‘ಕೆಜಿಎಫ್‌’ ನಟಿಯ ಹಾಟ್‌ ಲುಕ್‌ಗೆ ಡೇರಿಂಗ್‌ ಬ್ಯೂಟಿ ಎಂದ ನೆಟ್ಟಿಗರು

Public TV
3 Min Read
roopa rayappa

‘ಕೆಜಿಎಫ್’ (KGF) ಚಿತ್ರದ ಮೂಲಕ ಚಿರಪರಿಚಿತರಾದ ನಟಿ ರೂಪಾ ರಾಯಪ್ಪ (Roopa Rayappa) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಹವಾ ಕ್ರಿಯೆಟ್ ಮಾಡುತ್ತಲೇ ಇರುತ್ತಾರೆ. ಈಗ ಮತ್ತೆ ಹೊಸ ಫೋಟೋಶೂಟ್ ಮೂಲಕ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ಒಳ ಉಡುಪಿನ ಫೋಟೋ ಶೇರ್ ಮಾಡುವ ಮೂಲಕ ರೂಪಾ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ.

roopa rayappa 1

ನೀಲಿ ಬಣ್ಣದ ಒಳ ಉಡುಪಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿಗೆ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ನೋಡ್ತಿದಂತೆ ನೆಟ್ಟಿಗರು ಹಾಲಿವುಡ್ ನಟಿಗೆ ಅನುಕರಣೆ ಮಾಡಿ ಕಾಮೆಂಟ್ ಹಾಕಿದ್ದಾರೆ. ಸಖತ್ ಹಾಟ್ ಆಗಿದ್ದೀರಾ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ನೆಗೆಟಿವ್‌ ಕಾಮೆಂಟ್‌ ಮತ್ತು ಟ್ರೋಲ್‌ಗೆ ತಲೆಕೆಡಿಸಿಕೊಳ್ಳದ ನಟಿಯ ನಡೆಗೆ ಡೇರಿಂಗ್‌ ಬ್ಯೂಟಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಇದನ್ನೂ ಓದಿ:ಮಾವನ ಮಗನ ಜೊತೆ ಮದುವೆ ಆಗ್ತಿಲ್ಲ ಗಾಯಕಿ ಮಂಗ್ಲಿ

roopa rayappa 2

ಸಿನಿಮಾಗಿಂತ ಹಾಟ್ ಫೋಟೋಗಳ ಮೂಲಕವೇ ಹಲ್‌ಚಲ್ ಎಬ್ಬಿಸಿರುವ ರೂಪಾ, ಕಳೆದ ಬಾರಿ ವಿವಿಧ ಭಂಗಿಗಳ ಫೋಟೋ ಹಂಚಿಕೊಂಡು ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ರೂಪಾ ಹಾಟ್ ಫೋಟೋ ಜೊತೆ ಟ್ರೋಲ್ ಮಾಡೋರಿಗೆ ಮನವಿ ಕೂಡ ಮಾಡಿದ್ದರು.

roopa rayappa 3

ನನ್ನ ಹಾಲಿವುಡ್ ಸಿನಿಮಾ ಕನಸಿನ ಬಗ್ಗೆ ಹೇಳುತ್ತಾ ಟ್ರೋಲರ್ಸ್‌ಗೆ ಒಂದು ಮನವಿ ಎಂದಿದ್ದಾರೆ. ನಾನು ಅಪ್ಲೋಡ್ ಮಾಡಿರುವ ಫೋಟೋಸ್‌ ಒಂದು ಪ್ರೊಫೆಷನಲ್ ಎನ್ವೀರಾಂನ್ಮೆಂಟ್‌ನಲ್ಲಿ ಮಾಡೆಲಿಂಗ್‌ಗಾಗಿ ತೆಗೆದಿದ್ದು, ಅವುಗಳನ್ನ ಅಪಹಾಸ್ಯ ಮಾಡಿ ನಮ್ಮ ಪ್ರಯತ್ನಗಳು ವ್ಯರ್ಥವೆಂದು ಅನಿಸುವಂತೆ ಮಾಡಬೇಡಿ.

