ಕೋಲಾರ: ಹಲವು ಅಡೆತಡೆಗಳ ನಡುವೆಯೇ ಕೆಜಿಎಫ್-2 ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಶೂಟಿಂಗ್ ಹಿನ್ನೆಲೆಯಲ್ಲಿ ಸೆಟ್ ಬಳಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಣೆ ಮಾಡಲಾಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಪ್ 2 ಶೂಟಿಂಗ್ ನಡ್ಯದಂತೆ ಈ ಹಿಂದೆ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಾಗಿತ್ತು. 2 ತಿಂಗಳಿನಿಂದ ಸ್ಥಗಿತಗೊಂಡಿದ್ದ ಶೂಟಿಂಗ್ ಸದ್ಯ ಮತ್ತೆ ಆರಂಭವಾಗಿದೆ. ದಕ್ಷಿಣ ಭಾರತದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಕೆಜಿಎಫ್ ಸಿನಿಮಾದ ಶೂಟಿಂಗ್‍ಗಾಗಿಯೇ ಕೋಲಾರ ಕೆಜಿಎಫ್ ಸೈನೈಡ್ ಗುಡ್ಡದ ಮೇಲೆ ವಿಶೇಷ ಸೆಟ್ ನಿರ್ಮಿಸಲಾಗಿದೆ. ಇದನ್ನೂ ಓದಿ: ದಕ್ಷಿಣ ಭಾರತದ ಸೆನ್ಸೇಷನ್ ಕೆಜಿಎಫ್-2ಗೆ ವಿಘ್ನಗಳ ಮೇಲೆ ವಿಘ್ನ
ಶೂಟಿಂಗ್ ಸ್ಥಗಿತಗೊಂಡಿದ್ದ ಕಾರಣದಿಂದ ಶೂಟಿಂಗ್‍ಗಾಗಿ ನಿರ್ಮಿಸಿದ್ದ ಸೆಟ್ ಭಾಗಶಃ ನಾಶವಾಗಿತ್ತು. ಆದರೆ ಸದ್ಯ ಎಲ್ಲ ಅಡೆತಡೆಗಳನ್ನು ಎದುರಿಸುತ್ತಿರುವ ಚಿತ್ರತಂಡ ಮತ್ತೆ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಸದ್ಯ ಶೂಟಿಂಗ್ ಸ್ಥಳಕ್ಕೆ ಸಾರ್ವಜನಿಕರು ಬಾರದಂತೆ ರಕ್ಷಣೆ ನೀಡಲಾಗುತ್ತಿದ್ದು, ಚಿತ್ರೀಕರಣ ಸ್ಥಳವನ್ನು ಬೇರೆಯವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿಯಲು ಕೂಡ ಅವಕಾಶ ನಿರಾಕರಿಸಲಾಗಿದೆ. ಚಿತ್ರತಂಡ ಕೆಲ ಯುವಕರನ್ನು ಈ ಕಾರ್ಯಕ್ಕೆ ನೇಮಿಸಿದೆ. ಅಲ್ಲದೇ ಚಿತ್ರೀಕರಣ ಆರಂಭವಾದ ಹಿನ್ನೆಲೆಯಲ್ಲಿ ಚಿತ್ರತಂಡ ಪೊಲೀಸ್ ಭದ್ರತೆಗೂ ಮನವಿ ಮಾಡಿದ್ದು, ಮನವಿಯ ಮೇರೆಗೆ ಎಸ್ ಪಿ ಪೊಲೀಸ್ ರಕ್ಷಣೆಯನ್ನು ನೀಡಿದ್ದಾರೆ.