ದೇಶಕ್ಕಾಗಿ ಮತ ಚಲಾವಣೆ ಮಾಡಬೇಕು: ಯಶ್‌ ಕರೆ

Public TV
1 Min Read
yash 1 1

ನ್ಯಾಷನಲ್ ಸ್ಟಾರ್ ಯಶ್ (Actor Yash) ಸದ್ಯ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ಹೊಸಕೆರೆಹಳ್ಳಿಯಲ್ಲಿ ಯಶ್ ಮತ ಚಲಾಯಿಸಿದ್ದಾರೆ. ದೇಶಕ್ಕಾಗಿ ಮತದಾನ ಮಾಡಿ ಎಂದು ಯೂತ್ಸ್‌ಗೆ ನಟ ಕರೆ ನೀಡಿದ್ದಾರೆ. ಇದನ್ನೂ ಓದಿ:ವೋಟ್ ಮಾಡದೇ ಬ್ಲೇಮ್ ಮಾಡಬೇಡಿ: ನಟಿ ರಚಿತಾ ರಾಮ್

Yash 2

ಮತದಾನ ಮಾಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ವೋಟ್ ಮಾಡುವುದು ನಮ್ಮ ಕರ್ತವ್ಯ. ನಾವು ವೋಟ್ ಮಾಡಲೇಬೇಕು. ಯಾವಾಗಿನಿಂದ ವೋಟ್ ಮಾಡುವುದಕ್ಕೆ ಅವಕಾಶ ಸಿಗುತ್ತೋ ಆಗಿಂದಲೇ ಮತದಾನ ಮಾಡುವುದನ್ನು ಅಭ್ಯಾಸ ಮಾಡಕೊಳ್ಳಬೇಕು ಎಂದು ಯಶ್ ಮಾತನಾಡಿದ್ದಾರೆ.

yash

ಪ್ರತಿ ಹಂತದಲ್ಲೂ ನಿರ್ಧಾರ ತೆಗೆದುಕೊಂಡು ಮತದಾನಕ್ಕೆ ಮುಂದಾಗಬೇಕು. ಕಳೆದ ಬಾರಿಗಿಂತ ಈ ಬಾರಿ ವೋಟ್ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ಎಲ್ಲರ ಅಭಿಪ್ರಾಯಕ್ಕೂ ಪ್ರಜಾಪ್ರಭುತ್ವದಲ್ಲಿ ಬೆಲೆ ಇರಬೇಕು ಎಂದು ಯಶ್‌ ಮಾತನಾಡಿದ್ದಾರೆ.

ಇಂದು ಭಾರತ ಒಳ್ಳೆಯ ಸ್ಥಾನದಲ್ಲಿದೆ. ಇದನ್ನು ಉಪಯೋಗಿಸಿಕೊಂಡು ನಾವು ಮುಂದಕ್ಕೆ ಸಾಗಬೇಕು ಎಂದು ಯಶ್ ಮಾತನಾಡಿದ್ದಾರೆ.

Share This Article