ROOPA RAYAPPA 4

ಕೆಟ್ಟದಾಗಿ ಕಾಮೆಂಟ್ ಹಾಕುವುದಕ್ಕೆ ಒಂದು ನಿಮಿಷ ಸಾಕು. ನಮಗೆ ಅವುಗಳ ಪರಿಣಾಮದಿಂದ ಹೊರಬರಲು ಹೆಚ್ಚು ಸಮಯ ಬೇಕು. ಆದ್ದರಿಂದ ದಯವಿಟ್ಟು ಕಲೆಯ ಕೆಲಸವನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ರೂಪಾ ರಾಯಪ್ಪ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮನವಿ ಮಾಡಿದ್ದಾರೆ. ಒಟ್ನಲ್ಲಿ ಅವರ ಹಾಟ್ ಫೋಟೋಸ್ ಸಖತ್ ವೈರಲ್ ಆಗುತ್ತಿವೆ.

ROOPA RAYAPPA 3

ರೂಪಾ ರಾಯಪ್ಪ ಅವರು ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ದಿ ಜಡ್ಜ್‌ಮೆಂಟ್‌’ ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆಕೆ ಜೊತೆ ‘ಕಾಡ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ROOPA RAYAPPA 3 1

‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಜೊತೆ ರೂಪಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶ್ವೇತಾ ಶ್ರೀವಾತ್ಸವ್ ಜೊತೆ ಹೊಸ ಪ್ರಾಜೆಕ್ಟ್‌ನಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಹಿಂದಿ ವೆಬ್ ಸಿರೀಸ್‌ವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಹಿಂದಿ ಚಿತ್ರರಂಗಕ್ಕೂ ಪರಿಚಯವಾಗಲಿದ್ದಾರೆ. ಇದನ್ನೂ ಓದಿ:ನಿರ್ದೇಶನದ ಜೊತೆಗೆ ನಟನೆಗೂ ಸೈ ಎಂದ ಸತ್ಯಪ್ರಕಾಶ್

artist_3120_roopa-rayappa-photos-images-2023070807711300

ಒಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಯಶ್ (Yash) ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಲಕ್ ಬದಲಾಗಿದೆ. ಒಳ್ಳೆಯ ಪಾತ್ರಗಳು ಅವರನ್ನ ಅರಸಿ ಬರುತ್ತಿವೆ.

ನಮ್ರತಾ ಗೌಡ, ವರ್ಷ ಕಾವೇರಿ, ರಂಜನಿ ರಾಘವನ್, ರಕ್ಷಕ್ ಬುಲೆಟ್, ಸುನೀಲ್ ರಾವ್ ಸೇರಿದಂತೆ ಹಲವರ ಹೆಸರು ದೊಡ್ಮನೆ ಆಟಕ್ಕೆ ಬರುವ ಬಗ್ಗೆ ವೈರಲ್ ಆಗುತ್ತಿದೆ. ರೂಪಾ ರಾಯಪ್ಪ ಕೂಡ ದೊಡ್ಮನೆ ಆಟಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ದೊಡ್ಮನೆ ಆಟಕ್ಕೆ ರೂಪಾಗೆ ಆಫರ್ ಸಿಕ್ಕಿದ್ದು, ಒಪ್ಪಿ ಮನೆ ಒಳಗೆ ಹೋಗ್ತಾರಾ ಎಂದು ಕಾಯಬೇಕಿದೆ. ಅಕ್ಟೋಬರ್ 8ಕ್ಕೆ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಸೀಸನ್ 10ಕ್ಕೆ ಅದ್ದೂರಿ ಚಾಲನೆ ಸಿಗಲಿದೆ.

Share This Article