ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಈ ವರ್ಷದ ಸೂಪರ್ ಡೂಪರ್ ಸಿನಿಮಾವಾಗಿ ಹೊರಹೊಮ್ಮಿದೆ. ಕೋಟಿಗಟ್ಟಲೇ ಗಲ್ಲಾಪೆಟ್ಟಿಗೆಯಲ್ಲಿ ಲೂಟಿ ಮಾಡಿ, ಕೆಜಿಎಫ್ 2 ಅಗ್ರ ಸ್ಥಾನದಲ್ಲಿದೆ. ಈಗ ಹಿಂದಿ ಕಿರುತೆರೆಯಲ್ಲಿ ರಾಕಿಭಾಯ್ ಮಿಂಚಲು ಡೇಟ್ ಫಿಕ್ಸ್ ಆಗಿದೆ.
Advertisement
`ಕೆಜಿಎಫ್ 1′ ಮತ್ತು `ಕೆಜಿಎಫ್ 2′ ಚಿತ್ರದ ಮೂಲಕ ಯಶ್ ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಜಯಭೇರಿ ಬಾರಿಸಿದ್ದಾರೆ. ದೇಶ ವಿದೇಶದಲ್ಲೂ `ಕೆಜಿಎಫ್ 2′ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿತ್ರಮಂದಿರಲ್ಲಿ ಮೋಡಿ ಮಾಡಿದ್ದ ಯಶ್ (Yash) ಚಿತ್ರ ಈಗ ಕಿರುತೆರೆಯಲ್ಲೂ ಇತಿಹಾಸ ಸೃಷ್ಟಿಸಲು ರೆಡಿಯಾಗಿದೆ.
Advertisement
Advertisement
ತಾಯಿ ಮತ್ತು ಮಗನ ಸೆಂಟಿಮೆಂಟ್ ಜೊತೆ ರಗಡ್ ಲವ್ ಸ್ಟೋರಿ ಇದೆ. ರಾಕಿಭಾಯ್ ಖಡಕ್ ಆ್ಯಕ್ಷನ್‌ಗೆ ಈಗಾಗಲೇ ಸಿನಿರಸಿಕರು ಫಿದಾ ಆಗಿದ್ದಾರೆ. ಈಗ ಕಿರುತೆರೆಯಲ್ಲಿ ಮೊದಲ ಬಾರಿಗೆ `ಕೆಜಿಎಫ್ 2′ ಹಿಂದಿ ವರ್ಷನ್‌ನಲ್ಲಿ ಬರಲು ರೆಡಿಯಾಗಿದೆ. ಸೆಪ್ಟೆಂಬರ್ 18ಕ್ಕೆ ಹಿಂದಿಯ ಖಾಸಗಿ ಚಾನೆಲ್‌ನಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸಿ ಆಕ್ರೋಶ ಹೊರಹಾಕಿದ ಸಿಪಿಐ ಮುಖಂಡ
Advertisement
ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಮಿಂಚಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಜೊತೆ ಯಶ್ ಖಡಕ್ ಅಭಿನಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. ಈಗ ಹಿಂದಿ ಕಿರುತೆರೆಯಲ್ಲಿ ರಾಕಿಭಾಯ್ ಮಿಂಚಲು ಕೌಂಟ್ ಡೌನ್ ಶುರುವಾಗಿದೆ.