಸಾಧ್ಯ ಎಂದು ನಂಬಿಕೆ ಇಟ್ಟು ಮನೆಯೊಳಗೆ ಮಹಿಳೆಯರನ್ನು ಕಳಿಸ್ತಾರೆ. ಆದರೆ ನಿಮಗೆ ನಿಮ್ಮ ಮೇಲೆ ನಂಬಿಕೆ ಇಲ್ವಾ? ಈ ಪ್ರಶ್ನೆಯನ್ನು ನಾನು ಲೇಡಿಸ್‌ಗೆ ಕೇಳ್ತಾ ಇದ್ದೇನೆ. ನಿಮಗೆ ಗೆಲ್ಲಬೇಕು ಅಂತ ಹಠ ಇದಿಯೋ, ಇಲ್ವೋ ಅಂತ ಡೌಟ್ ಆಗ್ತಾ ಇದೆ. ನೀವಿಲ್ಲಿ ಚಪ್ಪಾಳೆ ಹೊಡೆಯೋಕೆ ಬಂದಿದ್ದೀರಾ? ಅದನ್ನಂತೂ ಎಲ್ರೂ ತುಂಬ ಚೆನ್ನಾಗಿ ಮಾಡ್ತಾ ಇದ್ದೀರಾ. 9 ಸೀಸನ್‌ನಲ್ಲಿ ಒಬ್ಬರು ಶ್ರುತಿ ಅವರನ್ನು ಬಿಟ್ಟರೆ ಬೇರೆ ಯಾರೂ ಲೇಡಿಸ್ ಗೆದ್ದಿಲ್ಲ. ಯಾಕೆ ಅಂದ್ರೆ ನಿಮಗೆ ಗೆಲ್ಲಬೇಕು ಅಂತ ಅನ್ನಿಸ್ತಾ ಇಲ್ಲ ಎಂದು ಸುದೀಪ್ ಹೇಳಿದರು.
ಎಲ್ರೂ ಏನ್ ಮಾಡಬೇಕು ಅಂತ ಇಲ್ಲಿಗೆ ಬಂದಿದ್ದೀರಿ? ನಾನು ನಿಮಗೆ ಎರಡು ಚಾಯ್ಸ್ ಕೊಡ್ತಿನಿ. ಯಾರಿಗೆ ಹಠ ಇಲ್ಲ, ಯಾರಿಗೆ ಸಿಕ್ಕ ಅವಕಾಶವನ್ನು ಹಾಳು ಮಾಡ್ಕೊಂಡು ಮನೆಗೆ ಹೋಗಬೇಕು ಅಂತ ಆಸೆ ಇದೆಯೋ ಕೈ ಎತ್ತಿ, ಈ ಕ್ಷಣವೇ ನಾನು ಬಾಗಿಲು ತೆರೆಸುತ್ತೇನೆ ಎಂದು ಬಿಗ್ ಬಾಸ್ ಮನೆಯ ಮೇನ್ ಡೋರ್ ಅನ್ನು ಸುದೀಪ್ ತೆರೆಸಿದರು. ಇಷ್ಟು ಸೀಸನ್‌ಗಳಲ್ಲಿ ಮೊದಲ ಬಾರಿಗೆ ತಮಗಿದ್ದ ಅಧಿಕಾರ ಬಳಸಿಕೊಂಡು, ಬಾಗಿಲು ತೆರೆಸಿ, ಮನೆಯೊಳಗೆ ಇರುವವರಿಗೆ, ಯಾರಿಗಾದರೂ ಇಷ್ಟವಿದ್ದರೆ ಹೋಗಬಹುದು ಎಂದು ನೇರವಾಗಿ ಹೇಳಿದರು.
ಈ ವಾರ ನಾನು ಮನೆಯೊಳಗೆ ನೋಡಿದ್ದು ಇಷ್ಟ ಆಗಿಲ್ಲ. ಬಿಗ್ ಬಾಸ್ ಮನೆಯೊಳಗೆ ಗೆಲ್ಲುವುದಕ್ಕೆ ಬಂದಿರುವ ನೀವು, ಯಾವುದೇ ಡಿಸ್ಕಸ್ ಕೂಡ ಮಾಡದೇ ಇಬ್ಬರ ಹೆಸರನ್ನು ಹೇಳ್ತೀರಾ. ನಿಮ್ಮ ಕರಿಯರ್ ಬಗ್ಗೆ ನಿಮ್ಮ ಯೋಚನೆ ಇಲ್ವಾ? ನಾನ್ಯಾಕೆ ಕ್ಯಾಪ್ಟನ್ ಆಗಬಾರದು ಅಂತ ನಿಮಗೆ ಅನ್ನಿಸಲಿಲ್ವಾ? ಯುದ್ಧಕ್ಕೆ ಇಳಿದ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದಾರೂ ಗೆಲ್ಲಿ. ಹೇಗಿರಬೇಕು ಅನ್ನೋದು ನಿಮಗೆ ಬಿಟ್ಟಿದ್ದು. ಆದರೆ ಈ ರೀತಿ ಮಾತ್ರ ಇರಬೇಡಿ ಎಂದು ಖಡಕ್ ವಾರ್ನಿಂಗ್ ಕೊಟ್ಟರು ಕಿಚ್ಚ.