‘ಕೆಜಿಎಫ್’ (KGF) ನಟಿ ರೂಪಾ ರಾಯಪ್ಪ (Roopa Rayappa) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಈಗ ಮತ್ತೆ ಹಾಟ್ ಆಗಿ ರೂಪಾ ಕಾಣಿಸಿಕೊಂಡಿದ್ದಾರೆ. ನಟಿಯ ಹೊಸ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಲೈಟ್ ಬಣ್ಣದ ಔಟ್ ಫಿಟ್‌ನಲ್ಲಿ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಗ್ಲ್ಯಾಮರಸ್ ಲುಕ್‌ಗೆ ಅಭಿಮಾನಿಗಳು, ರೂಪಾ ರಾಯಪ್ಪ ಬೆಂಕಿ ಅವತಾರ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ಕ್ಯಾಮೆರಾಗೆ ಪೋಸ್ ಕೊಟ್ಟಿರೋ ಬೋಲ್ಡ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದೆ.
ಸಿನಿಮಾಗಿಂತ ಹಾಟ್ ಫೋಟೋಗಳ ಮೂಲಕವೇ ಹಲ್‌ಚಲ್ ಎಬ್ಬಿಸಿರುವ ರೂಪಾ, ಕಳೆದ ಬಾರಿ ವಿವಿಧ ಭಂಗಿಗಳ ಫೋಟೋ ಹಂಚಿಕೊಂಡು ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ರೂಪಾ ಹಾಟ್ ಫೋಟೋ ಜೊತೆ ಟ್ರೋಲ್ ಮಾಡೋರಿಗೆ ಮನವಿ ಕೂಡ ಮಾಡಿದ್ದರು.
ನನ್ನ ಹಾಲಿವುಡ್ (Hollywood) ಸಿನಿಮಾ ಕನಸಿನ ಬಗ್ಗೆ ಹೇಳುತ್ತಾ ಟ್ರೋಲರ್ಸ್‌ಗೆ ಒಂದು ಮನವಿ ಎಂದು ಬರೆದುಕೊಂಡಿದ್ದರು. ನಾನು ಅಪ್ಲೋಡ್ ಮಾಡಿರುವ ಫೋಟೋಸ್ ಒಂದು ಪ್ರೊಫೆಷನಲ್ ಎನ್ವೀರಾಂನ್ಮೆಂಟ್‌ನಲ್ಲಿ ಮಾಡೆಲಿಂಗ್‌ಗಾಗಿ ತೆಗೆದಿದ್ದು, ಅವುಗಳನ್ನ ಅಪಹಾಸ್ಯ ಮಾಡಿ ನಮ್ಮ ಪ್ರಯತ್ನಗಳು ವ್ಯರ್ಥವೆಂದು ಅನಿಸುವಂತೆ ಮಾಡಬೇಡಿ.
ಕೆಟ್ಟದಾಗಿ ಕಾಮೆಂಟ್ ಹಾಕುವುದಕ್ಕೆ ಒಂದು ನಿಮಿಷ ಸಾಕು. ನಮಗೆ ಅವುಗಳ ಪರಿಣಾಮದಿಂದ ಹೊರಬರಲು ಹೆಚ್ಚು ಸಮಯ ಬೇಕು. ಆದ್ದರಿಂದ ದಯವಿಟ್ಟು ಕಲೆಯ ಕೆಲಸವನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ರೂಪಾ ರಾಯಪ್ಪ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮನವಿ ಮಾಡಿದ್ದರು.
ರೂಪಾ ರಾಯಪ್ಪ ಅವರು ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ದಿ ಜಡ್ಜ್ಮೆಂಟ್’ (The Judgement) ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆಕೆ ಜೊತೆ ‘ಕಾಡ’ (Kada Film) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಜೊತೆ ರೂಪಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶ್ವೇತಾ ಶ್ರೀವಾತ್ಸವ್ ಜೊತೆ ಹೊಸ ಪ್ರಾಜೆಕ್ಟ್‌ನಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಹಿಂದಿ ವೆಬ್ ಸಿರೀಸ್‌ವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಹಿಂದಿ ಚಿತ್ರರಂಗಕ್ಕೂ ಪರಿಚಯವಾಗಲಿದ್ದಾರೆ.
ಒಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಯಶ್ (Yash) ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಲಕ್ ಬದಲಾಗಿದೆ. ಒಳ್ಳೆಯ ಪಾತ್ರಗಳು ಅವರನ್ನ ಅರಸಿ ಬರುತ್ತಿವೆ.