ಕನ್ನಡದ ಕೆಜಿಎಫ್ ನಟಿ ರೂಪಾ ರಾಯಪ್ಪ (Roopa Rayappa) ದಿನಕಳೆದಂತೆ ಮತ್ತಷ್ಟು ಹಾಟ್ ಆಗ್ತಿದ್ದಾರೆ. ಕಳೆದ ಬಾರಿ ಟೈಲರ್ ಲುಕ್ ಸಖತ್ ಗ್ಲ್ಯಾಮರಸ್ ಆಗಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ರು. ಈಗ ಬಿಗ್ ಬಾಸ್ ಸಾನ್ಯ ಅಯ್ಯರ್‌ಗೆ(Saanya Iyer) ನಟಿ ರೂಪಾ ರಾಯಪ್ಪ ಟಕ್ಕರ್ ಕೊಡ್ತಿದ್ದಾರೆ. ಈಗ ಇಲ್ಲಿ ಮೈ ತೋರಿಸೋಕು ಕಾಂಪಿಟೇಶನ್ ಶುರುವಾಗಿದೆ. ಸಾನ್ಯರನ್ನೇ ಹಿಂದಿಕಿದ್ದಾರೆ ನಟಿ ರೂಪ ರಾಯಪ್ಪ. ಹೊಸ ಫೋಟೋಶೂಟ್‌ನಲ್ಲಿ ರೂಪಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಯಶ್ (Yash) ನಟನೆಯ ‘ಕೆಜಿಎಫ್’ (KGF) ಸಿನಿಮಾದಲ್ಲಿ ಡಿ ಗ್ಲಾಮ್ ಲುಕ್‌ನಲ್ಲಿ ರೂಪಾ ರಾಯಪ್ಪ ಅವರು ಶಾಂತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಪುಟ್ಟ ಪಾತ್ರವಾಗಿದ್ದರು. ಶಾಂತಿ ರೋಲ್ ಅನ್ನ ಕೆಜಿಎಫ್ ಚಿತ್ರದ ಫ್ಯಾನ್ಸ್ ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಗ್ಲ್ಯಾಮರ್ ಇಲ್ಲದ ಪಾತ್ರದಲ್ಲಿ ನಟಿಸಿರೋ ರೂಪಾ ಇದೀಗ ಗ್ಲ್ಯಾಮರಸ್ ಆಗಿ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.
ʼಕೆಜಿಎಫ್ʼ ಶಾಂತಿ ರೋಲ್‌ನಲ್ಲಿ ನೋಡಿದ್ದ ಅಭಿಮಾನಿಗಳಿಗೆ ಈಗೀನ ರೂಪಾ ಹಾಟ್ ಲುಕ್ ನೋಡಿ ಕಳೆದು ಹೋಗಿದ್ದಾರೆ. ಇವ್ರು ಅವರೇನಾ ಅಂತಾ ಕೇಳ್ತಿದ್ದಾರೆ. ಅಷ್ಟರ ಮಟ್ಟಿಗೆ ರೂಪಾ ರಾಯಪ್ಪ ಬದಲಾದ ಅವತಾರದಲ್ಲಿ ಕಾಣಿಸಿಕೊಂಡಿರೋದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಕೆಲದಿನಗಳ ಹಿಂದೆ ಹಳದಿ ಬಣ್ಣದ ಬಿಕಿನಿ- ಶಾರ್ಟ್ ಸ್ಕರ್ಟ್ ಧರಿಸಿ, ಟೈಲರ್ ಲುಕ್‌ನಲ್ಲಿರೋ ಹಸಿಬಿಸಿ ಫೋಟೋಗಳನ್ನ ನಟಿ ಶೇರ್ ಮಾಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈಗ ಸಾನ್ಯಗಿಂತ ಬೋಲ್ಡ್ ಆಗಿ ರೂಪಾ ಫೋಟೋಶೂಟ್ ಮಾಡಿಸಿ ಪಡ್ಡೆಹುಡುಗರ ಕನಸಿನ ರಾಣಿ ಸದ್ದು ಮಾಡ್ತಿದ್ದಾರೆ. ಸಾನ್ಯ ಅಯ್ಯರ್ ಅವರು ಉತ್ತಮ ಅವಕಾಶಕ್ಕಾಗಿ ಬಿಕಿನಿ ಧರಿಸಿ, ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕೈಯಲ್ಲಿ ಫೋಟೋಶೂಟ್ ಮಾಡಿಸಿದ್ದರು. ಈಗ ಸಾನ್ಯಗೆ ಟಕ್ಕರ್ ಕೊಟ್ಟು ಹಾಟ್ ಹಾಟ್ ಆಗಿ ‘ಕೆಜಿಎಫ್’ ಖ್ಯಾತಿಯ ರೂಪಾ ಫೋಟೋ ಕ್ಲಿಕ್ಕಿಸಿದ್ದಾರೆ.
ನೀಲಿ ಬಣ್ಣ ಶರ್ಟ್ – ಶಾಟ್ಸ್ ಧರಿಸಿ ಕೊಂಚ ಎದೆ ಕಾಣುವಂತೆ ಮಸ್ತ್ ಆಗಿ ಕ್ಯಾಮೆರಾ ಕಣ್ಣಿಗೆ ರೂಪಾ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಚಸ್ಮಾ ಕೂಡ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ರೂಪಾ ರಾಯಪ್ಪ ಬಗೆ ಬಗೆಯ ಲುಕ್‌ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಜಯಶ್ರೀ
ನಟಿ ರೂಪಾ ರಾಯಪ್ಪ ಅವರು ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ದಿ ಜಡ್ಜ್‌ಮೆಂಟ್ʼ ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ (Diganth) ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಯಶ್ ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಲಕ್ ಬದಲಾಗಿದೆ. ಒಳ್ಳೆಯ ಪಾತ್ರಗಳು ಅವರನ್ನ ಅರಸಿ ಬರುತ್ತಿದೆ.