ಚಿತ್ರರಂಗದಲ್ಲಿ ಸದ್ಯ ಭಾರೀ ಸುದ್ದಿಯಾಗ್ತಿರುವ ವಿಚಾರ ಅಂದರೆ ಅನಂತ್ (Anant Ambani) ಮತ್ತು ರಾಧಿಕಾ (Radhika Merchant) ಅದ್ಧೂರಿ ಮದುವೆ ಮ್ಯಾಟರ್. ಈ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಹಾಗಾಗಿ ಹೆಚ್ಚುಚ್ಚು ಈ ವಿಚಾರ ಹೈಲೆಟ್ ಆಗ್ತಿದೆ. ಇದರ ನಡುವೆ ಯಶ್ (Yash) ಜೊತೆ ಜವಾನ್ ಡೈರೆಕ್ಟರ್ ಅಟ್ಲಿ ಮಾತುಕತೆ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಹೈಪ್ರೊಪೈಲ್ ಅತಿಥಿಗಳ ಪಟ್ಟಿಯಲ್ಲಿ ಇರುವ ಏಕೈಕ ಕನ್ನಡದ ನಟ ಯಶ್‌ಗೆ ಅಂಬಾನಿ ಮಗನ ಮದುವೆಗೆ ವಿಶೇಷವಾಗಿ ಆಮಂತ್ರಣ ನೀಡಿದ್ದು, ಪತ್ನಿ ರಾಧಿಕಾ ಪಂಡಿತ್ (Radhika Pandit) ಜೊತೆ ಯಶ್ ಹೊಸ ಲುಕ್‌ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:ದರ್ಶನ್ ಬಿಡುಗಡೆಗಾಗಿ ದೇವರ ಮೊರೆ ಹೋದ ಫ್ಯಾನ್ಸ್
- Advertisement
View this post on Instagram
- Advertisement
ಇದರ ನಡುವೆ ಯಶ್ ಮತ್ತು ‘ಜವಾನ್’ (Jawan) ನಿರ್ದೇಶಕ ಅಟ್ಲಿ (Director Atlee) ಕೆಲ ಸಮಯ ಒಟ್ಟಿಗೆ ಕುಳಿತು ಮಾತುಕತೆ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಒಟ್ನಲ್ಲಿ ಯಶ್ ಈ ಮಟ್ಟಿಗೆ ಬೆಳೆದಿರುವ ಪರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಇನ್ನೂ ಯಶ್ ‘ಟಾಕ್ಸಿಕ್’ (Toxic) ಸಿನಿಮಾ ಮತ್ತು ‘ರಾಮಾಯಣ’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ‘ಕೆಜಿಎಫ್ 2’ (KGF 2) ನಂತರದ ‘ಟಾಕ್ಸಿಕ್’ ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.