ಭೋಪಾಲ್: ಕೆಜಿಎಫ್ ಸಿನಿಮಾ ಹಾಗೂ ಜಾಲತಾಣದಲ್ಲಿ ಹಲವಾರು ಹತ್ಯೆಯ ವೀಡಿಯೋಗಳನ್ನು ನೋಡಿ ಸ್ಫೂರ್ತಿ ಪಡೆದಿದ್ದ ಯುವಕನೊಬ್ಬ ದಿಢೀರ್ ಫೇಮಸ್ ಆಗಬೇಕು ಅಂತಾ ನಾಲ್ವರು ಭದ್ರತಾ ಸಿಬ್ಬಂದಿಯನ್ನು ವಿವಿಧ ಸುತ್ತಿಗೆ, ರಾಡ್, ಕಲ್ಲಿನಿಂದ ಚಚ್ಚಿ ಕೊಂದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಶಿವಪ್ರಸಾದ್ (19) ನನ್ನು ಭೋಪಾಲ್ ಪೊಲೀಸರು ಬಂಧಿಸಿದ್ದಾರೆ. ಶಿವಪ್ರಸಾದ್ ದುರ್ವೆ ಎಂದು ಗುರುತಿಸಲಾಗಿದ್ದು, ಕೆಜಿಎಫ್ ಸಿನಿಮಾ ನಟನ ಮಾದರಿಯಲ್ಲಿ ಹೆಸರುವಾಸಿಯಾಗಲು ಈ ಕೃತ್ಯ ಎಸಗಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ 31 ಪ್ರಾಥಮಿಕ, ಹೈಸ್ಕೂಲ್ ಶಿಕ್ಷಕರಿಗೆ `ಉತ್ತಮ ಶಿಕ್ಷಕ’ ಪ್ರಶಸ್ತಿ – ಯಾವ ಜಿಲ್ಲೆಯ ಯಾರಿಗೆ ಪ್ರಶಸ್ತಿ?
Advertisement
ಸೆಕ್ಯುರಿಟಿ ಗಾರ್ಡ್ಗಳು ಮಲಗಿದ್ದ ಸಂದರ್ಭ ಶಿವಪ್ರಸಾದ್ ಹತ್ಯೆ ಮಾಡಿದ್ದಾನೆ. ಸಾಗರ ಜಿಲ್ಲೆಯಲ್ಲಿ ಮೂವರು ಮತ್ತು ಭೋಪಾಲ್‌ನಲ್ಲಿ ಒಬ್ಬರನ್ನು ಹತ್ಯೆ ಮಾಡಿದ್ದಾನೆ. ಈ ಪೈಕಿ ಒಂದು ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಆರೋಪಿಯು ಸೆಕ್ಯುರಿಟಿ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಕಲ್ಲಿನಿಂದ ಚಚ್ಚಿ ಭೀಕರವಾಗಿ ಕೊಂದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.
Advertisement
Advertisement
ಆರೋಪಿ ನಾಲ್ಕನೇ ಹತ್ಯೆಯನ್ನು ಭೋಪಾಲ್‌ನಲ್ಲಿ ನಡೆಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಲಾಗಿದೆ. ಹತ್ಯೆಯಾದ ಸೆಕ್ಯುರಿಟಿಯೊಬ್ಬರ ಮೊಬೈಲ್ ಕಸಿದಿದ್ದ ಆರೋಪಿ ಅದರ ಟವರ್ ಲೊಕೇಶನ್ ಮೂಲಕವೇ ಸಿಕ್ಕಿಬಿದ್ದಿದ್ದಾನೆ. ತನಿಖೆ ವೇಳೆ ನಾಲ್ಕೂ ಹತ್ಯೆಗಳನ್ನು ತಾನೇ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: 1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ
Advertisement
ಆರೋಪಿ ಶಿವಪ್ರಸಾದ್ ಸೆಕ್ಯೂರಿಟಿ ಗಾರ್ಡ್ಗಳನ್ನೇ ಹುಡುಕಿ ಕೊಲ್ಲುವ ಪ್ರೌವೃತ್ತಿ ಬೆಳೆಸಿಕೊಂಡಿದ್ದ, ಅಲ್ಲದೇ ಪೊಲೀಸ್ ಠಾಣೆ ಸಿಬ್ಬಂದಿಯನ್ನೂ ಕೊಲ್ಲೋದಕ್ಕೆ ಯೋಜಿಸಿದ್ದ ಎಂದು ಹೇಳಲಾಗಿದೆ.
ಶಿವಪ್ರಸಾದ್ ನಿನ್ನೆ ತಡರಾತ್ರಿ ಭದ್ರತಾ ಸಿಬ್ಬಂದಿಯಾಗಿದ್ದ ಸೋನು ವರ್ಮಾ (23) ಎಂಬ ಯುವಕನನ್ನು ಭೋಪಾಲ್‌ನಲ್ಲಿ ಮಾರ್ಬಲ್ ರಾಡ್‌ನಿಂದ ಹೊಡೆದು ಕೊಂದಿದ್ದಾನೆ. ಇದಕ್ಕೂ ಮುನ್ನ ಸಾಗರ್‌ನಲ್ಲಿ ಕಾರ್ಖಾನೆಯೊಂದರ ಭದ್ರತಾ ಸಿಬ್ಬಂದಿ ಕಲ್ಯಾಣ್ ಲೋಧಿ ಅವರನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಮರುದಿನ ರಾತ್ರಿಯೇ 60 ವರ್ಷದ ಕಾಲೇಜು ಭದ್ರತಾ ಸಿಬ್ಬಂದಿ ಶಂಬು ನಾರಾಯಣ ದುಬೆ ಅವರನ್ನ ಕಲ್ಲಿನಿಂದ ಚಚ್ಚಿ ಕೊಂದಿದ್ದಾನೆ. ಈ ಹತ್ಯೆಗಳು ಮಧ್ಯಪ್ರದೇಶದಲ್ಲಿ ಭಯೋತ್ಪಾದನೆಯ ಭೀತಿ ಹೆಚ್ಚಿಸಿದ್ದು, ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.