CinemaKarnatakaLatestMain PostSandalwood

‘ಬಿಗ್ ಬಾಸ್’ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸಿ ಆಕ್ರೋಶ ಹೊರಹಾಕಿದ ಸಿಪಿಐ ಮುಖಂಡ

ಬಿಗ್ ಬಾಸ್ (Bigg Boss) ಕುರಿತಾಗಿ ಅನೇಕರು ಈ ಹಿಂದೆಯೂ ಬೇಸರ ವ್ಯಕ್ತ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಪರ್ಧಿಗಳ ಆಯ್ಕೆಯ ಕುರಿತಾಗಿಯೂ ಟ್ರೋಲ್ ಮಾಡಲಾಗಿದೆ. ಆದರೆ, ಬಿಗ್ ಬಾಸ್ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸುವಂತಹ ಪ್ರಸಂಗಗಳು ನಡೆದಿರಲಿಲ್ಲ. ಇಂಥದ್ದೊಂದು ಘಟನೆಗೆ ತೆಲುಗು (Telugu) ಬಿಗ್ ಬಾಸ್ ಅಂಗಳದಲ್ಲಿ ನಡೆದಿದೆ. ಕಳೆದ ವಾರದಿಂದ ಶುರುವಾಗಿರುವ ತೆಲುಗು ಬಿಗ್ ಬಾಸ್ ಅನ್ನು ಆಂಧ್ರದ (Andhra Pradesh) ಸಿಪಿಐ (CPI) ಮುಖಂಡ ನಾರಾಯಣ್ ಅವರು ವೇಶ್ಯಾಗೃಹಕ್ಕೆ (Brothel House) ಹೋಲಿಸಿದ್ದಾರೆ.

ತೆಲುಗು ಬಿಗ್ ಬಾಸ್ ಅನ್ನು ನಾಗಾರ್ಜುನ ನಡೆಸಿಕೊಡುತ್ತಿದ್ದಾರೆ. ಅವರಿಗೂ ಹಲವು ಪ್ರಶ್ನೆಗಳನ್ನು ಮಾಡಿರುವ ನಾರಾಯಣ್ (Narayan), ‘ಕುಟುಂಬವಲ್ಲದ, ಅಣ್ಣ ತಮ್ಮ, ಅಕ್ಕ ತಂಗಿ, ಅಣ್ಣ ತಂಗಿ ಹೀಗೆ ಯಾವುದೂ ಅಲ್ಲದ, ಪಡ್ಡೆಗಳನ್ನು ತಂದು ಒಂದೇ ಮನೆಯಲ್ಲಿ ಕೂಡಿ ಹಾಕುತ್ತೀರಿ. ಅವರೇನೂ ಮಹಾ ಸಾಧಕರಲ್ಲ. ಅಂತವರು ಸಂಬಂಧವೇ ಇಲ್ಲದ ಮನೆಯಲ್ಲಿ ಒಂದಾದರೆ ಏನಾಗುತ್ತೆ ಹೇಳಿ? ನನಗೆ ಬಿಗ್ ಬಾಸ್ ಮನೆ ವೇಶ್ಯಾಗೃಹದಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ನಾಗಾರ್ಜುನ್ (Nagarjuna) ಅವರಿಗೆ ಪ್ರಶ್ನೆ ಕೇಳುತ್ತಾ, ‘ನಾಗಣ್ಣ ಬಿಗ್ ಬಾಸ್ ಮನೆಯಲ್ಲಿ ಮದುವೆಯಾದವರಿಗೆ ಲೈಸೆನ್ಸ್ ಕೊಟ್ಟಿದ್ದೀರಿ. ಏನೆಲ್ಲ ಮಾಡಬೇಕೋ ಅದಕ್ಕೆಲ್ಲ ವ್ಯವಸ್ಥೆ ಮಾಡಿದ್ದೀರಿ. ಶೋಭನಾ ರೂಮ್ ಕೂಡ ರೆಡಿಯಿದೆ. ಆದರೆ, ಮದುವೆ ಆಗದೇ ಇರೋರ ಕಥೆ ಏನು? ನೂರು ದಿನಗಳ ಕಾಲ ಅವರು ಏನು ಮಾಡಬೇಕು? ಎಂದು ಕೇಳಿದ್ದಾರೆ. ನಾರಾಯಣ್ ಅವರು ಮಾತನಾಡಿದ ವಿಡಿಯೋ ತೆಲುಗು ಕಿರುತೆರೆ ಜಗತ್ತಿನಲ್ಲಿ ಸಖತ್ ವೈರಲ್ ಆಗಿದೆ.

ಇಂತಹ ಅಸಹ್ಯಗಳನ್ನು ಒಟ್ಟು ಮಾಡಿ ಸಮಾಜದ ಮನಸ್ಥಿತಿಯನ್ನು ಹಾಳು ಮಾಡುತ್ತಿದ್ದೀರಿ. ಕೂಡಲೇ ಇಂತಹ ಶೋ ನಿಲ್ಲಿಸಬೇಕು ಎಂದು ಅವರು ಆಗ್ರಹ ಪಡಿಸಿದ್ದಾರೆ. ನಾರಾಯಣ್ ಅವರ ಈ ಮಾತಿಗೆ ಭಾರೀ ಬೆಂಬಲ ಕೂಡ ವ್ಯಕ್ತವಾಗಿದೆ. ಬಿಗ್ ಬಾಸ್ ಮನೆಯನ್ನು ಸ್ವಚ್ಚ ಮಾಡುವಂತಹ ಕೆಲಸಕ್ಕೆ ನಾರಾಯಣ್ ಕೈ ಹಾಕಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Live Tv

Leave a Reply

Your email address will not be published.

Back to top button