Connect with us

Cinema

ಹಳ್ಳಿ ಹೈದ ಬರೆದ ‘ಕೆಜಿಎಫ್’ ಹಾಡಿಗೆ ಜನ್ರು ಫುಲ್ ಫಿದಾ

Published

on

ಕೊಪ್ಪಳ: ಹಳ್ಳಿ ಹೈದ ಬರೆದ ‘ಕೆಜಿಎಫ್’ ಹಾಡಿಗೆ ಜನರು ಫುಲ್ ಆಗಿದ್ದಾರೆ. ಚಿತ್ರದ ಸೆಕೆಂಡ್ ಹಾಫ್ ಅಲ್ಲಿ ಬರುವ ಗೀತೆ ಜನರ ಮನಸ್ಸುನ್ನು ಕದ್ದಿದ್ದೆ. ಇದೀಗ ಕೆಜಿಎಫ್ ಚಿತ್ರದ ಈ ಹಾಡಿಗೆ ದೇಶದ್ಯಾದಂತ ಸಕತ್ ರೆಸ್ಪಾನ್ಸ್ ಸಿಗುತ್ತಿದೆ.

‘ಕೆಜಿಎಫ್’ ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್ ಇರುವ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡನ್ನು ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕನಿಸುತ್ತದೆ. ಅದಕ್ಕೆ ಕಾರಣ ಹಾಡಿನಲ್ಲಿ ಬರುವ ಆ ಪದಗಳು. ಪ್ರತಿ ಸಾಲಿನಲ್ಲೂ ಜನರನ್ನು ಮೈ ಜುಮ್ಮೆನ್ನಿಸುವ ಶಕ್ತಿ ಅದರಲ್ಲಿದೆ.

ಈ ಹಾಡು ಬರೆದವರು ಕಿನ್ನಾಳ ರಾಜು ಅಂತಾ. ಇವರು ನೋಡುವುದಕ್ಕೆ ತುಂಬಾನೇ ಸಿಂಪಲ್ ಆಗಿದ್ದು, ಇವರು ಮೂಲತಃ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದವರು. ಕೆಜಿಎಫ್ ಸಿನಿಮಾದ ಈ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ನಲ್ಲಿ ಲಕ್ಷಾಂತರ ವ್ಯೂವ್ಸ್ ಕಂಡು ದಾಖಲೆ ಸೃಷ್ಟಿ ಮಾಡಿತ್ತು. ಶುಕ್ರವಾರಷ್ಟೇ ಕೆಜಿಎಫ್ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಿದೆ. ಚಿತ್ರಕ್ಕೆ ಸಖತ್ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ.

ಕಿನ್ನಾಳ ರಾಜು ಅವರು ಶನಿವಾರ ಬೆಂಗಳೂರಿನಲ್ಲಿ ಚಿತ್ರ ವೀಕ್ಷಿಸಿದ ಬಳಿಕ ಕೊಪ್ಪಳದ ಶಾರದಾ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ನಮ್ಮ ಜನತೆ ಜೊತೆ ಚಿತ್ರ ನೋಡುವುದು ರೋಮಾಂಚನ ತಂದಿದೆ ಎಂದು ಕಿನ್ನಾಳ ರಾಜು ಅವರು ಹೇಳಿದ್ದಾರೆ.

ಕೆಜಿಎಫ್ ಚಿತ್ರದ ಸೆಂಕೆಡ್ ಹಾಫ್ ಅಲ್ಲಿ ಬರುವ ಈ ಗೀತೆ ಸಿನಿಮಾವನ್ನು ನೋಡುವರಿಗೆ ಒಂದು ರೀತಿಯ ರೋಮಾಂಚನದ ಅನುಭವ ನೀಡುತ್ತದೆ. ಒಂದು ಕ್ಷಣ ಕಣ್ಣಲ್ಲಿ ನೀರು ಬರವಂತೆ ಮಾಡುತ್ತೆ ಅಷ್ಟರ ಮಟ್ಟಿಗೆ ಕಿನ್ನಾಳ ರಾಜು ಅವರ ಈ ಗೀತೆಗೆ ಶಕ್ತಿ ಇದೆ. ಇದಕ್ಕೆ ಸಾಕ್ಷಿನೆ ಕಿನ್ನಾಳ ರಾಜು ಅವರು ಬರೆದ ಈ ಗೀತೆ ಸಿನಿಮಾ ರಿಲೀಸ್‍ಗೂ ಮುನ್ನ ಯೂಟ್ಯೂಬ್ ಅಲ್ಲಿ ಸಖತ್ ಸೌಂಡ್ ಮಾಡಿತ್ತು. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವ್ಯೂವ್ಸ್ ಪಡೆದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಕೂಡ ಆಗಿತ್ತು. ಇನ್ನೂ ಕಿನ್ನಾಳ ರಾಜು ಅವರ ಗೀತೆಗೆ ಕೊಪ್ಪಳ ಜನತೆ ಹೆಮ್ಮೆ ಪಡುತ್ತಿದ್ದಾರೆ. ಕಿನ್ನಾಳ ರಾಜು ಅವರು ನಮ್ಮ ಜಿಲ್ಲೆಯವರು ಅವರು ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಕೆಜಿಎಫ್ ಚಾಪ್ಟರ್ ಒನ್ ಅಲ್ಲಿ ತಮ್ಮ ಹಾಡಿನ ಮೂಲಕ ಕಮಾಲ್ ಮಾಡಿರುವ ಕಿನ್ನಾಳ ರಾಜು ಅವರು ಚಾಪ್ಟರ್-2 ಅಲ್ಲೂ ನನ್ನದೊಂದು ಹಾಡು ಇರುತ್ತೆ ಎಂದು ಹೇಳುವ ಮೂಲಕ ಜಿಲ್ಲೆಯ ಚಿತ್ರ ರಸಿಕರಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *