ಯಶ್ (Yash) ಕೊನೆಗೂ ಆ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ದಿವ್ಯ ದರ್ಶನ ನೀಡಲು ಸಜ್ಜಾಗಿದ್ದಾರೆ. ‘ಕಾಣೆಯಾಗಿದ್ದಾರೆ ಯಶ್’ ಹೀಗಂತ ಒದ್ದಾಡುತ್ತಿರುವ ಭಕ್ತಗಣಕ್ಕೆ ಉತ್ತರ ನೀಡಲು ಅಖಾಡ ಸಿದ್ದ ಮಾಡುತ್ತಿದ್ದಾರೆ. ಹಾಗಿದ್ದರೆ ಯಾವಾಗ ಯಶ್ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ? ಈಗ ಯಾವ ದೇಶದಲ್ಲಿದ್ದಾರೆ? ಇದೆಲ್ಲದರ ನಡುವೆ ಅವರನ್ನು ಕಾಡುತ್ತಿರುವ ಗೊಂದಲವೇನು? ಅದಕ್ಕೆ ಪರಿಹಾರ ಏನು ಹುಡುಕಿದ್ದಾರೆ? ಇಲ್ಲಿದೆ ಅಪ್‌ಡೇಟ್
Advertisement
ಕಾಣೆಯಾಗಿದ್ದಾರೆ ರಾಕಿಭಾಯ್ ಹೀಗಂತ ಕೆಲವು ದಿನಗಳ ಹಿಂದೆ ಪ್ರಕಟಣೆ ಹೊರಬಿದ್ದಿತ್ತು. ಆ ರೀತಿ ಹೇಳಿದ್ದು ಬೇರಾರೂ ಅಲ್ಲ. ಖುದ್ದು ಯಶ್ ಭಕ್ತಗಣ. ಇಷ್ಟು ವರ್ಷವಾದರೂ ಹೊಸ ಸಿನಿಮಾ ಬಗ್ಗೆ ಸಿಂಗಲ್ ಸುದ್ದಿ ಇಲ್ಲ. ಯಾವುದೇ ಅಪ್ ಡೇಟ್ ಇಲ್ಲ. ಎಲ್ಲ ಫ್ಯಾನ್ಸ್ ತಮ್ಮ ತಮ್ಮ ಹೀರೊ ಹೊಸ ಸಿನಿಮಾ ಸುದ್ದಿ ಹಾಕಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಅಪ್‌ಡೇಟ್ ಸುದ್ದಿ ಕೊಟ್ಟು ಕೇಕೆ ಹೊಡೆಯುತ್ತಿದ್ದಾರೆ. ನೀವೂ ಏನೂ ಹೊಸ ಹಾಕುತ್ತಿಲ್ಲ. ನಮ್ಮ ಎಮೋಷನ್ಸ್ ಜೊತೆ ಆಟ ಆಡಬೇಡಿ ಬಾಸ್. ನಾವೇನು ಮಾಡಬೇಕು ಹೇಳಿ ಎಂದು ಗೋಳಾಡಿದ್ದರು. ಅದಕ್ಕೆ ಉತ್ತರ ಕೊಡುವ ಸಮಯ ಬಂದಿದೆ ಎನ್ನುತ್ತಿದ್ದಾರೆ ಖುದ್ದು ಯಶ್. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್ ಫೇಸ್‌ಬುಕ್ ಅಕೌಂಟ್ ಹ್ಯಾಕ್
Advertisement
Advertisement
ಯು ಆರ್ ರೈಟ್, ಯಶ್ ಮೈ ಕೊಡವಿ ಎದ್ದು ನಿಂತಿದ್ದಾರೆ. ಎರಡು ವರ್ಷದಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೆ ಸಿದ್ಧತೆ ಅನ್ನೋದು ಸಣ್ಣ ಶಬ್ದವಾದೀತು. ಕಾರಣ ಅಷ್ಟೊಂದು ಇಂಚಿಂಚು ಮಾಹಿತಿ. ಸಣ್ಣ ಸಣ್ಣ ಡಿಟೇಲ್ಸ್, ಅಗುಳಿನಷ್ಟೂ ತಪ್ಪಾಗದ ಹೆಜ್ಜೆಯನ್ನು ಇಟ್ಟು ಕೊನೇ ಹಂತ ಬಂದು ಮುಟ್ಟಿದ್ದಾರೆ. ಕತೆ,ಚಿತ್ರಕತೆ, ಸಂಭಾಷಣೆ, ಕ್ಯಾಮೆರಾ, ಸಂಗೀತ, ಕಲಾ ನಿರ್ದೇಶನ ಮತ್ತು ಶೂಟಿಂಗ್ ಸ್ಥಳ, ಕಾಸ್ಟ್ಯೂಮ್ ಡಿಸೈನಿಂಗ್ ಒಂದೇ ಒಂದು ಗುಲಗಂಜಿ ತಪ್ಪಾಗದಂತೆ ಎಚ್ಚರ ವಹಿಸಿ ದೇವರಿಗೆ ತುಪ್ಪದ ದೀಪ ಹಚ್ಚಿದ್ದಾರೆ. ಜಗತ್ತಿನ ಹಾರೈಕೆ ಬೇಡಲು ನಿಮ್ಮ ಮುಂದೆ ಬರಲಿದ್ದಾರೆ.
