ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್‍ನ ಚಿಕ್ಕದೊಂದು ಟೀಸರ್ ರಿಲೀಸ್ ಆಗಿತ್ತು. ಈ ಟೀಸರ್ ಬರೀ ಕರ್ನಾಟಕದಲ್ಲದೇ ತಮಿಳುನಾಡಿನಾದ್ಯಂತ ಸುದ್ದಿಯಾಗಿದ್ದು ಅಲ್ಲೂ ಚಿತ್ರಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ ಕರ್ನಾಟಕನಲ್ಲಿ ತಲ್ಲಣ ಎಬ್ಬಿಸೋದು ಸಾಮಾನ್ಯ. ಆದರೆ ಹೊರರಾಜ್ಯದಲ್ಲೂ ಸಂಭ್ರಮಿಸುವಂತೆ ಮಾಡುತ್ತೆ ಎಂದರೆ ಅದೆಷ್ಟು ನಿರೀಕ್ಷೆ ಹುಟ್ಟಿಸಿರಬಹುದು. ಪರಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ರಾರಾಜಿಸೋದು ನೋಡಿದ್ದೇವೆ. ಆದರೆ ಪಕ್ಕದ ರಾಜ್ಯದಲ್ಲಿ ಅದೂ ಟೀಸರ್ ಒಂದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗೋದನ್ನು ನೋಡುವ ಭಾಗ್ಯ ಕನ್ನಡಿಗರದ್ದಾಗಿದೆ.
Advertisement
Advertisement
ತಮಿಳುನಾಡಿನಲ್ಲಿ ಕನ್ನಡ ಚಿತ್ರವೊಂದನ್ನು ಇಷ್ಟರ ಮಟ್ಟಿಗೆ ಪ್ರೀತಿಸುತ್ತಿರುವುದು ಉತ್ತಮ ಬೆಳವಣಿಗೆ. ಕೆಜಿಎಫ್ ತಮಿಳಿನಲ್ಲೂ ರಿಲೀಸ್ ಆಗುತ್ತಿರೋದರಿಂದ ಚಿತ್ರದ ಮೇಲೆ ಕಾಲಿವುಡ್ ಚಿತ್ರಪ್ರೇಮಿಗಳು ಆರಾಮಾಗಿ ನಿರೀಕ್ಷೆ ಇಟ್ಟುಕೊಳ್ಳಬಹುದು. ಒಂದ್ ಸಿನಿಮಾ ರಿಲೀಸ್ ಆದಮೇಲೆ ಹೊರರಾಜ್ಯದಲ್ಲೂ ಸಂಭ್ರಮಿಸೋದನ್ನು ನೋಡಿದ್ದೀವಿ. ಆದರೆ ಟೀಸರ್‍ಗೆ ಕ್ಲೀನ್ ಬೋಲ್ಡ್ ಆಗಿದ್ದು ಹೊಸದು.
Advertisement
70, 80 ರ ದಶಕವನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯ ಸುವರ್ಣಯುಗ ಎಂದು ಕರೆಯಲಾಗುತ್ತಿತ್ತು. ಆ ಕಾಲ ಮತ್ತೆ ಮರುಕಳಿಸುತ್ತಾ ಎನ್ನುವ ಸೂಚನೆ ಈ ವರ್ಷ ಸೂಚಿಸುತ್ತಿದೆ. ಕೆಜಿಎಫ್ ಚಿತ್ರವೊಂದೇ ಅಲ್ಲದೆ ಕುರುಕ್ಷೇತ್ರ, ದಿ ವಿಲನ್ ಚಿತ್ರಗಳೂ ಪರಭಾಷಿಗರನ್ನು ಸ್ಯಾಂಡಲ್‍ವುಡ್ ನತ್ತ ಆಕರ್ಷಿಸುತ್ತಿದೆ.