ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ (Kiara Advani) ಅವರು ‘ಸತ್ಯಪ್ರೇಮ್ ಕಿ ಕಥಾ’ (Sathyaprem Ki Katha) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಹೀಗಿರುವಾಗ ಸಿನಿಮಾದಲ್ಲಿನ ರೊಮ್ಯಾನ್ಸ್ ಸೀನ್‌ಗಳಿಗೆ ಟ್ರೋಲ್ ಆಗಿರೋದರ ಬಗ್ಗೆ ನಟಿ ಮೌನಮುರಿದಿದ್ದಾರೆ. ಮದುವೆಯಾದ್ಮೇಲೆ ನಟಿ ಹೀರೋ ಜೊತೆ ರೊಮ್ಯಾನ್ಸ್ ಮಾಡಿದ್ರೆ ಜನರ ದೃಷ್ಟಿಕೋನದ ಬಗ್ಗೆ ಕಿಯಾರಾ ಮಾತನಾಡಿದ್ದಾರೆ. ಈ ವೇಳೆ ಸಿದ್ಧಾರ್ಥ್ ಏನಂದ್ರು? ಎಂದು ನಟಿ ಮುಕ್ತವಾಗಿ ಮಾತನಾಡಿದ್ದಾರೆ.
ಕಾರ್ತಿಕ್ ಆರ್ಯನ್ (Karthik Aryan) ಜೊತೆ ‘ಭೂಲ್ ಭುಲೈಯಾ 2′ ಚಿತ್ರದಲ್ಲಿ ಕಿಯಾರಾ ನಾಯಕಿಯಾಗಿ ನಟಿಸಿದ್ದರು. ಇಬ್ಬರ ಜೋಡಿ ತೆರೆಯ ಮೇಲೆ ಕಮಾಲ್ ಮಾಡಿತ್ತು. ಈ ಚಿತ್ರ 2022ರ ಹಿಟ್ ಲಿಸ್ಟ್ ಸೇರಿತ್ತು. ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾದಲ್ಲಿ ಕಾರ್ತಿಕ್-ಕಿಯಾರಾ ಜೋಡಿ ನೋಡಿ ಖುಷಿಪಟ್ಟಿದ್ದ ಫ್ಯಾನ್ಸ್‌ಗೆ ʼಸತ್ಯಪ್ರೇಮ್ ಕಿ ಕಥಾ’ ಸಿನಿಮಾ ಮೂಲಕ ಫುಲ್ ಟ್ರೀಟ್ ಸಿಕ್ಕಿದೆ. ಇದನ್ನೂ ಓದಿ:ಸುದೀಪ್ ಮೇಲಿನ ಆರೋಪ: ಬಹಿರಂಗವಾಗಿ ದಾಖಲೆ ಕೊಡಲ್ಲ ಎಂದ ಕುಮಾರ್
ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಅವರನ್ನು ಮದುವೆಯಾದ ನಂತರ ಕಿಯಾರಾ ಅವರಿಗೆ ‘ಸತ್ಯಪ್ರೇಮ್ ಕಿ ಕಥಾ’ ಮೊದಲ ಚಿತ್ರ. ಆದರೆ ಮದುವೆಯಾದ (Wedding) ಮೇಲೂ ಬೇರೊಬ್ಬ ನಟನ ಜೊತೆ ರೊಮಾನ್ಸ್ ಮಾಡಿರುವುದಕ್ಕೆ ಕಿಯಾರಾ ಸಖತ್ ಟ್ರೋಲ್ ಆಗಿದ್ದರು. ಇದರಿಂದ ಕಿಯಾರಾ ನೊಂದುಕೊಂಡಿದ್ದರು. ನೆಗೆಟಿವ್ ಟ್ರೋಲ್‌ನಿಂದ ಹೊರಬರಲು ಪತಿ ಸಿದ್ಧಾರ್ಥ್ ಬೆಂಬಲ ಹೇಗಿತ್ತು ಎಂದು ನಟಿ ತಿಳಿಸಿದ್ದಾರೆ.
ನಾನು ಈ ಟ್ರೋಲ್‌ನಿಂದ ತುಂಬಾ ನೊಂದಿದ್ದೆ. ಜೊತೆಗೆ ಕೆಟ್ಟ ಕೆಟ್ಟ ಕಾಮೆಂಟ್‌ಗಳಿಂದ ಸಿದ್ಧಾರ್ಥ್ ಹೇಗೆ ರಿಯಾಕ್ಟ್ ಮಾಡುತ್ತಾರೆ ಎನ್ನುವ ಬಗ್ಗೆ ಭಯವಿತ್ತು. ಇದು ನಿಜವಾಗಿಯೂ ನನ್ನ ಮೇಲೆ ಪರಿಣಾಮ ಬೀರಿತು. ಆದರೆ ನನ್ನ ಅದೃಷ್ಟ, ಈ ಟ್ರೋಲ್‌ಗಳಿಂದ ನಾನು ತಲೆಕೆಡಿಸಿಕೊಳ್ಳಬಾರದು ಎಂದು ಪತಿ ಸಿದ್ಧಾಥ್ ಮನವರಿಕೆ ಮಾಡಿದರು. ಇಂಥ ಟ್ರೋಲ್‌ಗಳು ಸದಾ ಇರುತ್ತದೆ. ಈ ರೀತಿಯ ನೆಗೆಟಿವ್ ಟ್ರೋಲ್‌ಗಳಿಗೆ ನೀನು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಾದರೆ, ಮನೆಯಲ್ಲಿ ಕುಳಿತು ಅಳುವುದನ್ನು ಬಿಟ್ಟರೆ ಮತ್ತೇನೂ ಮಾಡಲು ಆಗುವುದಿಲ್ಲ. ಆದ್ದರಿಂದ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಪತಿಯ ಬೆಂಬಲದ ಬಗ್ಗೆ ಕಿಯಾರಾ ಹೇಳಿದ್ದಾರೆ. ನಾವು ಮದುವೆಯಾಗಿರೋದು ಕೆಲವರಿಗೆ ಇಷ್ಟವಾಗದೇ ಇರಬಹುದು. ಅಂತಹವರು ಈ ರೀತಿ ಮಾಡುತ್ತಾರೆ ಎಂದು ಅಂದು ಪತಿಯ ಬೆಂಬಲದ ಬಗ್ಗೆ ನಟಿ ಖುಷಿಯಿಂದ ಹಂಚಿಕೊಂಡಿದ್ದಾರೆ.