Advertisement
ಹೊಸ ಸಿನಿಮಾಕ್ಕಾಗಿ ತಪಸ್ಸು ಮಾಡುತ್ತಿದ್ದಾರೆ ರಾಕಿಭಾಯ್. ಅದಕ್ಕೊಂದು ತಂಡ ಕಟ್ಟಿಕೊಂಡಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಕೆಲಸ ಒಪ್ಪಿಸಿದ್ದಾರೆ. ಯಾವುದೂ ಹಾದಿ ತಪ್ಪಬಾರದು. ಹಾಗೆ ನೋಡಿಕೊಂಡಿದ್ದಾರೆ. ಇದಕ್ಕೆ ಜೊತೆಯಾಗಿ ನಿಂತಿರುವುದು ನಿರ್ದೇಶಕಿ ಗೀತು ಮೋಹನ್‌ದಾಸ್ (Geethu Mohandas) ಮಲಯಾಳಂ ಮೂಲದ ನಿರ್ದೇಶಕಿಗೆ ಇದು ಮೊದಲ ಕಮರ್ಷಿಯಲ್ ಅಂಡ್ ಕನ್ನಡ ಕಮ್ ಪ್ಯಾನ್ ಇಂಡಿಯಾ ಸಿನಿಮಾ. ಇಬ್ಬರೂ ಹೇಗೆ ಸಿಕ್ಕರು. ಹೇಗೆ ಹೊಂದಿಕೊಂಡರು. ಹೇಗೆ ಇಂಥ ಮಹಾ ಯುದ್ಧಕ್ಕೆ ಕುದುರೆ ಏರಿದರು? ಎಲ್ಲವೂ ಸದ್ಯದಲ್ಲೇ ಹೊರಬೀಳಲಿದೆ. ಅದಕ್ಕೂ ಮುನ್ನ ಇನ್ನು ಮೂರು ನಾಲ್ಕು ವಾರಗಳಲ್ಲಿ ಯಶ್ (Yash) ಘೋಷಣೆ ಮಾಡೋದು ಶತಸಿದ್ಧ. ಇದನ್ನೂ ಓದಿ:ಚಾಮುಂಡಿ ತಾಯಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜಕುಮಾರ್
ಆಗಸ್ಟ್ ತಿಂಗಳಲ್ಲೇ ಅನೌನ್ಸ್ ಮಾಡುತ್ತಾರಾ? ಅಫ್‌ಕೋರ್ಸ್ ಎಸ್ ಇದು ಸತ್ಯ. ಎಲ್ಲ ಅಂದರೆ ಎಲ್ಲವೂ ಆಚೀಚೆ ಆಗದಂತೆ ಸಜ್ಜಾಗಿದೆ. ಅದು ಯಾವ ಮಟ್ಟಿಗೆ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ ಗೊತ್ತೆ? ಬಹುತೇಕ ಸಿನಿಮಾ ಮುಗಿಸಿದ್ದಾರೆ. ಅದನ್ನು ಶೂಟಿಂಗ್ ಮಾಡೋದೊಂದು ಬಾಕಿ. ಅದರ ಅರ್ಥ ಇಷ್ಟೇ. ಅಷ್ಟೊಂದು ಜತನದಿಂದ ಅಖಾಡ ರೆಡಿಯಾಗಿದೆ. ಯಾವುದನ್ನು ಎಲ್ಲಿ ಎಷ್ಟು ಹೇಗೆ? ಇಂಥ ಪ್ರತಿ ಪ್ರಶ್ನೆಗೆ ಕಾಗದದ ಮೇಲೆ ಉತ್ತರ ಬರೆದುಕೊಂಡಿದ್ದಾರೆ. ಅಂದುಕೊಂಡಿದ್ದನ್ನು ಚಿತ್ರೀಕರಣ ಮಾಡಬೇಕಷ್ಟೇ. ಅದೇನೂ ಸಣ್ಣ ಸವಾಲಲ್ಲ. ಆದರೆ ಇವರು ಮಾಡಿಕೊಂಡಿರುವ ತಯಾರಿ ಆ ಸವಾಲನ್ನು ಎಡಗೈಯಿಂದ ಸರಿಸುವಷ್ಟು ತಾಕತ್‌ವಾರ್ ಅಷ್ಟೇ ಉತ್ತರ.
ಈಗ ಒಂದೇ ಒಂದು ಪ್ರಶ್ನೆ ರಾಕಿಭಾಯ್‌ಗೆ ತಲೆ ತಿನ್ನುತ್ತಿದೆ. ನಿಗ್ಗಿನಿಗಿ ಸವಾಲು ಕಾಡುತ್ತಿದೆ. ಅದೇನು ಗೊತ್ತೆ? ಈ ಹೊಸ ಸಿನಿಮಾವನ್ನು ಯಾವ ರೀತಿ ಅನೌನ್ಸ್ ಮಾಡಬೇಕು? ಇದು ಸಹಜ ಆತಂಕ ಹಾಗೂ ಗೊಂದಲ. ಎಲ್ಲರೂ ಎಲ್ಲ ರೀತಿಯಲ್ಲಿ ಸಿನಿಮಾ ಘೋಷಣೆ ಮಾಡಿದ್ದಾರೆ. ಯುಟ್ಯೂಬ್, ಸಾರ್ವಜನಿಕ, ಕಾರ್ಯಕ್ರಮ ಅಥವಾ ಇನ್ನೇನೋ ಸಂವಹನದಿಂದ ಟೈಟಲ್ ಘೋಷಣೆ ಮಾಡಿದ್ದಾರೆ. ಕೆಜಿಎಫ್(KGF), ಸಲಾರ್ (Salaar), ಕಲ್ಕಿ ಹೀಗೆ ಒಬ್ಬೊಬ್ಬರು ಒಂದೊಂದು ದಾರಿ ಹಿಡಿದಿದ್ದಾರೆ. ಇದೇ ರೀತಿ ಮಾಡಬೇಕಾ ಅಥವಾ ಇದನ್ನು ಬಿಟ್ಟು ಇನ್ನೊಂದು ದಾರಿ ಹಿಡಿಯಬೇಕಾ? ಯಾವುದು ಹೆಚ್ಚು ಜನರಿಗೆ ಮುಟ್ಟಲು ಸಾಧ್ಯ? ಈ ಪ್ರಶ್ನೆಗಳನ್ನು ಹರವಿಕೊಂಡು ಕುಳಿತಿದ್ದಾರೆ ರಾಕಿಭಾಯ್.
ಇದಿಷ್ಟು ಸದ್ಯದ ಕಥನ ಹೂರಣ. ಬರೀ ಕನ್ನಡಿಗರು ಮಾತ್ರ ಅಲ್ಲ. ಇಡೀ ವಿಶ್ವವೇ ಯಶ್ ಮುಂದಿನ ನಡೆಯನ್ನು ಕುತೂಹಲದಿಂದ ಕಾಯುತ್ತಿದೆ. ಏನು ಮಾಡಲಿದ್ದಾರೆ? ಏನು ಮಾಡಬಹುದು? ಇಷ್ಟೆಲ್ಲ ಕಾಯಿಸಿ ಅದ್ಯಾವ ಊಟ ಬಡಿಸಬಹುದು? ಎಲ್ಲವೂ ಬರೀ ಪ್ರಶ್ನೆಗಳೇ. ಉತ್ತರ ಸಿಗಲು ಸಮಯ ಬೇಕು. ಆದರೆ ಒಂದು ಮಾತು ಸತ್ಯ. ಮನೆ ಕಟ್ಟಲು ಹೆಚ್ಚು ಸಮಯ ಬೇಕಾಗಲ್ಲ. ಆದರೆ ಅರಮನೆ ಕಟ್ಟಲು? ಬೇಕಪ್ಪಾ. ಬೇಕು ಎದ್ವಾತದ್ವಾ ಟೈಮು. ಅರಮನೆ ಅಂಗಳದಲ್ಲಿ ನಿಂತು ಹಬ್ಬ ಮಾಡಲು ಕಾಯುತ್ತಿದೆ ಭಕ್ತಗಣ. ಕಡ್ಡಿ ಗೀರಿ ಕೈಯಲ್ಲಿ ಹಿಡಿದುಕೊಂಡಿರಿ, ಬಂದೇ ಬಿಡ್ತಾರೆ ರಾಕಿಭಾಯ್. ಸರಪಟಾಕಿ ಹಿಡಿದುಕೊಂಡು ಹಚ್ಚಿದಾಗ ದೀಪಾವಳಿ ಪಕ್ಕಾ.